ಬಾರ್ಲಿ ನೀರಿನಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ಪಚನಕ್ರಿಯೆ ಮತ್ತು ರಕ್ತಸಂಚಾರ ಸುಗಮಗೊಳ್ಳುತ್ತದೆ. ಬಾರ್ಲಿ ನೀರನ್ನು ಬೇಸಿಗೆ ಕಾಲದಲ್ಲಿ ಹೆಚ್ಚು ಸೇವಿಸಬಹುದು. ಬೆವರಿನ ಮೂಲಕ ದೇಹದ ನೀರಿನಂಶ ಹೊರಹೋಗುವುದರಿಂದ ದೇಹವನ್ನು ತಂಪಾಗಿರಿಸುವ0ತೆ ಮಾಡುತ್ತದೆ.
ಬಾರ್ಲಿಯನ್ನು ತೊಳೆದು ಸ್ವಚ್ಚಮಾಡಿ, ಬೇಯಿಸಬೇಕು. ಅದಕ್ಕೆ ಸ್ವಲ್ಪ ಹಾಲು, ಏಲಕ್ಕಿ ಪುಡಿ ಸೇರಿಸಬಹುದು. ಅಥವಾ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ಹಣ್ಣಿನ ರಸ ಸೇರಿಸಿ ಕುಡಿಯುವುದರಿಂದಲೂ ಆರೋಗ್ಯಕ್ಕೆ ಭಾರಿ ಒಳ್ಳೆಯದು.
- ಬಾರ್ಲಿಯ ಉಪಯೋಗಗಳು
- ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
- ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.
- ಜೀರ್ಣಕ್ರಿಯೆಗೆ ಸಹಕಾರಿ.
- ದೇಹದಲ್ಲಿಕೊಲೆಸ್ಟಾçಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
- ಹೃದಯ ಸಂಬ0ಧಿ ಸಮಸ್ಯೆಗಳು ದೂರವಾಗುತ್ತವೆ.
- ರಕ್ತಹೀನತೆಯನ್ನು ನಿಯಂತ್ರಿಸುತ್ತದೆ.
- ಕೂದಲಿಗೆ ಹೊಳಪನ್ನು ನೀಡುತ್ತದೆ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.