1. ಜೇನುತುಪ್ಪವನ್ನು ಸ್ವಲ್ಪ ಕರಿ ಮೆಣಸಿನಪುಡಿಯೊಂದಿಗೆ ಮಿಕ್ಸ್ ಮಾಡಿ ತಿಂದರೆ ಕೆಮ್ಮು ಕಡಿಮೆಯಾಗುವುದು.
2. ತೂಕ ಹೆಚ್ಚಬೇಕೆಂದು ಬಯಸುವವರು ಹಾಲಿನೊಂದಿಗೆ ಜೇನು ತುಪ್ಪ ಹಾಕಿ ಕುಡಿದರೆ ಮೈ ತೂಕ ಹೆಚ್ಚುವುದು.
3. ತೂಕ ಕಮ್ಮಿಯಾಗಬೇಕೆಂದು ಬಯಸುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನಲ್ಲಿ ನಿಂಬೆರಸ, ಜೇನುತುಪ್ಪ ಹಾಕಿ ಕುಡಿಯುವುದರಿಂದ ಬೊಜ್ಜು ಕರಗಿಸಬಹುದು.
4. ವಾಂತಿ ಬಂದಂತೆ ಅನಿಸಿದಾಗ ಸ್ವಲ್ಪ ಶುಂಠಿ ಪುಡಿಗೆ ಜೇನು ತುಪ್ಪ ಮಿಶ್ರಣ ಮಾಡಿ ತಿಂದರೆ ಬಾಯಲ್ಲಿ ನೀರು ಬರುವುದು, ಹೊಟ್ಟೆ ಸಂಕಟ ಕಡಿಮೆಯಾಗುವುದು.
5. ರಕ್ತದೊತ್ತಡ ಸಮಸ್ಯೆಯಿದ್ದರೆ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಸೇವಿಸುವುದು ಒಳ್ಳೆಯದು.
6. ಚಿಕ್ಕಪುಟ್ಟ ಗಾಯಗಳಾದರೆ ಜೇನುತುಪ್ಪ ಹಚ್ಚಿದರೆ ಬೇಗನೆ ಗುಣಮುಖವಾಗುವುದು. 7 ಚಿಕ್ಕ ಮಕ್ಕಳಿಗೆ ಹಾಲು ಕೊಡುವಾಗ ಜೇನು ತುಪ್ಪವನ್ನು ಬೆರೆಸಿ ಕೊಟ್ಟರೆ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ.
8 ಸುಟಗಾಯಕ್ಕೆ ತಕ್ಷಣ ಜೇನು ತುಪ್ಪ ಹೆಚ್ಚುವುದರಿಂದ ಉರಿ ಶಮನವಾಗುತ್ತದೆ ಮತ್ತು ಗಾಯ ಶ್ರೀಘ್ರವೇ ಮಾಯಲು ಸಹಾಯ ಮಾಡುತ್ತದೆ.
9.ದೇಹದ ತೂಕ ಕಡಿಮೆ ಮಾಡಿಕೊಳ್ಳಲು ನಾಲ್ಕು ಟೀ ಚಮಚದಷ್ಟು ಜೇನು ತುಪ್ಪವನ್ನು ಸೇವಿಸಬೇಕು.
10. ಜೇನು ತುಪ್ಪವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುವ ಸಂಭವವಿರುವುದಿಲ್ಲ.
11. ವಸಡುಗಳು ಊದಿಕೊಂಡು ಹಲ್ಲುನೋವು ಉಂಟಾದರೆ, ಜೇನು ತುಪ್ಪದಲ್ಲಿ ನೆನೆಸಿದ ಹತ್ತಿಯನ್ನು ನಾಲ್ಕಾರು ಬಾರಿ ದಿನವೂ ಇಟ್ಟುಕೊಂಡರೆ ಹಲ್ಲುನೋವು ಮತ್ತು ವಸಡಿನ ಊತ ನಿವಾರಣೆಯಾಗುವುದು.
12. ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನು ತುಪ್ಪವನ್ನು ಸವರುವುದರಿಂದ ಗುಣವಾಗುತ್ತದೆ.
13. ಜೇನು ತುಪ್ಪವನ್ನು ಪ್ರತಿದಿನವೂ ಬೆಳಗ್ಗೆ ಎದ್ದ ತಕ್ಷಣ ಬಾಯಿ ತೊಳೆದುಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಚೆನ್ನಾಗಿ ಜೀರ್ಣವಾಗುವುದು. ದೈಹಿಕ ಶಕ್ತಿ ಹೆಚ್ಚುವುದು. ಆಯಾಸ ಮತ್ತು ಆಲಸ್ಯ ದೂರವಾಗಿ ಧಾರಣ ಶಕ್ತಿ ಅಧಿಕಗೊಳ್ಳವುದು.
14. ಮಧುಮೇಹ ರೋಗಿಗಳು ಹಾಗೂ ಕ್ಷಯ ರೋಗಿಗಳು ಜೇನುತುಪ್ಪವನ್ನು ಸೇವಿಸುವುದರಿಂದ ಆರೋಗ್ಯ ಸುಧಾರಿಸುವುದು.
15. ಎಳೆಮಕ್ಕಳಿಗೆ ಸಾಧಾರಣ ಕೆಮ್ಮು ಮತ್ತು ಜ್ವರ ಬಂದಾಗ ಒಂದು ಟೀ ಚಮಚ ತುಳಸಿ ರಸದಲ್ಲಿ ಹತ್ತಾರು ತೊಟ್ಟು ಜೇನುತುಪ್ಪವನ್ನು ಬೆರೆಸಿ ಕುಡಿಸಬೇಕು. ದಿನಕ್ಕೆ ಎರಡು ಬಾರಿ ಕುಡಿಸಿದರೆ ಮೂರೇ ದಿನಗಳಲ್ಲಿ ಮಕ್ಕಳು ಗುಣವಾಗುತ್ತಾರೆ.
16. ಕೀಲುಗಳಲ್ಲಿ ನೋವುಂಟಾಗಿದ್ದರೆ ಆ ಸ್ಥಳಕ್ಕೆ ಸುಣ್ಣ ಮತ್ತು ಜೇನು ತುಪ್ಪವನ್ನು ಮಿಶ್ರ ಮಾಡಿ ಹಚ್ಚಿದರೆ ಶೀಘ್ರವೇ ಪರಿಣಾಮ ಉಂಟಾಗಿ ನೋವು ಮಾಯವಾಗುತ್ತದೆ.
17. ಬಜೆ ಪುಡಿಯೊಂದಿಗೆ ಜೇನು ತುಪ್ಪ ಕೊಡುವುದರಿಂದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
18. ಪಪ್ಪಾಯಿ ಹಣ್ಣು, ಜೇನುತುಪ್ಪ ಮತ್ತು ಅರಿಶಿನ ಪುಡಿ ಮುಖಕ್ಕೆ ಲೇಪಿಸುವುದರಿಂದ ಮುಖದ ಮೊಡವೆಗಳು ದೂರವಾಗಿ ಮುಖದ ಕಾಂತಿ ಹೆಚ್ಚಾಗುತ್ತದೆ.