ಕೊಡ್ಲಮನೆ ಮಹಾವಿಷ್ಣುಆರಾಧನೆ, ಮಹಾರಥೋತ್ಸವ ಫೆ.26 ರಂದು

*ಬಳಕೂರು ವಿ ಎಸ್ ನಾಯಕ

ಹೊನ್ನಾವರ: ಜೈನರ ನೆಲೆಬೀಡಾಗಿದ್ದ ಕರಾವಳಿ ತೀರದ ಹೊನ್ನಾವರ ತಾಲೂಕು ಸರ್ವಧರ್ಮ ಸಮನ್ವಯತೆಗೆ ಹೆಸರಾಗಿದೆ. ಇಲ್ಲಿ ಬಹಳಷ್ಟು ಪ್ರಸಿದ್ಧ ದೇವಾಲಯಗಳು ಇದ್ದು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಹೊನ್ನಾವರ ತಾಲೂಕಿನ ಬಳಕೂರು ಗ್ರಾಮದ ಶ್ರೀ ಕೊಡ್ಲಮನೆ ಮಹಾ ವಿಷ್ಣು ದೇವಾಲಯವು ಜಿಲ್ಲೆಯ ಜಾಗೃತ ಸ್ಥಳಗಳಲ್ಲಿ ಒಂದಾಗಿದೆ.

ಈ ದೇವಾಲಯ ಸುಮಾರು 500 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದು ಬಳಕೂರು ಗ್ರಾಮದ ಆರಾಧ್ಯ ದೈವವಾಗಿದೆ. ಈಗ ಇಲ್ಲಿ ಜಾತ್ರಾ ಮಹೋತ್ಸವ.

ಸಡಗರ ಇಲ್ಲಿ ಫೆಬ್ರವರಿ ತಿಂಗಳ 21ರಂದು ಆರಂಭವಾಗಿ 28ರ ತನಕ ಕಾರ್ಯಕ್ರಮಗಳು ನಡೆಯುತ್ತವೆ. ಶ್ರೀದೇವರ 19ನೆಯ ಪುನ: ಪ್ರತಿಷ್ಠಾ ವರ್ಧಂತಿ ಉತ್ಸವ ನಡೆಯಲಿದೆ.

ಈ ವರ್ಷದ ರಥೋತ್ಸವದ ವಿಶೇಷ ಏನೆಂದರೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಇಲ್ಲಿ ಎಲ್ಲಾ ಕಾರ್ಯಕ್ರಮಗಳು ಜರುಗಲಿದೆ. ಇಲ್ಲಿನ ಪ್ರಮುಖ ಕಾರ್ಯಕ್ರಮಗಳಲ್ಲಿ ಶತ ಕುಂಬಾಭಿಷೇಕ, ರಂಗಪೂಜೆ ಸಾನ್ನಿಧ್ಯ ಹವನ, ಶ್ರೀ ದೇವರ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ಶ್ರೀ ಗಣ ಹೋಮ, ಶ್ರೀ ಧ್ವಜಾರೋಹಣ, ಶ್ರೀ ಅವ ಬ್ರತೋತ್ಸವ, ಆವೇಶ ದ್ವಾರ ಅಂಕುರ ಪ್ರಸಾದ ವಿತರಣೆ, ಶ್ರೀ ಸಪ್ತಪ್ರಹರ ಹರಿನಾಮ ಸಂಕೀರ್ತನೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿದೆ.

25 ರಂದು ಶ್ರೀದೇವರ ಪುಷ್ಪರಥೋತ್ಸವ ನಡೆಯಲಿದೆ. 26 ರಂದು ಮಹಾರಥೋತ್ಸವ ಮತ್ತು ವಿಷ್ಣುಮೂರ್ತಿ ಆರಾಧನೆ ಮಹೋತ್ಸವ ನಡೆಯಲಿದೆ. ಅದೇ ದಿನ ರಾತ್ರಿ ಮೃಗ ಬೇಟೆ ಉತ್ಸವ ಕೂಡ ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಹೀಗೆ ಬಹಳ ಪುರಾತನ ಕಾಲದಿಂದಲೂ ಆಚರಿಸಿಕೊಂಡ ಹಲವಾರು ಧಾರ್ಮಿಕ ವಿಧಾನ ವಿಧಿ ವಿಧಾನಗಳು ವಿಜೃಂಭಣೆಯಿಂದ ನಡೆಯಲಿವೆ. ಕೊಡ್ಲಮನೆ ಮಹಾವಿಷ್ಣು ದೇವರು ರಥದಲ್ಲಿ ವಿರಾಜಮಾನವಾಗಿ ಕುಳಿತು ರಥದಲ್ಲಿ ಸಾಗುವ ರೀತಿಯನ್ನು ಕಣ್ತುಂಬಿಕೊಳ್ಳಬೇಕಾದರೆ ಆ ದಿನ ಎಲ್ಲಾ ಭಕ್ತರು ದೇಶ ವಿದೇಶಗಳಿಂದ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಇಲ್ಲಿಗೆ ಬರಲು ಹೊನ್ನಾವರದಿಂದ ಕರ್ನಾಟಕ ರಸ್ತೆ ಸಾರಿಗೆ ಬಸ್ ಸೌಲಭ್ಯ ಮತ್ತು ಟೆಂಪೋ ಸೌಲಭ್ಯವಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles