ದೇವತೆಗಳು ಕಾಶಿಯಲ್ಲಿ ದೀಪಾವಳಿ ಆಚರಿಸುವುದೇಕೆ?

ದೇವ ದೀಪಾವಳಿಯನ್ನು ದೇವತೆಗಳ ದೀಪಾವಳಿ ಎಂದು ಕರೆಯುವುದೇಕೆ? ಈ ವಿಶೇಷ ಸಂದರ್ಭದಲ್ಲಿವಾರಾಣಸಿ ಲಕ್ಷಾಂತರ ಹಣತೆಗಳ ಬೆಳಕಿನಿಂದ ಕಂಗೊಳಿಸುವುದೇಕೆ? ನವೆಂಬರ್‌24, 2026ರಂದು ಕಾರ್ತಿಕ ಪೂರ್ಣಿಮೆಯಂದು ದೇವ ದೀಪಾವಳಿಯನ್ನು ಆಚರಿಸಲಾಗುತ್ತದೆ. ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ಈ ದಿನವು ತ್ರಿಪುರಾಸುರನೆಂಬ ರಾಕ್ಷ ಸನನ್ನು ಶಿವನು ಸಂಹರಿಸಿದ ವಿಜಯದ ಸಂಕೇತವಾಗಿದೆ.

ಶಿವನ ಈ ವಿಜಯವನ್ನು ದೇವತೆಗಳೇ ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರೆಂಬ ಪ್ರತೀತಿ ಇದೆ. ಹೀಗಾಗಿ ದೇವ ದೀಪಾವಳಿಯು ಹಿಂದೂ ಪುರಾಣ ಮತ್ತು ಧಾರ್ಮಿಕ ಪರಂಪರೆಯಲ್ಲಿವಿಶೇಷ ಸ್ಥಾನ ಪಡೆದಿದೆ. ತ್ರಿಪುರಾರಿ ಶಿವನ ಪೌರಾಣಿಕ ಕಥೆಯಿಂದ ಹಿಡಿದು ದೀಪದಾನ, ವಾರಾಣಸಿಯ ಭವ್ಯ ಗಂಗಾ ಆರತಿಯವರೆಗೆ ಈ ಹಬ್ಬದ ಮಹತ್ವ ಹಲವು ಆಯಾಮಗಳನ್ನು ಒಳಗೊಂಡಿದೆ.
ದೇವ ದೀಪಾವಳಿಯನ್ನು ದೇವತೆಗಳ ದೀಪಾವಳಿ ಎನ್ನುವುದೇಕೆ?
ಕಾರ್ತಿಕ ಪೂರ್ಣಿಮೆಯಂದು ದೇವತೆಗಳು ಭೂಲೋಕಕ್ಕೆ ಆಗಮಿಸಿ, ತ್ರಿಪುರಾಸುರನ ಮೇಲೆ ಶಿವನು ಸಾಧಿಸಿದ ವಿಜಯವನ್ನು ಸಂಭ್ರಮಿಸುತ್ತಾರೆ ಎಂಬ ನಂಬಿಕೆಯಿದೆ. ಈ ಸಂದರ್ಭದಲ್ಲಿದೇವತೆಗಳು ದೀಪಗಳನ್ನು ಬೆಳಗಿಸಿ, ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ ಎಂಬುದು ಪುರಾಣದ ಪ್ರತೀತಿ.

ದೇವತೆಗಳು ಈ ಶುಭ ಸಂದರ್ಭದಲ್ಲಿಕಾಶಿ ಎಂದೇ ಪ್ರಸಿದ್ಧವಾಗಿರುವ ವಾರಾಣಸಿಗೆ ಆಗಮಿಸುತ್ತಾರೆ ಎಂಬ ನಂಬಿಕೆಯೂ ಇದೆ. ಇದರಿಂದಾಗಿಯೇ ಈ ಹಬ್ಬಕ್ಕೆ ದೇವ ದೀಪಾವಳಿ ಎಂಬ ಹೆಸರು ಬಂದಿದೆ.

ಗಂಗಾನದಿಯ ದಡದಲ್ಲಿಲಕ್ಷಾಂತರ ಹಣತೆಗಳನ್ನು ಬೆಳಗಿಸುವ ಸಂಪ್ರದಾಯ ಈ ನಂಬಿಕೆಗೆ ಸಂಬಂಧಿಸಿದೆ. ದೇವತೆಗಳನ್ನು ಸ್ವಾಗತಿಸುವ ಸಂಕೇತವಾಗಿ ಭಕ್ತರು ದೇವಾಲಯಗಳು, ಮನೆಗಳು, ಘಾಟ್‌ಗಳು ಹಾಗೂ ನದಿಯ ದಡಗಳಲ್ಲಿದೀಪಗಳನ್ನು ಬೆಳಗಿಸುತ್ತಾರೆ. ಈ ಹಬ್ಬವು ಆಧ್ಯಾತ್ಮಿಕ ಶುದ್ಧೀಕರಣ, ದಾನಧರ್ಮ ಮತ್ತು ಕೃತಜ್ಞತೆಯ ಭಾವನೆಗಳಿಗೂ ಮಹತ್ವ ನೀಡುತ್ತದೆ.

ದೀಪ ಬೆಳಗಿಸುವುದು ಅಜ್ಞಾನವೆಂಬ ಕತ್ತಲೆಯನ್ನು ದೂರಮಾಡಿ ಜ್ಞಾನ, ಸಕಾರಾತ್ಮಕತೆ ಮತ್ತು ದೈವಿಕ ಅನುಗ್ರಹವನ್ನು ಸ್ವಾಗತಿಸುವ ಸಂಕೇತವಾಗಿದೆ.

