ಭಿನ್ನತೆಯಲ್ಲಿ ಏಕತೆ – ಇದು ನಮ್ಮ ನಾಡಿನ ವಿಶಿಷ್ಟತೆ (ಭಾಗ -೨)

ನಮ್ಮ ನಾಡು ಕರ್ನಾಟಕ ಭಿನ್ನತೆಯಲ್ಲಿ ಏಕತೆಯನ್ನು ಸಾರುವ ಸಂದೇಶವನ್ನು ನೀಡುತ್ತದೆ. ಅಂತಹ ವಿಶಿಷ್ಟ ಸಂಸ್ಕೃತಿ ನಮ್ಮದು. ರಾಜ್ಯದ ಗಡಿಜಿಲ್ಲೆಗಳ ಬಗ್ಗೆ ಅಲ್ಲಿನ ವಿಶೇಷತೆಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ಮಾಹಿತಿ ಹಂಚಿಕೊ0ಡಿದ್ದಾರೆ ಚಿಂತಕ ಧಾರವಾಡದ ಹನುಮೇಶ್. ಜಿ ಮಳಗಿ ಅವರು.

11.ತುಮಕೂರು ಜಿಲ್ಲೆಯೂ ಆಂಧ್ರಪ್ರದೇಶವನ್ನು ಗಡಿರಾಜ್ಯವಾಗಿ ಹೊಂದಿದ ಗಡಿಜಿಲ್ಲೆ. ಸಿದ್ಧಗಂಗಾ ಮಠ ವಿಶ್ವಪ್ರಸಿದ್ಧ. ದೇಶದ ಪ್ರಮುಖ ಶೈಕ್ಷಣಿಕ ಜಿಲ್ಲೆ. ತೆಂಗು, ನಾರು ಉದ್ಯಮ ಮ್ಯಾಂಗನೀಸ್ ಕಬ್ಬಿಣ ಗ್ರಾನೈಟ್ ಉದ್ಯಮಕ್ಕೆ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯ ಮಧುಗಿರಿ ಪಾವಗಡ ಪ್ರದೇಶದಲ್ಲಿ ತೆಲುಗನ್ನೂ ವ್ಯಾಪಕವಾಗಿ ಬಳೆಸುತ್ತಾರೆ.

12. ಬಳ್ಳಾರಿಯು ಆಂಧ್ರವನ್ನು ಗಡಿರಾಜ್ಯವಾಗಿ ಹೊಂದಿದ ಮತ್ತೊಂದು ಜಿಲ್ಲೆ. ವಿಶ್ವಪ್ರಸಿದ್ಧ ಪಾರಂಪರಿಕ ಹಂಪಿಯು ಈ ಜಿಲ್ಲೆಯಲ್ಲಿದೆ. ವಿಜಯನಗರ ಸಾಮ್ರಾಜ್ಯದ ಭಾಗ. ಗಣಿಗಳ ನಾಡು. ಹಂಪೀವಿರೂಪಾಕ್ಷ ಯಂತ್ರೋದ್ಧಾರಕ ಆಂಜನೇಯ ಜಗತ್ಪ್ರಸಿದ್ಧ. ವಿಜಯವಿಠ್ಠಲ ಮಂದಿರ ಕಲ್ಲಿನ ರಥವೂ ಅಷ್ಟೇ ವಿಖ್ಯಾತ. ಏಕಶಿಲಾ ಶಿಲ್ಪಕಲೆಯ ಕೇಂದ್ರ. ಕನ್ನಡ ಮಾತೃಭಾಷೆ. ತೆಲುಗುಕೂಡಾ. ಎಲ್ಲೂ ಭಿನ್ನಮಾತಿಲ್ಲ

13.ಚಿತ್ರದುರ್ಗವೂ ಆಂಧ್ರಪ್ರದೇಶವನ್ನು ಗಡಿರಾಜ್ಯವನ್ನಾಗಿ ಹೊಂದಿದ ಗಡಿಜಿಲ್ಲೆ. ಗಡಿಭಾಗದ ಜನರು ಕನ್ನಡದಂತೆಯೇ ತೆಲುಗನ್ನೂ ಸ್ಫುಟವಾಗಿ ಮಾತನಾಡುತ್ತಾರೆ. ಕಲ್ಲಿನಗುಡ್ಡಗಳ ಜಿಲ್ಲೆ. ಮದಕರಿನಾಯಕನ ಕಲ್ಲಿನ ಕೋಟೆಯಂತೆಯೇ ಒನಕೆ ಓಬವ್ವಳೂ ಪ್ರಸಿದ್ಧರು. ಮಹಾಭಾರತದ ಹಿಡಿಂಬಾಸುರ ಅವನ ತಂಗಿ ಭೀಮಪತ್ನಿ ಹಿಡಿಂಬೆ ಇಲ್ಲಿನವರು ಎಂಬುದು ಜನಜನಿತ.

14.ರಾಯಚೂರು ಆಂಧ್ರವನ್ನೂ ತೆಲಂಗಾಣವನ್ನೂ ಗಡಿಯಾಗಿ ಹೊಂದಿದ ಮತ್ತೊಂದು ಗಡಿಜಿಲ್ಲೆ. ರಾಜ್ಯದ ಬತ್ತದ ಕಣಜ. ಮೌರ್ಯರು ಚಾಲುಕ್ಯರು ಬಹಮಮನಿಗಳು ವಿಜಯನಗರದರಸರು ಮೊಘಲರು ಆಳಿದ ನಾಡು. ಹಟ್ಟಿ ಚಿನ್ನದ ಗಣಿ ಪ್ರಸಿದ್ಧ. ಇಡೀ ಜಿಲ್ಲೆ ನೀರಾವರೀ ಸವಬಲಭ್ಯ ಹೊಂದಿದ ಕೃಷಿ ಜಿಲ್ಲೆ. ಕನ್ನಡದಂತೆ ತೆಲುಗು ದಕ್ಖನಿ ಉರ್ದು ಹಿಂದಿ ಭಾಷೆ ಮಾತನಾಡುವ ಜನ.

15. ಯಾದಗಿರಿ ಜಿಲ್ಲೆಯೂ ತೆಲಂಗಾಣವನ್ನು ಗಡಿರಾಜ್ಯವಾಗಿ ಹೊಂದಿದ ಗಡಿಜಿಲ್ಲೆ. ಸಿಮೆಂಟ್ ಉದ್ಯಮದ ಕೇಂದ್ರ ಬಿಂದು. ತೊಗರೀಬೇಳೆಯ ಕಣಜ. ಫರಸೀಕಲ್ಲುಗಳಿಗೆ ಪ್ರಸಿದ್ಧ. ಮಾತೃಭಾಷೆ ಕನ್ನಡ. ತೆಲುಗು ಕೂಡಾ ವ್ಯಾಪಕವಾಗಿ ನೇಯ್ದುಕೊಂಡಿದೆ. ಉರ್ದು ಭಾಷೆಯನ್ನೂ ಚೆನ್ನಾಗಿ ಮಾತನಾಡುತ್ತಾರೆ.

16.ಕಲಬುರ್ಗಿ ಪೂರ್ವದಲ್ಲಿ ತೆಲಂಗಾಣವನ್ನು ಹಾಗೂ ಪಶ್ಚಿಮದಲ್ಲಿ ಮಹಾರಾಷ್ಟ್ರವನ್ನು ಗಡಿರಾಜ್ಯಗಳಾಗಿ ಹೊಂದಿದ ಪ್ರಮುಖ ಜಿಲ್ಲೆ. ಸಿಮೆಂಟ್ ತೊಗರಿಬೇಳೆ ಶಾಬಾದಿ ಫರಸೀಕಲ್ಲುಗಳ ಕೇಂದ್ರ. ಮಳಖೇಡದಲ್ಲಿ ಮಧ್ವಮತದ ಪ್ರಮುಖ ಸನ್ಯಾಸಿ ಶ್ರೀಜಯತೀರ್ಥರ ವೃಂದಾವನ ಇದೆ. ಕನ್ನಡ ಮಾತೃಭಾಷೆ ಯ ಜೊತೆಗೇ ಮರಾಠಿ ಹಿಂದಿ ತೆಲುಗು ಹಾಗೂ ಉರ್ದು ದಕ್ಖನಿ ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಾರೆ.

17.ಬೀದರ್ ಪೂರ್ವದಿಕ್ಕಿನಲ್ಲಿ ತೆಲಂಗಾಣವನ್ನೂ ಪಶ್ಚಿಮದಲ್ಲಿ ಮಹಾರಾಷ್ಟ್ರವನ್ನು ಗಡಿಗಳಾಗಿ ಹೊಂದಿದ ಗಡಿರಾಜ್ಯ. ಕರ್ನಾಟಕ ಮಾತೆಯ ಕಿರೀಟವೆಂದೂ ಪ್ರಸಿದ್ಧ. ಕನ್ನಡ ಮಾತೃಭಾಷೆಯಂತೆಯೇ ಮರಾಠಿ, ತೆಲುಗು, ಉರ್ದು, ದಕ್ಖನಿ ಭಾಷೆಯನ್ನೂ ಮಾತನಾಡುವ ಜನರಿದ್ದಾರೆ. ಸಿಖ್ಖರಿಗೆ ಅತ್ಯಂತ ಪವಿತ್ರ ಗುರುದ್ವಾರವಿದೆ. ಝರಣೀ ನರಸಿಂಹದೇವರ ದೇವಸ್ಥಾನವೂ ಪ್ರಸಿದ್ಧ. ಶಾತವಾಹನರು ಕಲ್ಯಾಣ ಚಾಲುಕ್ಯರು ಮೊಘಲರು ಮೌರ್ಯರು ಬಹಮನಿಗಳು ಆಳಿದ ನಾಡು. ಬಿದರಿ ಕಲೆಯ ಕಲಾಕೇಂದ್ರ. ಉತ್ತರಕರ್ನಾಟಕದ ಅನೇಕ ಜಿಲ್ಲೆಗಳಲ್ಲುದ ಅಪರೂಪದ ತಂಪು ಹವಾಮಾನ. ಎರಡೆರಡು ರಾಜ್ಯಗಳನ್ನು ಗಡಿಯಾಗಿ ಹೊಂದಿದ್ದರೂ ಕರ್ನಾಟಕ ಕನ್ನಡದ ಬಗ್ಗೆ ರಾಜ್ಯಾಭಿಮಾನ ಹೊಂದಿದ ಜನರಿರುವ ಗಡಿಜಿಲ್ಲೆ.

