ತೆಂಗಿನಕಾಯಿ ಹಾಲಿನ ಬರ್ಫಿ – ತಿಂದವನೇ ಬಲ್ಲ ಅಮೃತಫಲದ ಸವಿಯ

ಅಮೃತಫಲ ಮೂರು ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದಾದ ಸಿಹಿ. ಅಮೃತದಷ್ಟೇ ಸವಿ. ಆರೋಗ್ಯಕರವಾದ ಸಿಹಿತಿನಿಸು. ತೆಂಗಿನಕಾಯಿ ಹಾಲು, ಹಸುವಿನ ಹಾಲು ಹಾಗೂ ಸಕ್ಕರೆ ಅಥವಾ ಬೆಲ್ಲದ ಪುಡಿಯನ್ನು ಬಳಸಿ ತಯಾರಿಸಬಹುದು.
ಇದಕ್ಕೆ ಮೈದಾ, ಕಡಲೆ ಹಿಟ್ಟು ಅಥವಾ ಇನ್ನಿತರ ಯಾವುದೇ ಹಿಟ್ಟು ಬಳಸುವುದಿಲ್ಲ. ಮಾಡುವ ವಿಧಾನ ಕೂಡಾ ಅಷ್ಟೇ ಸುಲಭ. ಪಾಕ ಬರಲು ಸ್ವಲ್ಪ ಸಮಯ ಹಿಡಿಯತ್ತೆ. ಆದರೆ ಅದರ ಸವಿ ಮಾತ್ರ ತಿಂದವನೇ ಬಲ್ಲ.
ಒಂದು ತೆಂಗಿನಕಾಯಿಯನ್ನು ತುರಿದು ಅದನ್ನು ರುಬ್ಬಿಕೊಂಡು ಗಟ್ಟಿ ಹಾಲು ತೆಗೆದಿಟ್ಟುಕೊಳ್ಳಬೇಕು. ಒಂದು ಕಪ್ ತೆಂಗಿನಕಾಯಿ ಹಾಲು ಬಳಸಿದರೆ ಅಷ್ಟೇ ಪ್ರಮಾಣದಲ್ಲಿ ಹಸುವಿನ ಹಾಲು ಹಾಗೂ ಒಂದು ಕಪ್ ಸಕ್ಕರೆ ಬಳಸಬೇಕು.
ಮಾಡುವ ವಿಧಾನ: ಮೊದಲು ಒಂದು ಬಾಣಲೆಗೆ ಒಂದು ಕಪ್ ಹಸುವಿನ ಹಾಲು ಹಾಕಿ. ಅದು ಕುದಿ ಬಂದಾಗ ಅದಕ್ಕೆ ತೆಂಗಿನಕಾಯಿ ಹಾಲು ಸೇರಿಸಿ. ಅವೆರಡು ಕುದಿಯಲು ಆರಂಭಿಸಿದಾಗ ಅದಕ್ಕೆ ಸಕ್ಕರೆ ಹಾಕಿ ಕದಡುತ್ತಿರಿ. ಸುಮಾರು 30 ರಿಂದ 40 ನಿಮಿಷಗಳ ಕಾಲ ನಿರಂತರವಾಗಿ ಕದಡುತ್ತಿರಿ. ಆಗ ಅದರ ಬಣ್ಣ ಕಂದು ಬಣ್ಣಕ್ಕೆ ತಿರುಗುತ್ತದೆ. ಪಾಕ ಎಳೆಎಳೆಯಾಗಿ ಬರುತ್ತದೆ. ಪಾಕ ಪಾತ್ರೆಯಿಂದ ಬಿಟ್ಟುಕೊಳ್ಳುತ್ತಿದೆ ಅಂತಾದರೆ ಪಾಕ ಹದಕ್ಕೆ ಬಂದಿದೆ ಎಂದರ್ಥ. ಸ್ಟೌ ಆಫ್ ಮಾಡಿ ಪಾಕವನ್ನು ತುಪ್ಪ ಸವರಿದ ಬಟ್ಟಲಿಗೆ ಹಾಕಿ ಸಪಾಟಾಗಿಸಿ. ಒಂದು ಗಂಟೆಯ ನಂತರ ಅಮೃತ ಫಲ ಸವಿಯಲು ರೆಡಿ.

Related Articles

ಪ್ರತಿಕ್ರಿಯೆ ನೀಡಿ

Latest Articles