ತ್ರಿಪುರಾಸುರನ ಸಂಹಾರ: ಶಿವನ ವಿಜಯದ ಪೌರಾಣಿಕ ಕಥೆ
ದೇವ ದೀಪಾವಳಿಗೆ ಸಂಬಂಧಿಸಿದ ಪ್ರಮುಖ ಪೌರಾಣಿಕ ಕಥೆಯೇ ಶಿವನು ತ್ರಿಪುರಾಸುರನನ್ನು ಸಂಹರಿಸಿದ ಪ್ರಸಂಗ.
ತ್ರಿಪುರಾಸುರನು ಕಠಿಣ ತಪಸ್ಸು ಮಾಡಿ ಅಪಾರ ಶಕ್ತಿಯನ್ನು ಪಡೆದುಕೊಂಡಿದ್ದ ಪ್ರಬಲ ರಾಕ್ಷ ಸ. ಅವನಿಗೆ ಮೂರು ಅದ್ಭುತ ನಗರಗಳಿದ್ದವು. ಇವುಗಳನ್ನು ತ್ರಿಪುರಗಳೆಂದು ಕರೆಯಲಾಗುತ್ತಿತ್ತು. ಈ ಮೂರು ನಗರಗಳ ಕಾರಣದಿಂದ ಅವನನ್ನು ಸೋಲಿಸುವುದು ಅತ್ಯಂತ ಕಷ್ಟಕರವಾಗಿತ್ತು.
ಕ್ರಮೇಣ ತ್ರಿಪುರಾಸುರನ ಬಲ ಮತ್ತು ಪ್ರಭಾವ ಹೆಚ್ಚಾಯಿತು. ಅವನು ದೇವತೆಗಳಿಗೆ ತೊಂದರೆ ನೀಡತೊಡಗಿದ. ಲೋಕದ ಶಾಂತಿ ಮತ್ತು ಧರ್ಮವ್ಯವಸ್ಥೆಗೆ ಧಕ್ಕೆ ಉಂಟಾಯಿತು. ಇದರಿಂದ ಆತಂಕಗೊಂಡ ದೇವತೆಗಳು ಶಿವನ ಮೊರೆ ಹೋದರು.
ದೇವತೆಗಳ ಪ್ರಾರ್ಥನೆಗೆ ಸ್ಪಂದಿಸಿದ ಶಿವನು ತ್ರಿಪುರಾಸುರನ ಸಂಹಾರ ಮಾಡಿ ಲೋಕದಲ್ಲಿಶಾಂತಿ ನೆಲೆಸುವಂತೆ ಮಾಡಲು ನಿರ್ಧರಿಸಿದನು.
ಪುರಾಣದ ಕಥೆಯ ಪ್ರಕಾರ, ಆ ಮೂರು ನಗರಗಳು ಒಂದೇ ಸರಳರೇಖೆಯಲ್ಲಿಬಂದಾಗ ಮಾತ್ರ ಅವುಗಳನ್ನು ನಾಶಮಾಡಲು ಸಾಧ್ಯವಿತ್ತು. ಸೂಕ್ತ ಸಮಯಕ್ಕಾಗಿ ಕಾದ ಶಿವನು, ಮೂರು ನಗರಗಳು ಒಂದೇ ಸಾಲಿನಲ್ಲಿಬಂದ ಕ್ಷ ಣದಲ್ಲಿಒಂದೇ ಬಾಣದಿಂದ ಅವುಗಳನ್ನು ಭಸ್ಮ ಮಾಡಿದನು.
ಇದರೊಂದಿಗೆ ತ್ರಿಪುರಾಸುರನ ಅಟ್ಟಹಾಸ ಅಂತ್ಯಗೊಂಡು, ಲೋಕದಲ್ಲಿಧರ್ಮ ಮತ್ತು ಶಾಂತಿ ಮರುಸ್ಥಾಪನೆಯಾಯಿತು. ಮೂರು ಪುರಗಳನ್ನು ನಾಶಮಾಡಿದ ಶಿವನಿಗೆ ’ತ್ರಿಪುರಾರಿ’ ಎಂಬ ಹೆಸರು ಬಂದಿತು. ಶಿವನ ಈ ವಿಜಯವನ್ನು ದೇವತೆಗಳು ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರು. ಈ ದೈವಿಕ ಸಂಭ್ರಮದ ಸ್ಮರಣೆಯೇ ಕಾರ್ತಿಕ ಪೂರ್ಣಿಮೆಯಂದು ಆಚರಿಸುವ ದೇವ ದೀಪಾವಳಿ ಎಂಬ ನಂಬಿಕೆಯಿದೆ.
ದೇವ ದೀಪಾವಳಿ ಮತ್ತು ತ್ರಿಪುರಾರಿ ಪೂರ್ಣಿಮೆಯ ಸಂಬಂಧವೇನು?
ಕಾರ್ತಿಕ ಪೂರ್ಣಿಮೆಯನ್ನು ತ್ರಿಪುರಾರಿ ಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ತ್ರಿಪುರಾಸುರನನ್ನು ಸಂಹರಿಸಿದ ಶಿವನಿಗೆ ತ್ರಿಪುರಾರಿ ಎಂಬ ಹೆಸರಿರುವುದರಿಂದ ಈ ಹೆಸರು ಬಂದಿದೆ. ದುಷ್ಟಶಕ್ತಿಯ ವಿರುದ್ಧ ದೈವಿಕ ಶಕ್ತಿಯ ವಿಜಯ ಮತ್ತು ಧರ್ಮದ ಪುನಃಸ್ಥಾಪನೆಯನ್ನು ಈ ದಿನ ಸಂಕೇತಿಸುತ್ತದೆ.

ಈ ದಿನ ಶಿವನ ಆರಾಧನೆ, ಧಾರ್ಮಿಕ ವಿಧಿವಿಧಾನಗಳು, ಪವಿತ್ರ ನದಿಗಳಲ್ಲಿಸ್ನಾನ ಮತ್ತು ದಾನಧರ್ಮಗಳಿಗೆ ವಿಶೇಷ ಮಹತ್ವವಿದೆ. ಭಕ್ತರು ಶಿವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಶಿವನಾಮ ಸ್ಮರಣೆ ಮತ್ತು ಪವಿತ್ರ ಮಂತ್ರಗಳ ಜಪ ಮಾಡುತ್ತಾರೆ.

ಕಾರ್ತಿಕ ಮಾಸವಿಡೀ ಹಲವು ಭಕ್ತರು ವಿಶೇಷ ವ್ರತಾಚರಣೆಗಳನ್ನು ಕೈಗೊಳ್ಳುತ್ತಾರೆ. ಹಿಂದೂ ಧಾರ್ಮಿಕ ಪರಂಪರೆಯಲ್ಲಿಕಾರ್ತಿಕ ಮಾಸವನ್ನು ಅತ್ಯಂತ ಪವಿತ್ರ ಹಾಗೂ ಪುಣ್ಯಪ್ರದ ಮಾಸವೆಂದು ಪರಿಗಣಿಸಲಾಗಿದೆ.

ಕಾರ್ತಿಕ ಪೂರ್ಣಿಮೆಯಂದು ಗಂಗಾನದಿಯ ದಡದಲ್ಲಿರುವ ಘಾಟ್‌ಗಳು ಸಾವಿರಾರು ಹಣತೆಗಳ ಬೆಳಕಿನಿಂದ ಕಂಗೊಳಿಸುತ್ತವೆ. ದಶಾಶ್ವಮೇಧ ಘಾಟ್‌, ಅಸ್ಸಿ ಘಾಟ್‌, ಪಂಚಗಂಗಾ ಘಾಟ್‌ ಸೇರಿದಂತೆ ಪ್ರಮುಖ ಘಾಟ್‌ಗಳಲ್ಲಿಭಕ್ತರು ಅಪಾರ ಸಂಖ್ಯೆಯಲ್ಲಿಸೇರುತ್ತಾರೆ. ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿವಿಧಾನಗಳಲ್ಲಿಪಾಲ್ಗೊಳ್ಳುತ್ತಾರೆ.

ಈ ಪವಿತ್ರ ದಿನದಂದು ದೇವತೆಗಳು ಕಾಶಿಗೆ ಆಗಮಿಸುತ್ತಾರೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿಘಾಟ್‌ಗಳಲ್ಲಿದೀಪಗಳನ್ನು ಬೆಳಗಿಸಲಾಗುತ್ತದೆ. ದೀಪ ಬೆಳಗಿಸುವುದು ಶಿವ ಮತ್ತು ಗಂಗಾಮಾತೆಗೆ ಕೃತಜ್ಞತೆ ಸಲ್ಲಿಸುವ ದೈವಿಕ ಸೇವೆಯೆಂದು ಭಾವಿಸಲಾಗುತ್ತದೆ.
ದೇವ ದೀಪಾವಳಿಯ ಮತ್ತೊಂದು ಪ್ರಮುಖ ಆಕರ್ಷಣೆ ಗಂಗಾ ಆರತಿ. ಅರ್ಚಕರು ಬೃಹತ್‌ ದೀಪಗಳು, ಧೂಪ ಮತ್ತು ವಿವಿಧ ಪೂಜಾ ಸಾಮಗ್ರಿಗಳೊಂದಿಗೆ ಭವ್ಯ ಆರತಿ ನೆರವೇರಿಸುತ್ತಾರೆ. ಗಂಟೆ, ಶಂಖನಾದ ಮತ್ತು ಭಕ್ತಿಗೀತೆಗಳೊಂದಿಗೆ ನಡೆಯುವ ಈ ಆರತಿ ಭಕ್ತರಲ್ಲಿಭಕ್ತಿಭಾವವನ್ನು ಉದ್ದೀಪನಗೊಳಿಸುತ್ತದೆ.
ಗಂಗಾನದಿಯ ನೀರಿನಲ್ಲಿಪ್ರತಿಫಲಿಸುವ ಲಕ್ಷಾಂತರ ಹಣತೆಗಳ ಬೆಳಕು ಮನಮೋಹಕ ದೃಶ್ಯವನ್ನು ಸೃಷ್ಟಿಸುತ್ತದೆ. ಹೀಗಾಗಿ ದೇವ ದೀಪಾವಳಿಯು ವಾರಾಣಸಿಯ ಅತ್ಯಂತ ವೈಶಿಷ್ಟ್ಯಪೂರ್ಣ ಧಾರ್ಮಿಕ ಉತ್ಸವಗಳಲ್ಲಿಒಂದಾಗಿದೆ.


