ನಮ್ಮ ನಾಡು ಕರ್ನಾಟಕ ಭಿನ್ನತೆಯಲ್ಲಿ ಏಕತೆಯನ್ನು ಸಾರುವ ಸಂದೇಶವನ್ನು ನೀಡುತ್ತದೆ. ಅಂತಹ ವಿಶಿಷ್ಟ ಸಂಸ್ಕೃತಿ ನಮ್ಮದು. ಇವತ್ತಿನಿಂದ ನಾಕಾರು ದಿನ ರಾಜ್ಯದ ಗಡಿಜಿಲ್ಲೆಗಳ ಬಗ್ಗೆ ಅಲ್ಲಿನ ವಿಶೇಷತೆಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ಮಾಹಿತಿ ಹಂಚಿಕೊಳ್ಳಲಿದ್ದಾರೆ ಚಿಂತಕ ಧಾರವಾಡದ ಹನುಮೇಶ್. ಜಿ ಮಳಗಿ ಅವರು.
ಎಲ್ಲಾದರೂ ಇರು ನೀ ಕನ್ನಡಿಗನಾಗಿರು ಎನ್ನುವುದರ ಜೊತೆಗೆ ಇಲ್ಲಿರುವ ನೀವು ಮರಾಠಿಗರೇ ಆಗಿರಿ, ಆಂಧ್ರದವರೇ ಆಗಿರಿ, ತಮಿಳಿಗರೇ ಆಗಿರಿ ಅಥವಾ ಯಾರೇ ಆಗಿರಿ ಕನ್ನಡಿಗರಾಗಿರದಿದ್ದರೇನಾಯಿತು ಕರ್ನಾಟಕದವರಾಗಿರಲು ಯಾವುದೇ ಸಂಕೋಚ ಬೇಡ.
ನಾವು ನಿಮ್ಮನ್ನು ನಮ್ಮವರನ್ನಾಗಿಸಿಕೊಂಡಿದ್ದೇವೆ. ಅದರಂತೆ ನೀವೂ ಕೂಡಾ ನಮ್ಮೊಂದಿಗೆ ಹೊಂದಿಕೊಂಡಿದ್ದೀರಿ. ಒಂದಾಗಿರಲು ಹಿಂಜರಿಕೆಬೇಡ. ಎಲ್ಲ ಸೇರಿ ನಮ್ಮ ನಾಡನ್ನು ಕಟ್ಟೋಣ. ಜೈ ಕರ್ನಾಟಕ ಮಾತೆ. ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ.
ಇವತ್ತಿನಿಂದ ನಾಕಾರು ದಿನ ರಾಜ್ಯದ ಗಡಿಜಿಲ್ಲೆಗಳ ಬಗ್ಗೆ ಅಲ್ಲಿನ ವಿಶೇಷತೆಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
ಈ ಎಲ್ಲ ಜಿಲ್ಲೆಗಳೂ ತಮ್ಮ ಅಸ್ಮಿತೆ, ಅಸ್ತಿತ್ವದ ಜೊತೆಜೊತೆಗೇ ಗಡಿರಾಜ್ಯಗಳೊಂದಿಗೂ ಸೌಹಾರ್ದತೆಯಿಂದ ಇರುವುದು ಭಿನ್ನತೆಯಲ್ಲಿ ಏಕತೆಯ ವಿಶ್ವದರ್ಶನ ಮಾಡಿಸುತ್ತವೆ.
