ರುಚಿಕರ ಸಿಹಿತಿಂಡಿ ಬ್ರೆಡ್ ಹಲ್ವಾ

ಕಡಿಮೆ ಪದಾರ್ಥಗಳಲ್ಲಿ, ಸುಲಭವಾಗಿ ತಯಾರಿಸಬಹುದಾದ ರುಚಿಕರವಾದ ಸಿಹಿತಿಂಡಿ ಬ್ರೆಡ್ ಹಲ್ವಾ. ಉಳಿದ ಬ್ರೆಡ್‌ಗಳನ್ನು ಬಳಸಿ ಕೂಡ ಈ ಹಲ್ವಾ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

  • ಬ್ರೆಡ್ ಸ್ಲೈಸ್ – 6 ರಿಂದ 8
  • ಹಾಲು – 1 ಕಪ್
  • ಸಕ್ಕರೆ – ½ ಕಪ್
  • ತುಪ್ಪ – ½ ಕಪ್
  • ಗೋಡಂಬಿ – 10
  • ಬಾದಾಮಿ – 8
  • ಒಣದ್ರಾಕ್ಷಿ – ಸ್ವಲ್ಪ
  • ಏಲಕ್ಕಿ ಪುಡಿ – ¼ ಚಮಚ
  • ಕೇಸರಿ – ಸ್ವಲ್ಪ (ಐಚ್ಛಿಕ)

ತಯಾರಿಸುವ ವಿಧಾನ

  1. ಮೊದಲು ಬ್ರೆಡ್‌ನ ಅಂಚುಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
  2. ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ, ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಹುರಿದು ತೆಗೆದಿಡಿ.
  3. ಅದೇ ಬಾಣಲೆಗೆ ತುಪ್ಪ ಹಾಕಿ ಬ್ರೆಡ್ ತುಂಡುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
  4. ಈಗ ಹಾಲನ್ನು ಸೇರಿಸಿ ಬ್ರೆಡ್ ಮೃದುವಾಗುವವರೆಗೆ ಚೆನ್ನಾಗಿ ಕಲಸಿ.
  5. ನಂತರ ಸಕ್ಕರೆ ಸೇರಿಸಿ ನಿರಂತರವಾಗಿ ಕೈಯಾಡಿಸುತ್ತಿರಿ.
  6. ಮಿಶ್ರಣ ಗಟ್ಟಿಯಾಗುತ್ತಾ ಬಂದಂತೆ ಉಳಿದ ತುಪ್ಪವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ.
  7. ಏಲಕ್ಕಿ ಪುಡಿ, ಕೇಸರಿ ಹಾಗೂ ಹುರಿದ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  8. ಹಲ್ವಾ ಬಾಣಲೆಯ ಅಂಚು ಬಿಡಲು ಪ್ರಾರಂಭಿಸಿದಾಗ ಒಲೆಯಿಂದ ಕೆಳಗಿಳಿಸಿ.

Related Articles

LEAVE A REPLY

Latest Articles