ದೇವ ದೀಪಾವಳಿಯ ಧಾರ್ಮಿಕ ಮಹತ್ವ
ದೇವ ದೀಪಾವಳಿಯು ಹಲವು ಆಧ್ಯಾತ್ಮಿಕ ಹಾಗೂ ಧಾರ್ಮಿಕ ನಂಬಿಕೆಗಳನ್ನು ಒಳಗೊಂಡಿದೆ.

– ಕೆಡುಕಿನ ವಿರುದ್ಧ ಒಳಿತಿನ ವಿಜಯ: ತ್ರಿಪುರಾಸುರನನ್ನು ಶಿವನು ಸಂಹರಿಸಿದ ಘಟನೆಯು ಅಧರ್ಮದ ಮೇಲೆ ಧರ್ಮದ ವಿಜಯವನ್ನು ಸಾರುತ್ತದೆ. ದುಷ್ಟಶಕ್ತಿಗಳು ಎಷ್ಟೇ ಪ್ರಬಲವಾಗಿದ್ದರೂ ಅಂತಿಮವಾಗಿ ಸತ್ಯ ಮತ್ತು ಧರ್ಮಕ್ಕೆ ಜಯ ದೊರೆಯುತ್ತದೆ ಎಂಬ ಸಂದೇಶವನ್ನು ನೀಡುತ್ತದೆ.

– ಶಿವನ ಆರಾಧನೆ: ತ್ರಿಪುರಾರಿಯಾಗಿ ಶಿವನನ್ನು ಆರಾಧಿಸುವುದು ಈ ದಿನದ ವಿಶೇಷ. ಭಕ್ತರು ಸುಖ, ಶಾಂತಿ, ರಕ್ಷ ಣೆ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಶಿವನ ಅನುಗ್ರಹವನ್ನು ಕೋರುತ್ತಾರೆ.

– ಪವಿತ್ರ ನದಿಗಳಲ್ಲಿಸ್ನಾನ: ಕಾರ್ತಿಕ ಪೂರ್ಣಿಮೆಯಂದು ಪವಿತ್ರ ನದಿಗಳಲ್ಲಿಮಿಂದು ಪುಣ್ಯಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಇದರಿಂದ ಮನಸ್ಸು ಮತ್ತು ಆತ್ಮ ಶುದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

-ದೀಪದಾನ: ಹಣತೆಗಳನ್ನು ಬೆಳಗಿಸಿ ದಾನ ಮಾಡುವುದು ಈ ಹಬ್ಬದ ಪ್ರಮುಖ ಆಚರಣೆ. ದೀಪವು ಜ್ಞಾನ, ಭಕ್ತಿ, ಸಕಾರಾತ್ಮಕತೆ ಮತ್ತು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವ ಸಂಕೇತವಾಗಿದೆ.

-ದಾನಧರ್ಮ: ಈ ದಿನ ಬಡವರಿಗೆ ಅನ್ನ, ವಸ್ತ್ರ, ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನು ದಾನ ಮಾಡುವುದು ಪುಣ್ಯಪ್ರದವೆಂದು ಪರಿಗಣಿಸಲಾಗಿದೆ.

-ಗಂಗಾಮಾತೆಯ ಆರಾಧನೆ: ಗಂಗಾನದಿಯನ್ನು ಪವಿತ್ರ ನದಿಯೆಂದು ಪೂಜಿಸುವ ಭಕ್ತರು ಗಂಗಾಮಾತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಜೀವಜಗತ್ತಿಗೆ ನೀರಿನ ಮೂಲಕ ಜೀವನಾಧಾರ ಒದಗಿಸುವ ನದಿಯ ಮಹತ್ವವನ್ನು ಸ್ಮರಿಸುತ್ತಾರೆ.

Related Articles

LEAVE A REPLY

Latest Articles