ಲಿಂ.ಬಸವಲಿಂಗ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಜ. 23ರಿಂದ

ಮುನವಳ್ಳಿ : ಪಟ್ಟಣದ ಶ್ರೀ ಸೋಮಶೇಖರ ಮಠದ ಹಿಂದಿನ ಪೀಠಾಧಿಪತಿ ಲಿಂ. ಬಸವಲಿಂಗ ಮಹಾಸ್ವಾಮಿಗಳ 66 ನೇ ಪುಣ್ಯಸ್ಮರಣೋತ್ಸವ ಪ್ರಯುಕ್ತ ಆಧ್ಯಾತ್ಮಿಕ ಪ್ರವಚನ ಹಾಗೂ ಮುರುಘಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ. 23ರಿಂದ ಜ. 28 ರವರೆಗೆ ಶ್ರೀ ಸೋಮಶೇಖರ ಮಠದ ಸಭಾಂಗಣದಲ್ಲಿ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಲಿದೆ.

ಜ. 23 ರಂದು ಸಂಜೆ 6.30ಕ್ಕೆ ಸವದತ್ತಿಯ ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಶಿವಲಿಂಗ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ. ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿಯವರಿಂದ ಪ್ರವಚನ ಜರುಗುವುದು.

ಕಟಕೋಳದ ಟಿ.ಪಿ.ಮುನೋಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪುಂಡಲೀಕ ಹೊನ್ನಪ್ಪ ಮೇಟಿ ಆಗಮಿಸುವರು. ಈ ಸಂದರ್ಭದಲ್ಲಿ ಯರಗಟ್ಟಿಯ ರಾಜೇಂದ್ರ ವಾಲಿ ಅವರಿಗೆ ಸನ್ಮಾನ ಜರುಗಲಿದೆ.

ಜ. 24 ರಂದು ಕಿಲ್ಲಾತೊರಗಲ್ಲದ ಶ್ರೀ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಭಾಗೋಜಿಕೊಪ್ಪದ ಶ್ರೀ ಡಾ.ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಹರ್ಲಾಪೂರದ ಶ್ರೀ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು. ಚೀಕಲಪರ್ವಿಯ ಶ್ರೀ ರುದ್ರಮುನೀಶ್ವರಮಠದ ಶ್ರೀ ಅನ್ನದಾನಿ ದೇವರು ಸಮ್ಮುಖ ವಹಿಸುವರು. ಮುಖ್ಯ ಅತಿಥಿಗಳಾಗಿ ಸವದತ್ತಿ ತಾಲೂಕಿನ ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ಆಗಮಿಸುವರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಫಕೀರಪ್ಪ ಹದ್ದಣ್ಣವರ, ಬಾಳಪ್ಪ ಹೂಲಿ, ರೇವಯ್ಯ ಗುರುಸ್ವಾಮಿ, ಎಸ್.ಆರ್.ಪಾಟೀಲ ಅವರಿಗೆ ಸನ್ಮಾನ ಜರುಗಲಿದೆ.

ಜ. 25 ರಂದು ಮುಂಜಾನೆ 10.30ಕ್ಕೆ ಮಹಿಳಾಗೋಷ್ಠಿ ಜರಗುವುದು. ನರಗುಂದದ ಶ್ರೀ ಗುರುಸಿದ್ದವೀರ ಶಿವಯೋಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮ ಉದ್ಘಾಟಿಸುವರು. ರತ್ನಾ ಆನಂದ ಮಾಮನಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾರದಾ ಪಂಚನಗೌಡ ದ್ಯಾಮನಗೌಡರ, ದೀಪಾ ರವೀಂದ್ರ ಯಲಿಗಾರ, ಮಹಾದೇವಿ ಜನಾರ್ಧನ ಭಂಡಾರಿ, ರುದ್ರಕ್ಕ ಚಂದ್ರಶೇಖರ ಶಿರಸಂಗಿ, ಸವಿತಾ ಉಮೇಶ ಬಾಳಿ, ವೀಣಾ ರಮೇಶ ಗೋಮಾಡಿ, ಲಲಿತಾ ಅರುಣಗೌಡ ಪಾಟೀಲ, ಪೂಜಾ ವಿಶ್ವನಾಥ ಗೋಪಶೆಟ್ಟಿ, ಜ್ಯೋತಿ ಚನ್ನಪ್ಪ ಯಲಬುರ್ಗಿ, ಅನುರಾಧಾ ಬೆಟಗೇರಿ ಆಗಮಿಸುವರು. ಹಳಿಯಾಳದ ಅಕ್ಕನ ಬಳಗದವರಿಂದ ವಿಶೇಷ ಕಾರ್ಯಕ್ರಮ ಜರುಗಲಿದೆ. ಸಂಜೆ 6.30ಕ್ಕೆ ಪ್ರವಚನ. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಶ್ರೀ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಕನಕಗಿರಿಯ ಶ್ರೀ ಡಾ. ಚನ್ನಮಲ್ಲ ಸ್ವಾಮೀಜಿ, ಮಾದನಹಿಪ್ಪರಗಿಯ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಎಸ್.ಜಿ.ನಂಜಯ್ಯನಮಠ, ಸೌರಭ ಆನಂದ ಚೋಪ್ರಾ, ಎಸ್.ಎಸ್.ಮುಗಳಿ ಹಾಗೂ ಬಸವ ಫೌಂಡೇಶನ್‌ದ ಪದಾಧಿಕಾರಿಗಳು, ಸದಸ್ಯರಿಗೆ ಸನ್ಮಾನ ಜರುಗುವುದು.

