ಮುನವಳ್ಳಿ: ಪಟ್ಟಣದ ಐತಿಹಾಸಿಕ ದೇವಾಲಯ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ಸಂಜೆ ಕಾರ್ತಿಕೋತ್ಸವ ಸಡಗರದಿಂದ ಜರುಗಿತು. ಪಂಚಲಿಂಗೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ದೀಪ ಬೆಳಗಿಸಿದ ನಂತರ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಲಾಯಿತು.
ಮುನವಳ್ಳಿ ಸೋಮಶೇಖರಮಠದ ಪರಮಪೂಜ್ಯ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯವನ್ನುವಹಿಸಿದ್ದರು.
ವಿಧಾನಸಭಾ ಉಪಸಭಾಪತಿ ಶಾಸಕ ಆನಂದ ಮಾಮನಿ, ದೇವಸ್ಥಾನದ ಜೀರ್ಣೋದ್ಧಾರ ಸಮೀತಿ ಪಂಚಪ್ಪ ಗೋಪಶೆಟ್ಟಿ, ಹಿರಿಯರಾದ ಚಂದ್ರ ಯ್ಯಸ್ವಾಮಿ ವಿರಕ್ತ ಮಠ, ಬಸವರಾಜ ದೇವಣಗಾವಿ, ಸೇರಿದಂತೆ ಅನೇಕ ಭಕ್ತರು,ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.