ಗುರು-ಶಿಷ್ಯರಿಂದ “ದ್ವಂದ್ವ ಪಿಟೀಲು ವಾದನ”
ಬೆಂಗಳೂರು: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಸ್ಥೆಯ ವಜ್ರ ಮಹೋತ್ಸವ ಸಂಭ್ರಮ 2024-25ರ ಪ್ರಯುಕ್ತ ಮಾರ್ಚ್ 16, ಶನಿವಾರ ಸಂಜೆ 6-00 ಗಂಟೆಗೆ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮ ಮಂದಿರದಲ್ಲಿ ವಿದ್ವಾನ್ ಶ್ರೀ ಎಸ್. ಶೇಷಗಿರಿರಾವ್ ಮತ್ತು ವಿದ್ವಾನ್ ಶ್ರೀ ಅನಿರುದ್ಧ ಭಾರಧ್ವಾಜ್ (ಗುರು-ಶಿಷ್ಯರು) ಇವರುಗಳಿಂದ “ದ್ವಂದ್ವ ಪಿಟೀಲು ವಾದನ” ಕಾರ್ಯಕ್ರಮ ಏರ್ಪಡಿಸಿದೆ.
ಸಹ-ವಾದ್ಯ ಸಹಕಾರ : ವಿದ್ವಾನ್ ಶ್ರೀ ಟಿ.ಎಸ್. ಚಂದ್ರಶೇಖರ್ (ಮೃದಂಗ), ವಿದ್ವಾನ್ ಶ್ರೀ ಬಿ.ಎಸ್ . ರಘುನಂದನ್ (ಘಟ).
“ಹರಿದಾಸ ವೈಭವ”
ಬೆಂಗಳೂರು: ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 428ನೇ ಜನ್ಮದಿನೋತ್ಸವದ ಪ್ರಯುಕ್ತ ಮಾರ್ಚ್ 16, ಶನಿವಾರ ಸಂಜೆ 6-30ಕ್ಕೆ ಶೇಷಾದ್ರಿಪುರಂ ಪ್ಲಾಟ್ ಫಾರಂ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮತಿ ಸುಷ್ಮಾ ಶ್ರೇಯಸ್ ಇವರಿಂದ ಹರಿದಾಸ ವೈಭವ” ಗಾಯನ ಕಾರ್ಯಕ್ರಮ. ವಾದ್ಯ ಸಹಕಾರ : ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಸರ್ವೋತ್ತಮ (ತಬಲಾ). ಸರ್ವರಿಗೂ ಆದರದ ಸುಸ್ವಾಗತ 1
ದಾಸರ ಪದಗಳ ರಸಧಾರೆ
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ ಪ್ರಯುಕ್ತ ಮಾರ್ಚ್ 16, ಶನಿವಾರ ಸಂಜೆ 7-30ಕ್ಕೆ ರಾಯಚೂರಿನ ವಿದ್ವಾನ್ ಶ್ರೀ ಸಿ.ಎನ್. ರಾಘವೇಂದ್ರ ಮತ್ತು ಸಂಗಡಿಗರಿಂದ “ದಾಸರ ಪದಗಳ ರಸಧಾರೆ” ಗಾಯನ ಕಾರ್ಯಕ್ರಮ.
ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಐದನೇ ಬಡಾವಣೆ, ಜಯನಗರ, ಬೆಂಗಳೂರು-560041