ಸಂಕಷ್ಟ ಕಳೆಯೋ ಗಣನಾಯಕ ಸಂತತ ಪೊರೆಯೋ ಗಣನಾಯಕ ನೀನೊಲಿದರೆ ಎಲ್ಲಾ ವಿಘ್ನವು ನಾಶ ನೀನಿರಲು ಸಿದ್ಧಿ ಬುದ್ಧಿ ವಿಕಾಸ ನಿನ್ನ ಕರುಣೆಯೆ ಚೆಂದ ಪ್ರಕಾಶ ಇನ್ನು ಆಗಲಿ ಅಜ್ಞಾನದ ನಾಶ ಗೌರೀ ಪುತ್ರ ಶೌರೀ ತನಯ ಅರಿವು ಸುಜ್ಞಾನಕೆ ನೀನೆ ಒಡೆಯ ಪರಿಪರಿ ದುಃಖವ ಪರಿಹರಿಸಯ್ಯ ನಿರುತ ಆನಂದವ ನೀ ನೀಡಯ್ಯ ಜಯ ಜಯ ನಿನಗೆ ಗಣನಾಥನೆ ಭಯ ಪರಿಹಾರಿ ವಿಘ್ನೇಶ್ವರನೆ ದಯದಿ ನಮ್ಮನು ಸಲಹುವವನೆ ಮಾಯಾ ಮೋಹ ಬಿಡಿಸುವವನೆ ಚೆಂದದ ಪೂಜೆ ಸ್ವೀಕರಿಸು ತಂದೆ ಕೆಂಪು ಹೂಗಳ ನೀಡುವೆ ಇಂದೆ ಕಂಟಕಗಳನು ಕಳೆದು ಮುಂದೆ ಸಂತತ ಸಿರಿಹರಿಲಿ ಭಕ್ತಿ ನೀಡು ತಂದೆ

*ರೂಪಶ್ರೀ ಶಶಿಕಾಂತ್
























