ಬೆಂಗಳೂರು: ವಯ್ಯಾಲಿಕಾವಲ್ ಎಕ್ಸ್ ಟೆನ್ಷನ್ ಅಸೋಸಿಯೇಷನ್ (ರಿ.) ನವರು ಮಾರ್ಚ್ 22 ರಿಂದ ಏಪ್ರಿಲ್ 5ರ ವರೆಗೆ ವಯ್ಯಾಲಿಕಾವಲಿನ 9ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಮ ದೇವಸ್ಥಾನದಲ್ಲಿ 57ನೇ ಶ್ರೀರಾಮ ನವಮಿ ಉತ್ಸವವನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಧಾರ್ಮಿಕ ಕಾರ್ಯಕ್ರಮಗಳು : ಮಾರ್ಚ್ 22-ಪಂಚಾಂಗ ಶ್ರವಣ, 29-ಸೀತಾ ಕಲ್ಯಾಣ, 30-ಶ್ರೀರಾಮ ನವಮಿ ಪೂಜಾ ಮತ್ತು ಉತ್ಸವ, 31-ಹನುಮಂತೋತ್ಸವ, ಏಪ್ರಿಲ್ 2-ಶಯನೋತ್ಸವ, 3-ವಸಂತೋತ್ಸವ, 5-ಶ್ರೀರಾಮ ಪಟ್ಟಾಭಿಷೇಕ ಮತ್ತು 6- ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ.
ಸಂಗೀತ ಕಾರ್ಯಕ್ರಮಗಳು :
(ಪ್ರತಿದಿನ ಸಂಜೆ 6-30ಕ್ಕೆ) : ಮಾರ್ಚ್ 22- ವಿ|| ಡಾ. ಉಮಾ ಕುಮಾರ್ ಮತ್ತು ಸಂಗಡಿಗರು, ಮಾ.23-ವಿ|| ಸಿ.ಕೆ. ಪವನ್ ದೀಪ್ ಮತ್ತು ಸಂಗಡಿಗರು, ಮಾ.24-ವಿ|| ಆರ್. ಸಿಂಧು ಮತ್ತು ಸಂಗಡಿಗರು, ಮಾ.25-ವಿ|| ವಿನಯ್ ಶರ್ವ ಎಸ್.ಆರ್. ಮತ್ತು ಸಂಗಡಿಗರು, ಮಾ.26-ವಿ|| ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಮತ್ತು ಸಂಗಡಿಗರು, ಮಾ.27-ವಿ|| ಅಂಜಲಿ ಶ್ರೀರಾಮ್ ಮತ್ತು ಸಂಗಡಿಗರು, ಮಾ.28-ವಿ|| ಡಾ. ಆರ್. ಶೇಷಪ್ರಸಾದ್ ಮತ್ತು ಸಂಗಡಿಗರು, ಮಾ.29-ವಿ|| ಮಾನಸಿ ಪ್ರಸಾದ್ ಮತ್ತು ಸಂಗಡಿಗರು, ಮಾ.30-ವಿ|| ಚಂಪಾ ಶ್ರೀಧರ್ ಮತ್ತು ಸಂಗಡಿಗರು, ಮಾ.31-ವಿ|| ಡಾ. ಸುಮಾ ಸುಧೀಂದ್ರ ಮತ್ತು ಸಂಗಡಿಗರಿಂದ ವೀಣಾವಾದನ, ಏಪ್ರಿಲ್ 1-ವಿ|| ಅನಾಹಿತ , ವಿ|| ಅಪೂರ್ವ (ಚೆನ್ನೈ) ಮತ್ತು ಸಂಗಡಿಗರು, ಏ.2-ವಿ||ಕಾರ್ತೀಕ್ ಎಂ.ವಿ. ಮತ್ತು ಸಂಗಡಿಗರು, ಏ.3-ವಿ|| ಡಾ. ಸುಚೇತನ್
ರಂಗಸ್ವಾಮಿ ಮತ್ತು ಸಂಗಡಿಗರಿಂದ “ಹರಿದಾಸ ಸಂಯೋಜನೆಗಳ ಗಾಯನ”, ಏ.4-ವಿ|| ಭಾವನಾ ಉಮೇಶ್ ಮತ್ತು ಸಂಗಡಿಗರು “ಹರಿದಾಸ ವಾಣಿ”, ಏಪ್ರಿಲ್ 5-ವಿ|| ಸುಮಾ ಐತಾಳ್ ಹಾಗೂ ಅವರ ಶಿಷ್ಯವೃಂದ ಮತ್ತು ಅತಿಥಿ ನಾಟ್ಯ ಕಲಾವಿದರಾದ ಭಾರತಿ ವಿಠ್ಠಲ್ ರವರಿಂದ “ಭರತನಾಟ್ಯ” ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಸಂಗೀತ ಪ್ರೇಮಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಡಾ|| ಭಾಷ್ಯಂ ಚಕ್ರವರ್ತಿ ಹಾಗೂ ಗೌರವ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ್ ಅವರು ವಿನಂತಿಸಿದ್ದಾರೆ.