೧. ಬೆಂಗಳೂರು ನಮ್ಮ ರಾಜಧಾನಿ. ಬೆಂಗಳೂರು ನಗರ ಹಾಗೂ ಗ್ರಾಮೀಣ ಅಂತ ಎರಡು ಜಿಲ್ಲೆಗಳು. ವಿಶ್ವದ ಎಲ್ಲ ದೇಶಗಳ ಪ್ರಜೆಗಳು ಇಲ್ಲಿದ್ದಾರೆ. ಜಗತ್ತಿನ ಮಾಹಿತಿ ತಂತ್ರಜ್ಞಾನದ ಕೇಂದ್ರಗಳಲ್ಲಿ ಇದೂ ಒಂದು. ಹೆಚ್ಚಿನ ಬೃಹತ್ ಉದ್ಯಮಗಳಿವೆ. ದೇಶದ ಬಾಹ್ಯಾಕಾಶ ವಿಜ್ಞಾನದ ರಾಜಧಾನಿ. ಕಲೆ ಸಿನಿಮಾ ಸಂಗೀತದ ಬೀಡು. ದಕ್ಷಿಣ ಭಾರತದ ಎಲ್ಲ ಭಾಷೆಗಳನ್ನೂ ಕನ್ನಡಿಗರೂ ಸೇರಿ ಹೆಚ್ಚಿನವರು ಮಾತನಾಡುತ್ತಾರೆ. ಸೌಹಾರ್ದತೆ ಇಲ್ಲಿನ ಜೀವಾಳ. ಒಂದೊಮ್ಮೆ ಭಾರತದ ಉದ್ಯಾನ ನಗರಿ ಎಂದು ಹೆಸರು ಪಡೆದಿತ್ತು. ಸರ್ವ ಋತು ಉತ್ತಮ ಹವಾಮಾನ. ಕೆರೆಗಳಿಂದ ತುಂಬಿತ್ತು. ಜನರ ಆಸೆಬುರುಕತನ ಹೆಚ್ಚಿನ ಕೆರೆಗಳನ್ನು ಕಬಳಿಸಿ ವಸತಿ ಸಮುಚ್ಚಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಮೆಟ್ರೋ ರೈಲು, ಫ್ಲೈಓವರ್ಗಳು ಸೌಂದರ್ಯವನ್ನು ಘನತೆಯನ್ನು ಹೆಚ್ಚಿಸಿವೆ. ನಮ್ಮ ಹೆಮ್ಮೆ ನಮ್ಮ ಬೆಂಗಳೂರು. ತಮಿಳನಾಡನ್ನು ಗಡಿ ಹೊಂದಿದ ಜಿಲ್ಲೆ. ವಿಭಿನ್ನತೆ ವೈವಿಧ್ಯವೇ ಏಕಸೂತ್ರದ ರಾಷ್ಟ್ರೀಯತೆಗೆ ಅತ್ಯುತ್ತಮ ಉದಾಹರಣೆ ಬೆಂಗಳೂರು.
೨.ರಾಮನಗರ ತಮಿಳುನಾಡನ್ನು ಗಡಿಯಾಗಿ ಹೊಂದಿದ ಜಿಲ್ಲೆ. ಮೊದಲು ಕ್ಲೋಸ್ ಪೇಟೆ ಎಂದು ಹೆಸರಾಗಿತ್ತು. ಹೊಸಜಿಲ್ಲೆಯಾದ ನಂತರ ಹತ್ತಿರದ ರಾಮಗಿರಿಯಿಂದಾಗಿ ರಾಮನಗರ ಎಂದು ಹೆಸರಾಯಿತು. ಕನಕಪುರದ ಗ್ರಾನೈಟ್ ಕಲ್ಲುಗಳು ಪ್ರಸಿದ್ಧವಾಗಿವೆ..ಸಾವನದುರ್ಗ ಚಾರಣಿರ ನೆಚ್ಚಿ ತಾಣ. ಅಪ್ಪಟ ಕನ್ನಡ ಮಾತನಾಡುವ ಜನರು. ಅನೇಕ ಉದ್ಯಮಗಳ ಜಿಲ್ಲೆಗಳು. ರಾಮನಗರವಂತೂ ರೇಶಿಮೆಯ ರಾಜಧಾನಿ ಅಂತ ಪ್ರಸಿದ್ಧಿ ಪಡೆದ ಜಿಲ್ಲೆ. ಬಿಸಿಬೇಳೆ ಬಾತ್ ಜನಪ್ರೀಯ ಖಾದ್ಯ. ಗಡಿಜಿಲ್ಲೆಯಾದ್ದರಿಂದ ತಮಿಳನ್ನೂ ವ್ಯಾಪಕವಾಗಿ ಮಾತನಾಡುವ ಜನರಿದ್ದಾರೆ.
