ಭಾರತೀಯ ಸನಾತನ ದಿವ್ಯಾ ತೀದಿವ್ಯ ಕ್ಷೇತ್ರ ಉಡುಪಿಯಲ್ಲಿ ನವನೂತನ ಸಂಕೀರ್ತನ ಮಂದಿರ ಅಭಿರಾಮ ಧಾಮ” ಲೋಕಾರ್ಪಣೆಗೊಂಡಿದೆ.
ಬೆಂಗಳೂರಿನ ಹಿರಿಯ ಪತ್ರಕರ್ತರೂ , ಸಾಂಸ್ಕ್ರತಿಕ ಚಿಂತಕರೂ ಆದ ಡಾ. ಸುದರ್ಶನ ಭಾರತೀಯ ಉರುಫ್ ವೆಂಕಟ ವಿಠ್ಠಲ ಸುಗುಣದಾಸರು ತಮ್ಮ ಸುಪುತ್ರ ಸ್ವರಸಾಮ್ರಾಟ್ ವಿದ್ವಾನ್ ಅಭಿರಾಮ್ ಭರತವಂಶಿಯವರ ಸಂಗೀತ ಸಾಧನೆಯನ್ನು ಅಮರಗೊಳಿಸುವಲ್ಲಿ ಇದು ಮಹತ್ತರ ಹೆಜ್ಜೆ ಎಂದು ‘ಅಭಿರಾಮಧಾಮ’ವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿದ ಕಾಣಿಯೂರು ಮಠದ ಸ್ವಾಮೀಜಿ ಶ್ರೀ ವಿದ್ಯಾವಲ್ಲಭ ತೀರ್ಥರು ಆಶೀರ್ವದಿಸಿದರು. ಸುಮಾರು ಇನ್ನೂರು-ಮುನ್ನೂರು ಮಂದಿ ಭಗವದ್ಭಕ್ತರು, ಭಜನಾಕಾರರು ಈ ಸುಸಂದರ್ಭದಲ್ಲಿ ಪಾರಾಯಣ, ಭಜನೆಗಳಲ್ಲಿತೊಡಗಿಕೊಂಡರು.
ಸಮಾಜದ ಎಲ್ಲಾ ವರ್ಗದ 8 -18 ವರ್ಷದ ಮಕ್ಕಳಿಗೆ ಸಂಗೀತ -ನೃತ್ಯ, ಗಮಕ, ಭಜನೆ, ಯೋಗ, ಧ್ಯಾನ, ಗೀತಾಭಿಯಾನ ಸುಜ್ಞಾನ ದೊರಕಿಸಿ ಕೊಡುವುದೇ ಅಭಿರಾಮ ಧಾಮದ ಧ್ಯೇಯೋದ್ದೇಶ ಎಂದು ಸಂಸ್ಥಾಪಕ ಕಾರ್ಯದರ್ಶಿ ವಿದುಷಿ ಸುಶ್ಮಾ ಸುದರ್ಶನ್ ವಿವರಿಸಿದರು.
ಸಂಜೆಗೆ ನೂರಾರು ಭಕ್ತರಿಂದ ಶ್ರೀಕೃಷ್ಣ ನಾಮ ಸಂಕೀರ್ತನೆ ನಡೆಸಲಾಯಿತು ಹಾಗೂ ಕಾರ್ತೀಕ ಮಾಸದ ಶ್ರೀ ದಾಮೋದರ ಆರತಿಯನ್ನೂ ಬೆಳಗಲಾಯಿತು. ಉಡುಪಿಯ ಚಿಣ್ಣರಿಗೆ , ಯುವ ಜನತೆಗೆ ಸನಾತನ ಸಂಸ್ಕೃತಿಯನ್ನಪ್ಪಿ ಕೊಳ್ಳಲು ಗುಂಡಿಬೈಲಿನಲ್ಲಿರುವ ಸ್ವರಸಾಮ್ರಾಟ್ ಅಭಿರಾಮ್ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಸಹಾಯಕಾರೀಸಂಘಟನೆಯನ್ನು ಮಾಡುತ್ತೆಂದೂ ಅಭಿರಾಮ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಸುಗುಣದಾಸರು ತಿಳಿಸಿದರು