ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿಅ.15ರಿಂದ 25ರ ವರೆಗೆ ಶರನ್ನವರಾತ್ರಿ ಉತ್ಸವ ಇರಲಿದೆ.ಅ.14ರಂದು ಭಾದ್ರಪದ ಅಮಾವಾಸ್ಯೆಯ ದಿನ ಜಗನ್ಮಾತೆ ಶ್ರೀ ಶಾರದಾಂಬೆಗೆ ಮಹಾಭಿಷೇಕ ನೆರವೇರಲಿದೆ. ಅಂದು ಶ್ರೀ ಶಾರದೆ ಜಗತ್ಪ್ರಸೂತಿಕಾ ಅಲಂಕಾರದಲ್ಲಿಕಂಗೊಳಿಸಲಿದ್ದಾಳೆ.
ಅ.15ರಂದು ಶ್ರೀ ಶಾರದಾಪ್ರತಿಷ್ಠೆ, ಬ್ರಾಹ್ಮಿ ಅಲಂಕಾರ, ಅ.16-ಹಂಸವಾಹಿನಿ ಅಲಂಕಾರ, ಅ.17-ಮಾಹೇಶ್ವರಿ, ಅ.18 ಮಯೂರ ವಾಹನ ಅಲಂಕಾರ, ಅ.19ರಂದು – ವೈಷ್ಣವಿ ಅಲಂಕಾರ ಹಾಗೂ ಶತಚಂಡೀಯಾಗ, ಪುರಶ್ಚರಣಾರಂಭ. ಅ.20- ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರ. ಅ.21-ಮೋಹಿನಿ ಅಲಂಕಾರ, ಅ.22-ರಾಜರಾಜೇಶ್ವರಿ ಅಲಂಕಾರ. ಅ.23-ಮಹಾನವಮಿ ವಿಶೇಷ. ಸಿಂಹವಾಹನಾಲಂಕಾರ, ಶತಚಂಡೀಯಾಗದ ಪೂರ್ಣಾಹುತಿ, ಗಜಾಶ್ವಪೂಜೆ, ಸಂಜೆ ವಿಜಯೋತ್ಸವ, ಶಮೀಪೂಜೆ ನಡೆಯಲಿದೆ. ಅ.24-ವಿಜಯದಶಮಿ ಸಂಭ್ರಮ, ಗಜಲಕ್ಷ್ಮೀ ಅಲಂಕಾರ, ಲಕ್ಷ್ಮೀನಾರಾಯಣ ಹೃದಯಹೋಮ, ರಾಮಪಟ್ಟಾಭಿಷೇಕ ಸರ್ಗ ಪಾರಾಯಣ ನಡೆಯಲಿದೆ. ಅ.25ರಂದು ಶ್ರೀ ಶಾರದಾಂಬಾ ಮಹಾರಥೋತ್ಸವ, ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನೆರವೇರಲಿದೆ.