ಸತ್ಯದ ದಾರಿಯಲ್ಲಿ ನಡೆಯುವುದೇ ತಪಸ್ಸು: ಶ್ರೀ ರಂಭಾಪುರಿ ಜಗದ್ಗುರು

ಕೊಲನಪಾಕ (ತೆಲಂಗಾಣ): ಜೀವನ ಸಮೃದ್ಧಗೊಂಡ0ತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು. ಯಾವ ಸಂಪತ್ತಿಗಾಗಿ ಜೀವ ಜಗತ್ತು ಹಂಬಲಿಸುವುದೋ ಆ ಸಂಪತ್ತು ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ. ಸತ್ಯ ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ತಪಸ್ಸು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ತೆಲಂಗಾಣ ರಾಜ್ಯದ ಕೊಲನಪಾಕ ಶ್ರೀ ಸ್ವಯಂಭು ಸೋಮೇಶ್ವರ ಕ್ಷೇತ್ರದಲ್ಲಿ ಜನವರಿ 4ರಂದು ತಮ್ಮ 66ನೇ ಜನ್ಮ ದಿನೋತ್ಸವ ನಿಮಿತ್ಯ ಏರ್ಪಡಿಸಿದ 2ನೇ ದಿನದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭೌತಿಕ ಸಂಪತ್ತು ಶಾಶ್ವತವಾಗಿ ಉಳಿಯದು. ಆಧ್ಯಾತ್ಮ ಸಂಪತ್ತೊ0ದೇ ಶಾಶ್ವತ. ದೇಹಕ್ಕೆ ಕಣ್ಣುಗಳು ಇರುವಂತೆ ಧರ್ಮಕ್ಕೆ ಶಾಸ್ತ್ರ ಮತ್ತು ಗುರು ಇದ್ದಾನೆ. ಬದುಕನ್ನು ಬೆಳಕಿನೆಡೆಗೆ ಕರೆದೊಯ್ಯುವುದೇ ಗುರುವಿನ ಧರ್ಮವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಶಿವನಾದೇಶದಂತೆ ಕೊಲನುಪಾಕ ಶ್ರೀ ಸ್ವಯಂಭು ಸೋಮೇಶ್ವರ ಮಹಾಲಿಂಗದಿ0ದ ಅವತರಿಸಿ ಬದುಕಿ ಬಾಳುವ ಜನಾಂಗಕ್ಕೆ ಶಾಂತಿ ಸಾಮರಸ್ಯದ ಸಂದೇಶವನ್ನು ಕರುಣಿಸಿದರು. ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ಕಾಣಲು ಸಾಧ್ಯ. ಶಾಸ್ತ್ರ ಸಮ್ಮತವಾದ ದಾರಿಯಲ್ಲಿ ಕ್ರಿಯಾಶೀಲನಾಗಿ ಬಾಳಿದರೆ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ. ಬಿತ್ತಿದ ಬೀಜದಂತೆ ಬೆಳೆ ಹೇಗೋ ಹಾಗೆ ನಮ್ಮ ನುಡಿ ನಡೆಯಂತೆ ಫಲ ಪಡೆಯಲು ಸಹಕಾರಿಯಾಗುತ್ತದೆ ಎಂದರು.


ಬಿಚಗು0ದ ಮಠದ ಸೋಮಲಿಂಗ ಶಿವಾಚಾರ್ಯ ಸ್ವಾಮಿಗಳು, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಮಳಲಿಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು, ಜವಳಿಮಠದ ಗಂಗಾಧರ ಸ್ವಾಮಿಗಳು ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಹಿತ ವಚನಗಳನ್ನು ಭಕ್ತ ಸಮೂಹಕ್ಕೆ ಮನವರಿಕೆ ಮಾಡಿಕೊಟ್ಟರು.

ಪ್ರಾತ:ಕಾಲದಲ್ಲಿ ಶ್ರೀ ಸೋಮೇಶ್ವರ ಮಹಾಲಿಂಗ ಮತ್ತು ಶ್ರೀ ವೀರಭದ್ರಸ್ವಾಮಿಗೆ ರುದ್ರಾಭಿಷೇಕ ಮಹಾಪೂಜೆ ಹಾಗೂ ಶಕ್ತಿಮಾತೆ ಚಂಡಿಕಾ0ಬಾ ದೇವಿಗೆ ಕುಂಕುಮಾರ್ಚನೆ ಜರುಗಿತು.

ದೇವಸ್ಥಾನದ ಅರ್ಚಕ ಸೋಮಯ್ಯಸ್ವಾಮಿ, ಗಂಗಾಧರಸ್ವಾಮಿ ಹಾಗೂ ಟ್ರಸ್ಟಿನ ಕಾರ್ಯದರ್ಶಿ ಅಣ್ಣಾರಾವ ಬಿರಾದಾರ, ವೈದಿಕರಾದ ಗಂಗಾಧರಯ್ಯ, ಗದಿಗೆಯ್ಯಸ್ವಾಮಿ ಪೂಜಾ ಕಾರ್ಯಗಳನ್ನು ನೆರವೇರಸಿದರು.

ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಅವರ ಬಳಗದವರು ಬಂದ ಎಲ್ಲ ಭಕ್ತಾಭಿಮಾನಿಗಳಿಗೆ ಅನ್ನದಾಸೋಹ ಏರ್ಪಡಿಸಿದ್ದರು.


ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles