ವಸಂತ ನವರಾತ್ರಿ ಶ್ರೀರಾಮೋತ್ಸವ

ಬೆಂಗಳೂರು: ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಏಪ್ರಿಲ್ 2 ರಿಂದ 13ರ ವರೆಗೆ “ವಸಂತ ನವರಾತ್ರಿ ಶ್ರೀರಾಮೋತ್ಸವ” ಕಾರ್ಯಕ್ರಮ ಏರ್ಪಡಿಸಿದೆ.

ಏಪ್ರಿಲ್ 2- ಬೆಳಗ್ಗೆ 7 ರಿಂದ 12 ಗಂಟೆಯವರೆಗೆ ಸೂರ್ಯನಮಸ್ಕಾರ, ರಾಮಾಯಣ ಪಾರಾಯಣ, ಶ್ರೀರಾಮ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು, ನಂತರ ತೀರ್ಥ ಪ್ರಸಾದ ವಿನಿಯೋಗ. ಸಂಜೆ 5 ಗಂಟೆಗೆ ಪಂಚಾಂಗ ಶ್ರವಣ.

ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6-30ಕ್ಕೆ :

ಏಪ್ರಿಲ್ 2-ವಿ|| ಸೀತಾ ಸತ್ಯನಾರಾಯಣ ಅವರಿಂದ “ಸಂಗೀತ”,

ಏಪ್ರಿಲ್ 3-ನೃತ್ಯ ಲಹರಿ ಕಲಾಕೇಂದ್ರ ಟ್ರಸ್ಟ್ ವಿದ್ಯಾರ್ಥಿಗಳಿಂದ ಭರತನಾಟ್ಯ (ನಿರ್ದೇಶನ: ವಿ|| ಶ್ರೀಮತಿ ರೂಪಾ ಗಿರೀಶ್,

ಏಪ್ರಿಲ್ 4- ರಮಣ ಮಹರ್ಷಿ ಸೆಂಟರ್ ಫಾರ್ ಲರ್ನಿಂಗ್ ಮತ್ತು ಸಂಗಡಿಗರಿಂದ “ಭಕ್ತಿ ಗೀತೆಗಳು”, ಏಪ್ರಿಲ್ 5- ಶ್ರೀ ಶಾರದಾ ಶಂಕರ ಭಜನಾ ಮಂಡಳಿಯಿಂದ ಭಜನೆ,

ಏಪ್ರಿಲ್ 6- ಶ್ರೀ ಸೀತಾರಾಮ ಮುನಿಕೋಟಿಯವರಿಂದ “ಭದ್ರಾಚಲ ರಾಮದಾಸ್” ವಿಷಯವಾಗಿ “ಹರಿಕಥೆ”,

ಏಪ್ರಿಲ್ 7- ಶ್ರೀಮತಿ ರಮ್ಯಾ ಸುಧೀರ್ ಇವರಿಂದ “ಹರಿನಾಮ ಸಂಕೀರ್ತನೆ” ತಬಲಾ : ಶ್ರೀ ಶ್ರೀನಿವಾಸ ಕಾಖಂಡಕಿ, ಕೀ-ಬೋರ್ಡ್: ಶ್ರೀ ಅಮಿತ್ ಶರ್ಮಾ,

ಏಪ್ರಿಲ್ 8-ವಿ|| ಅಪ್ರಮೇಯ ಜಿ. ವಸಿಷ್ಠ “ಕರ್ನಾಟಕ ಶಾಸ್ತ್ರೀಯ ಸಂಗೀತ”,

ಏಪ್ರಿಲ್ 9-ವಿ|| ಆರ್ ಕೆ ಪ್ರಸನ್ನಕುಮಾರ್ ಮತ್ತು ಆರ್ ಪಿ ಪ್ರಶಾಂತ್ “ಗಾಯನ”,

ಏಪ್ರಿಲ್ 10- ಶ್ರೀರಾಮ ನವಮಿ : (ಬೆಳಗ್ಗೆ 9 ರಿಂದ 12 ಗಂಟೆಯವರೆಗೆ) ಶ್ರೀ ರಾಮ ದೇವರಿಗೆ ಪಂಚಾಮೃತ, ರಾಮದೇವರಿಗೆ ತೊಟ್ಟಿಲು ಸೇವೆ, ಪಾನಕ ಸೇವೆ, ಸಂಜೆ 4ಕ್ಕೆ ಶ್ರೀಮತಿ ವತ್ಸಲಾ ರಾವ್ ಅವರ ಸ್ತುತಿ ವಾಹಿನಿ ತಂಡದವರಿಂದ ಭಜನೆ, 6-30ಕ್ಕೆ ಶ್ರೀಮತಿ ಚಾಂದಿನಿ ಗರ್ತಿಕೆರೆ ಇವರಿಂದ “ಹರಿನಾಮ ಸಂಕೀರ್ತನೆ” ಮೃದಂಗ : ಶ್ರೀ ಶ್ರೀನಿವಾಸ್ ಅನಂತರಾಮಯ್ಯ, ಪಿಟೀಲು : ಶ್ರೀಮತಿ ವಾಸುಕಿ ಪರಿಮಳ,

ಏಪ್ರಿಲ್ 11- ಜಪಮಾಲಾಸರ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ “ನೃತ್ಯ ಕಾರ್ಯಕ್ರಮ”,

ಏಪ್ರಿಲ್ 12- ವಿ|| ಜೆ.ಎ. ಭಾಗೀರಥಿ ಮತ್ತು ಜೆ.ಎ. ಜಯಲಕ್ಷ್ಮಿ ಮತ್ತು ತಂಡದವರಿಂದ ಸಂಗೀತ,

ಏಪ್ರಿಲ್ 13- ಬೆಳಗ್ಗೆ 7ಕ್ಕೆ ಮೂಲದೇವರಿಗೆ ಮಹಾಭಿಷೇಕ, 10ಕ್ಕೆ ಪಟ್ಟಾಭಿಷೇಕ, 12-45ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ, ಸಂಜೆ 7ಕ್ಕೆ ಪ್ರಾಕಾರೋತ್ಸವ, ಮಹಾಮಂಗಳಾರತಿ.

ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕೆಂದು ರಾಮಮಂದಿರದ ಗೌರವ ಅಧ್ಯಕ್ಷರಾದ ಶ್ರೀ ದಕ್ಷಿಣಾಮೂರ್ತಿ (ಶ್ರೀ ದತ್ತು) ಹಾಗೂ ಗೌರವ ಕಾರ್ಯದರ್ಶಿಗಳಾದ ಶ್ರೀ ಸಿ. ಚಂದ್ರಶೇಖರ್ ಅವರು ವಿನಂತಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles