ಕಾರ್ತಿಕ ಸಂಗೀತೋತ್ಸವ, ಕನಕ ಜಯಂತಿ

ಬೆಂಗಳೂರು: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ (ರಿ.) ವತಿಯಿಂದ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ, ನವೆಂಬರ್ 11 ರಿಂದ 13 ರವರೆಗೆ ಕಾರ್ತಿಕ ಸಂಗೀತ ಸಂಭ್ರಮ, ಶ್ರೀ ಕನಕದಾಸ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಲವಾರು ಸಾಂಸ್ಕೃತಿಕ/ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

ನವೆಂಬರ್ 11, ಶುಕ್ರವಾರ: ಸಂಜೆ 6-00 ಗಂಟೆಗೆ, ವಿ|| ವೈ. ಜಿ. ಶ್ರೀಲಲಿತಾ (ಅನನ್ಯ-ನಾದಜ್ಯೋತಿ ಪುರಸ್ಕೃತೆ) ಇವರಿಂದ ಗಾಯನ ವಿ|| ಕಾರ್ತಿಕೇಯ ರಾಮಚಂದ್ರ (ಪಿಟೀಲು), ವಿ|| ನಿಕ್ಷಿತ್ ಪುತ್ತೂರು (ಮೃದಂಗ).

ನವೆಂಬರ್ 12, ಶನಿವಾರ : ಸಂಜೆ 6 ಗಂಟೆಗೆ ವಿ|| ಸಾಯಿತೇಜಸ್ ಚಂದ್ರಶೇಖರ್ ಇವರಿಂದ ಹಾರ್ಮೋನಿಯಂ ವಾದನ, ಕು|| ಹ್ರಿಷಿತಾ ಕೇದಗೆ (ಪಿಟೀಲು), ವಿ|| ಕೆ.ಕೆ. ಹರಿನಾರಾಯಣ್ (ಮೃದಂಗ), ವಿ|| ಶ್ರೀನಿಧಿ ಆರ್. ಕೌಂಡಿನ್ಯ (ಘಟ).

ನವೆಂಬರ್ 13, ಭಾನುವಾರ: ಸಂಜೆ 5 ಗಂಟೆಗೆ ಹರಿದಾಸ ರೂಪಕ : “ಹರಿದಾಸರು ಕಂಡ ಶ್ರೀಕೃಷ್ಣ” ಶೀರ್ಷಿಕೆಯಲ್ಲಿ ಶ್ರೀಕೃಷ್ಣನನ್ನು ಕುರಿತು ಹರಿದಾಸರುಗಳು ರಚಿಸಿದ ಕೃತಿಗಳ ನಿರೂಪಣೆ ಸಹಿತ ಗಾಯನ. ನಿರೂಪಣೆ : ಡಾ|| ವಿನಾಯಕಾಚಾರ್, ಗಾಯನ : ವಿ|| ಶ್ರೀಮತಿ ದಿವ್ಯಾ ಗಿರಿಧರ್, ವಿ|| ದೀಪಕ್ ಮೂರ್ತಿ (ಪಿಟೀಲು), ವಿ|| ಪೃಥ್ವಿಕೃಷ್ಣ (ಮೃದಂಗ). ಸಂಜೆ 7ಕ್ಕೆ ಶ್ರೀ ಪುರಂದರದಾಸರ ನವರತ್ನ ಮಾಲಿಕಾ ಗೋಷ್ಠಿ ಗಾಯನ : ವಿ|| ರೇಖಾ ಪ್ರಸಾದ್ (ಗಾಯನ), ವಿ|| ಸಿಂಧೂ ಪುತ್ತೂರಾಯ (ಪಿಟೀಲು), ವಿ|| ವೆಂಕಟಸುಬ್ಬು (ಮೃದಂಗ), ವಿ|| ಕಾರ್ತೀಕ್ ರಾಜನ್ (ಘಟ).

Related Articles

ಪ್ರತಿಕ್ರಿಯೆ ನೀಡಿ

Latest Articles