18. ವಿಜಯಪುರ ಮಹಾರಾಷ್ಟ್ರವನ್ನು ಗಡಿರಾಜ್ಯವಾಗಿ ಹೊಂದಿದ ಉತ್ತರಕರ್ನಾಟಕದ ಮತ್ತೊಂದು ಪ್ರಮುಖ ಜಿಲ್ಲೆ. ಕರ್ನಾಟಕದ ಗಂಡುಮೆಟ್ಟಿನ ನಾಡು ಎಂದು ಪ್ರಸಿದ್ಧ. ಕನ್ನಡ ಮಾತೃಭಾಷೆಯ ಜನರಿರುವ ನಾಡು. ಜೊತೆಯಲ್ಲಿಯೇ ಗಡಿ ತಾಲೂಕುಗಳಲ್ಲಿ ಮರಾಠಿಯನ್ನೂ ವ್ಯಾಪಕವಾಗಿ ಮಾತನಾಡುತ್ತಾರೆ. ಜಿಲ್ಲೆಯು ಬಿಜಾಪುರ ಜೋಳಕ್ಕೆ ವಿಶ್ವ ಪ್ರಸಿದ್ಧಿ ಪಡೆದಿದೆ. ಪ್ರಮುಖ ಐತಿಹಾಸಿಕ ಕೇಂದ್ರ. ಪ್ರಮುಖ ಪ್ರವಾಸಿತಾಣ. ಶಾಹಿ ವಂಶಸ್ಥರು ನಿರ್ಮಿಸಿದ ಗೋಲಗುಂಬಜ್ ವಿಶ್ವಪ್ರಸಿದ್ಧ. ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಶರಣ ಚಳುವಳಿಯ ಕನಕ ವಚನ ಸಾಹಿತ್ಯದ ಹರಿಕಾರ ಬಸವಣ್ಣ ಈ ಜಿಲ್ಲೆಯವರು. ಕರ್ನಾಟಕದವರೆಂಬ ಅಭಿಮಾನ ತುಂಬಿದ ಜನ.

೧೯.ಬೆಳಗಾವಿ ಮಹಾರಾಷ್ಟ್ರವನ್ನು ಗೋವಾರಾಜ್ಯವನ್ನು ಗಡಿರಾಜ್ಯವಾಗಿ ಹೊಂದಿದ ಪ್ರಮುಖ ಗಡಿಜಿಲ್ಲೆ. ಹೆಚ್ಚಿನವರು ಮರಾಠಿಯನ್ನು ಮಾತನಾಡುತ್ತಾರೆ. ಕೊಂಕಣಿಯನ್ನೂ ಮಾತನಾಡುವ ಜನರಿದ್ದಾರೆ. ಇಡೀ ಕರ್ನಾಟಕದಲ್ಲಿ ಇಲ್ಲಿ ಮಾತ್ರ ಗಡಿ ವಿವಾದವಿದೆ. ಮಹಾರಾಷ್ಟ್ರದೊಂದಿಗೆ ಗಡಿ ವಿವಾದವು ಜ್ವಲಂತವಾಗಿದೆ. ಕನ್ನಡ ವಿರೋಧಿ ಸಂಘಟನೆ ಎಂಇಎಸ್ ಜಗಳ ಕಾಯುತ್ತಿದೆ. ಸಕ್ಕರೆಯ ನಾಡೆಂದು ಪ್ರಸಿದ್ಧ. ವಿಶ್ವವಿಖ್ಯಾತ ಗೋಕಾಕ್ ಜಲಪಾತ ಪ್ರಮುಖ ಪ್ರವಾಸೀತಾಣ. ಬೆಳಗಾವಿಯಲ್ಲಿಯ ಸುವರ್ಣ ಸೌಧ ಪ್ರಮುಖ ಆಕರ್ಷಣೆ. ಪ್ರಮುಖ ವಿದ್ಯಾಕೇಂದ್ರ.

Related Articles

ಪ್ರತಿಕ್ರಿಯೆ ನೀಡಿ

Latest Articles