೩.ಚಾಮರಾಜನಗರವು ಮೊದಲು ಶ್ರಿಅರಿಕೊಟ್ಟಾರ ಎಂಬ ಹೆಸರನ್ನು ಹೊಂದಿತ್ತು. ಮೈಸೂರಿನ ಒಡೆಯರ್ ಮನೆತನದ ಶ್ರೀ ಚಾಮರಾಜ ಅರಸರು ಇಲ್ಲಿ ಹುಟ್ಡಿದ್ದರಿಂದ ಮುಂದೆ ಚಾಮರಾಜನಗರವೆಂದೇ ಹೆಸರಾಯಿತು. ಹನ್ನೆರಡನೆ ಶತಮಾನದ ಪಾರ್ಶನಾಥ ಬಸದಿಯು ಜೈನಧರ್ಮದ ಶ್ರದ್ಧಾಕೇಂದ್ರ. ಮಲೆಮಹಾದೇಶ್ವರ ಬಿಳಿಗಿರಿ ರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ಶಿವನಸಮುದ್ರ, ಬಂಡೀಪುರ ರಾಷ್ಟ್ರೀಯ ಉದ್ಯಾನ ಹುಲಿಗಳ ತವರು, ರೇಶ್ಮೆಯ ಕೇಂದ್ರ. ಗಡಿರಾಜ್ಯದ ತಮಿಳನ್ನೂ ಅತ್ಯಂತ ವ್ಯಾಪಕವಾಗಿ ಮಾತನಾಡುವ ಜನರಿರುವ ಜಿಲ್ಲೆ.
೪.ಕೋಲಾರವಂತೂ ಚಿನ್ನದ ಗಣಿಗಳ ಬೀಡು. ಹೈನುಗಾರಿಕೆ ಮಾವು ಟೊಮೇಟೋ ವಿಶ್ವಪ್ರಸಿದ್ಧಿ ಪಡೆದಿವೆ. ಎರಡನೇ ಶತಮಾನದ ಕೋಲಾರಮ್ಮ ಸೋಮೇಶ್ವರ ದೇವಸ್ಥಾನಗಳೂ ಪ್ರಸಿದ್ಧಿ ಪಡೆದಿವೆ. ತಮಿಳುನಾಡನ್ನು ಆಂಧ್ರವನ್ನೂ ಗಡಿಯಾಗಿ ಹೊಂದಿದ ಜಿಲ್ಲೆ. ಕೋಲಾಹಲ ಕುವಲಲ ಕೋಲಾಹಲಪುರ ಅಂತ ಹಳೆಯ ಹೆಸರು. ಇತಿಹಾಸವು ನಾಕನೆ ಶತಮಾನದ ಗಂಗರವರೆಗೂ ಹೋಗುತ್ತದೆ. ಚಾಲುಕ್ಯ ಚೋಳರ ಯುದ್ಧಭೂಮಿ. ಹನ್ನೆರಡನೆ ಶತಮಾನದಲ್ಲಿ ವಿಷ್ಣುವರ್ಧನ ರಾಜ ಇದನ್ನು ಚೋಳರಿಂದ ವಿಮೋಚನೆಗೊಳಿಸಿದ್ದರ ನೆನಪಿಗಾಗಿ ಬೇಲೂರಿನಲ್ಲಿ ಚೆನ್ನಕೇಶವ ದೇವಸ್ಥಾನ ಕಟ್ಟಿಸಿದ್ದಾಗಿ ತಿಳಿದುಬರುತ್ತದೆ. ಹೆಚ್ಚಿನ ಜನರು ಕನ್ನಡದ ಜೊತೆಗೆ ತಮಿಳನ್ನೂ ತೆಲುಗನ್ನೂ ಸ್ಫುಟವಾಗಿ ಮಾತನಾಡುತ್ತಾರೆ. ಎಲ್ಲೂ ಒಡಕಿನ ಧ್ವನಿಯಿಲ್ಲ.
೫.ಮಂಗಳೂರು (ದಕ್ಷಿಣ ಕನ್ನಡ) ತುಳು ಮಾತೃಭಾಷೆ ಹೊಂದಿರುವವರು. ಕನ್ನಡ, ಮಲೆಯಾಳಂ ಸಹಿತ ಇತರ ಭಾಷೆಗಳನ್ನೂ ಮಾತನಾಡುತ್ತಾರೆ. ಕೇರಳವನ್ನು ಗಡಿ ರಾಜ್ಯವಾಗಿ ಹೊಂದಿದೆ. ಮಂಗಳೂರು ಹೆಂಚುಗಳು ತುಂಬ ಪ್ರಸಿದ್ಧ. ಮಂಗಳೂರು ಮಲ್ಲಿಗೆ, ಯಕ್ಷಗಾನ, ಗೋಡಂಬಿ ಉದ್ಯಮಗಳ ತವರೂರು. ರಾಷ್ಟ್ರದ ಬ್ಯಾಂಕಿಂಗ್ ಹಬ್. ಫಿಶ್ ಕರಿ, ನೀರ್ ದೋಸೆ, ಗೋಳಿಬಜೆ, ಮಂಗಳೂರು ಸ್ಪೆಷಲ್ ಮಸಾಲಾ ದೋಸೆ ತುಂಬ ಪ್ರಸಿದ್ಧ. ಧರ್ಮಸ್ಥಳವಂತೂ ಹಿಂದೂಗಳ ಅತ್ಯಂತ ಪವಿತ್ರ ಯಾತ್ರಾಸ್ಥಳ. ಶ್ರೀಮಂಜುನಾಥಸ್ವಾಮಿ ಆರಾಧ್ಯ ದೈವ. ಅಣ್ಣಪ್ಪಸ್ವಾಮಿ ಕ್ಷೇತ್ರದ ದೈವ. ಭೂತಕೋಲ, ಪಂಜುರ್ಲಿ, ಕಲ್ಲುರ್ಟಿ ಮುಂತಾದ ಭೂತಗಳು ಜನಪದದಲ್ಲಿ ಹಾಸುಹೊಕ್ಕಾಗಿವೆ. ಮಂಗಳೂರು ಮಲ್ಲಿಗೆಯೂ ಸಹಾ. ಮಂಗಳಾದೇವಿ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ, ಹತ್ತಿರದ ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ಶ್ರದ್ಧಾಳುಗಳ ಕೇಂದ್ರಗಳು. ರಥಬೀದಿಯ ಶ್ರೀನಿವಾಸ ದೇವರ ಜಾತ್ರೆಗೆ ಹೊರನಾಡ ಮಂಗಳೂರಿಗರೂ ಸೇರಿ ಲಕ್ಷಾಂತರ ಜನಬರುತ್ತಾರೆ.
೬.ಉಡುಪಿ ಅವಿಭಜಿತ ದಕ್ಷಿಣಕನ್ನಡದ ಗಡಿ ಜಿಲ್ಲೆ ತಮಿಳುನಾಡನ್ನು ಗಡಿ ರಾಜ್ಯವಾಗಿ ಹೊಂದಿತ್ತು. ತುಳು ಮಾತೃಭಾಷೆ ಹೊಂದಿದ ಜನರು. ಬ್ಯಾಂಕಿಂಗ್, ಶಿಕ್ಷಣ ಮುದ್ರಣ, ಆರೋಗ್ಯ ಕ್ಷೇತ್ರದ ಕೇಂದ್ರ. ಮಲ್ಪೆ ಪ್ರಖ್ಯಾತ ಮೀನುಗಾರಿಕೆ ಕೇಂದ್ರ. ಶ್ರೀಕೃಷ್ಣನ ಪರ್ಯಾಯ ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದಿದೆ. ಯಕ್ಷಗಾನ ವಿಶ್ವಪ್ರಸಿದ್ಧ. ಕನ್ನಡವನ್ನೂ ಮಾತೃಭಾಷೆ ಯನ್ನಾಗಿಯೇ ಸ್ವೀಕರಿಸಿದ ಸಹೃದಯರು.
೭.ಕಾರವಾರ ಸಂಪೂರ್ಣ ಕೊಂಕಣಿ ಭಾಷಿಗರು. ಗೋವಾ ಗಡಿ ಹೊಂದಿರುವವರು. ಮೀನುಗಾರಿಕೆ ಪ್ರಧಾನ ಉದ್ಯೋಗ. ಕದಂಬ ಅಂತಾರಾಷ್ಟ್ರೀಯ ನೌಕಾಕೇಂದ್ರ. ಕನ್ನಡ ಮರಾಠಿಯನ್ನೂ ಮಾತೃಭಾಷೆ ಕೊಂಕಣಿ ಜೊತೆಯಲ್ಲಿ ಮಾತನಾಡುತ್ತಾರೆ. ತಾವೆಂದೂ ಕರ್ನಾಟಕದವರಲ್ಲ ಅಂತ ಹೇಳೋದಿಲ್ಲಾ
೮.ಇನ್ನು ಕೊಡಗಿನವರು ಕೇರಳವನ್ನು ಗಡಿಯಾಗಿ ಹೊಂದಿದ್ದಾರೆ. ಕೊಡವ ಮಾತೃಭಾಷೆ. ಕನ್ನಡ ತಮಿಳು ಮಲೆಯಾಳಂ ತುಳು ಭಾಷೆಯನ್ನು ಸ್ಫುಟವಾಗಿ ಮಾತನಾಡುತ್ತಾರೆ. ಕಾಫೀ ಕಿತ್ತಳೆ ಪ್ರಸಿದ್ಧಿ. ಇಲ್ಲಿನ ಜನರು ಪ್ರಖರ ರಾಷ್ಟ್ರಪ್ರೇಮಿಗಳು. ನಮ್ಮ ಜ. ಕಾರ್ಯಪ್ಪ ಯಾರಿಗೆ ಗೊತ್ತಿಲ್ಲ. ಸೈನ್ಯದಲ್ಲು ತಮ್ಮ ಛಾಪು ಮೂಡಿಸಿದ್ದಾರೆ. ಹಾಕಿ ಆಟದಲ್ಲಿ ಅದ್ಭುತ ಪರಿಣಿತಿ ಪಡೆದವರು. ಅಂತಾರಾಷ್ಟ್ರೀಯ ಮಟ್ಟದ ಆಟಗಾರರಿದ್ದಾರೆ.
೯.ಮೈಸೂರಿನವರು ತಮಿಳನಾಡು ಕೇರಳವನ್ನು ಗಡಿಯಾಗಿ ಹೊಂದಿದ್ದಾರೆ. ನಮ್ಮ ಸಾಂಸ್ಕೃತಿಕ ರಾಜಧಾನಿ. ಇಲ್ಲಿನವರ ಕನ್ನಡ ಮಾತು ಅತ್ಯಂತ ಮಧುರ. ದೇಶದ ಉದ್ಯಾನ ನಗರ ಎಂಬ ಪ್ರಸಿದ್ಧಿ. ಸ್ವಚ್ಛಭಾರತ ಅಭಿಯಾನದಲ್ಲಿ ನಂಬರ್ ಒನ್.
೧೦.ಚಿಕ್ಕಬಳ್ಳಾಪುರ ಆಂಧ್ರಪ್ರದೇಶವನ್ನು ಗಡಿಯಾಗಿ ಹೊಂದಿದ ಮತ್ತೊಂದು ಗಡಿ ಜಿಲ್ಲೆ. ಕನ್ನಡ ಮಾತೃಭಾಷೆ. ತೆಲುಗನ್ನೂ ಮನೆ ಭಾಷೆಯಾಗಿ ಹೊಂದಿದ ಅಸಂಖ್ಯ ಜನ ಇದ್ದಾರೆ. ರೇಶಿಮೆ ಇಲ್ಲಿನ ಜನರ ಮುಖ್ಯ ಆದಾಯದ ಉದ್ಯೋಗ. ಭೋಗಾನರಸಿಂಹ ರಂಗನಾಥಸ್ವಾಮಿ ಪ್ರಸಿದ್ಧ ದೇವಸ್ಥಾನಗಳು. ಗುಡಿಬಂಡೆ ಕೋಟೆಯೂ ನಂದೀಬೆಟ್ಟವೂ ಪ್ರಸಿದ್ಧ ತಾಣಗಳು.