ಪಾಲಕ್‌ ಸೊಪ್ಪಿನ ಆರೋಗ್ಯಕರ ರೆಸಿಪಿ

ಪಾಲಕ್‌ ಸೊಪ್ಪಿನಲ್ಲಿ ಕಬ್ಬಿಣಾಂಶ, ಫೋಲೇಟ್‌, ವಿಟಮಿನ್‌ ಎ, ಸಿ, ಕೆ, ನಾರಿನಂಶ ಹಾಗೂ ಹಲವು ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇದರಿಂದ ರುಚಿಕರವಾಗಿಯೂ ಪೌಷ್ಟಿಕವಾಗಿಯೂ ತಯಾರಿಸಬಹುದಾದ ಕೆಲವು ಸರಳ ಆರೋಗ್ಯಕರ ರೆಸಿಪಿಗಳು ಇಲ್ಲಿವೆ.

1. ಪಾಲಕ್‌ ಸೊಪ್ಪು – ಹೆಸರುಬೇಳೆ ಪಲ್ಯ

ಬೇಕಾಗುವ ಸಾಮಗ್ರಿಗಳು:

ಪಾಲಕ್‌ ಸೊಪ್ಪು – 2 ಕಟ್ಟು

  • ಹೆಸರುಬೇಳೆ – ಅರ್ಧ ಕಪ್‌
  • ಈರುಳ್ಳಿ – 1
  • ಹಸಿಮೆಣಸಿನಕಾಯಿ – 2
  • ಬೆಳ್ಳುಳ್ಳಿ – 3 ಎಸಳು
  • ಜೀರಿಗೆ, ಸಾಸಿವೆ – ಸ್ವಲ್ಪ
  • ಅರಿಶಿಣ, ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ – 1 ಚಮಚ

ಮಾಡುವ ವಿಧಾನ

  1. ಹೆಸರುಬೇಳೆಯನ್ನು ತೊಳೆದು ಅರ್ಧ ಬೇಯಿಸಿಕೊಳ್ಳಿ. ಪಾಲಕ್‌ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಪಾಲಕ್‌ ಸೊಪ್ಪು, ಅರಿಶಿಣ ಮತ್ತು ಉಪ್ಪು ಸೇರಿಸಿ ಬೇಯಿಸಿ. ನಂತರ ಬೇಯಿಸಿದ ಹೆಸರುಬೇಳೆ ಸೇರಿಸಿ ಎರಡು ನಿಮಿಷ ಬೇಯಿಸಿದರೆ ರುಚಿಕರವಾದ ಪಲ್ಯ ಸಿದ್ಧ

ಪಾಲಕ್‌ ಸೊಪ್ಪಿನ ಸೂಪ್‌

ಬೇಕಾಗುವ ಸಾಮಗ್ರಿಗಳು

  • ಪಾಲಕ್‌ ಸೊಪ್ಪು – 2 ಕಟ್ಟು
  • ಕ್ಯಾರೆಟ್‌ – 1
  • ಈರುಳ್ಳಿ – ಅರ್ಧ
  • ಬೆಳ್ಳುಳ್ಳಿ – 2 ಎಸಳು
  • ಕಾಳುಮೆಣಸಿನ ಪುಡಿ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

  1. ಪಾಲಕ್‌, ಕ್ಯಾರೆಟ್‌, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸ್ವಲ್ಪ ನೀರು ಹಾಕಿ ಬೇಯಿಸಿ. ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಮತ್ತೆ ಪಾತ್ರೆಗೆ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಕುದಿಸಿ. ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಬಿಸಿಯಾಗಿ ಸವಿಯಿರಿ.

Related Articles

LEAVE A REPLY

Latest Articles