ವಾಗ್ಗೇಯಕಾರ ಶ್ರೀ ತ್ಯಾಗರಾಜರು

ರಾಮ ಭಕ್ತರಾದ ಶ್ರೀ ತ್ಯಾಗರಾಜರ
ಪ್ರೇಮ ಭಕ್ತಿಯಿಂದ ನೆನೆವ ಭಕ್ತಾಗ್ರೇಸರ
ನಾಮ ಜಪವ ಮಾಡಿದ ನಾರದರ  ಶಿಷ್ಯರ
ನಮಿಸುವ ಮುದದಿ ವಾಗ್ಗೇಯಕಾರರ
 
ರಾಗಗಳ ಜ್ಞಾನದಿಂದ ಗಾನ ಮಾಡಿದ ಭಕ್ತರ
ಜಗಕೆಲ್ಲ ಭಜನೆಸುಖವ  ಸಾರಿದವರ
ಭಗವಂತನನ್ನು ಪರಿಪರಿಯಲಿ ಸ್ತುತಿಸಿ
ತಗ್ಗದೆ ಬಗ್ಗದೆ ರಾಮನಿಗಾಗೆ ಬಾಳ್ದರ
 
ತುಂಬು ಭಕ್ತಿಯ ಕೃತಿಗಳ ರಚಿಸಿದವರ
ನಿಂತಲ್ಲೆ ಘನರಾಗ ಪಂಚರತ್ನ ಹಾಡಿದ
ಬಂದಥ ರಚನೆಗಳ ರಾಮಗೆ ಅರ್ಪಿಸಿ
ಸಂತತ ಭಕ್ತರ ವಂದಿಸಿ ಧನ್ಯರಾದವರ
 
ಸಾಕ್ಷಾತ್ಕಾರವಾಗಿ ರಾಮನನ್ನು ಕಂಡು
ಮೋಕ್ಷಮುಗಲದಾ ಎಂದು ಬೇಡಿದವರ
ಭಕ್ತಿ ಮಾಡಿ ಹೊನ್ನಿನಾಸೆ ಬಿಡಿರಿ ಎಂದವರ
ಅಕ್ಷಯನಾದ ಹರಿಗೆ ಪ್ರಿಯರಾದವರ.

* ರೂಪಶ್ರೀ ಶಶಿಕಾಂತ್

Related Articles

ಪ್ರತಿಕ್ರಿಯೆ ನೀಡಿ

Latest Articles