ಜ. 26 ರಂದು ಸಂಜೆ 6.30 ಗಂಟೆಗೆ ಜರುಗುವ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅವರಾದಿಯ ಶ್ರೀ ಶಿವಮೂರ್ತಿ ಸ್ವಾಮೀಜಿ, ಬೈಲಹೊಂಗಲದ ಶ್ರೀ ಪ್ರಭುನೀಲಕಂಠ ಸ್ವಾಮೀಜಿ, ಶಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೀ ಮುಕ್ತಾನಂದ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕ ಡಾ. ವಿ.ಆಯ್.ಪಾಟೀಲ ಆಗಮಿಸುವರು. ವೀರೇಶ ಬ್ಯಾಹಟ್ಟಿ, ಉಮೇಶ ಬಡಿಗೇರ, ಮಹಾದೇವ ಅಂಗಡಿ, ಅಶೋಕ ಬಡಿಗೇರ, ರವಿಕುಮಾರ ಅಣ್ಣಿಗೇರಿ ಇವರಿಗೆ ಸನ್ಮಾನ ಜರುಗುವುದು.

ಜ. 27 ರಂದು ಸಾಯಂಕಾಲ 6.30 ಗಂಟೆಗೆ ಜರುಗುವ ಪ್ರವಚನ ಮಂಗಲೋತ್ಸವ ಹಾಗೂ ಮುರುಘಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯಸಾನಿಧ್ಯವನ್ನು ಉಪ್ಪಿನಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ, ಸಾನಿಧ್ಯವನ್ನು ಹೊಸಳ್ಳಿಯ ಶ್ರೀ ಬೂದೀಶ್ವರ ಸ್ವಾಮೀಜಿ, ಕುಂದರಗಿಯ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿ ವಹಿಸುವರು. ಗುಳೇದಗುಡ್ಡದ ಶ್ರೀ ಅಭಿನವ ಒಪ್ಪತ್ತೇಶ್ವರಸ್ವಾಮೀಜಿಯವರಿಂದ ಮಂಗಲ ನುಡಿ ಜರುಗಲಿದೆ. ಅಧ್ಯಕ್ಷತೆಯನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ವಹಿಸುವರು. ಮುಖ್ಯ ಅತಿಥಿಗಳಾಗಿ ಬೈಲಹೊಂಗಲ ಮತಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ ಆಗಮಿಸುವರು. ಧಾರವಾಡದ ಖ್ಯಾತ ವೈದ್ಯ ಎಸ್.ಆರ್.ರಾಮನಗೌಡರ ಅವರಿಗೆ ಪ್ರಸಕ್ತ ಸಾಲಿನ ಮುರುಘಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಶ್ರೀ ಹರಿಮಂದಿರದ ಸಂತ ಮಂಡಳಿಯವರಿಂದ ಭಗವನ್ನಾಮ ಸಂಕೀರ್ತನೆ ಜರುಗುವುದು.

ಜ. 28 ರಂದು ಮುಂಜಾನೆ 10.30 ಗಂಟೆಗೆ ಜರುಗುವ ಲಿಂ. ಶ್ರೀ ಬಸವಲಿಂಗ ಸ್ವಾಮಿಗಳ ೬೬ನೇ ಪುಣ್ಯಸ್ಮರಣೋತ್ಸವದ ದಿವ್ಯ ಸಾನಿಧ್ಯವನ್ನು ಮುರಗೋಡದ ಶ್ರೀ ನೀಲಕಂಠ ಸ್ವಾಮೀಜಿ ಸಾನಿಧ್ಯವನ್ನು ಕಮತಗಿಯ ಶ್ರೀ ಹುಚ್ಚೇಶ್ವರ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಅಮೀನಗಡದ ಶ್ರೀ ಶಂಕರರಾಜೇಂದ್ರ ಸ್ವಾಮೀಜಿ ವಹಿಸುವರು. ಸಮ್ಮುಖವನ್ನು ಶ್ರೀ ಅಡವಿಸಿದ್ದೇಶ್ವರ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಬೈಲಹೊಂಗಲದ ಶ್ರೀ ಮಹಾಂತಯ್ಯಶಾಸ್ತ್ರಿಗಳು ಆರಾದ್ರಿಮಠ, ಶ್ರೀ ಗಣಪತಿ ಮಹಾರಾಜರು, ಶ್ರೀ ಸಂಗಮೇಶ ದೇವರು ವಹಿಸುವರು. ಮುಖ್ಯ ಅತಿಥಿಗಳಾಗಿ ಸದಾಶಿವ ಕೌಜಲಗಿ ಆಗಮಿಸುವರು. ಡಾ. ಎಸ್.ಎಲ್.ದಂಡಗಿ, ಶಿವಾನಂದ ಮೇಟಿ ಹಾಗೂ ಪುರಸಭೆಗೆ ಆಯ್ಕೆಗೊಂಡ ನೂತನ ಸದಸ್ಯರಿಗೆ ಸನ್ಮಾನ ಜರುಗುವುದು. ನಂತರ ಪ್ರಸಾದ ವಿತರಣೆ ಜರುಗಲಿದೆ.

ವರದಿ : ವೈ ಬಿ ಕಡಕೋಳ

Related Articles

ಪ್ರತಿಕ್ರಿಯೆ ನೀಡಿ

Latest Articles