ಶೂನ್ಯಾನನಾ ತ್ರಿಶಿರಾನನಾ
ಚತುರಸ್ವಾ ಚತುರಾನನಾ
ಚತುರೋತ್ತರ ದಶಾನನಾ
ಗಾನಭಾರ ರಮಾನನಾ
ವಾಚೋನಿವರ್ತನಾ
ವ್ಯರ್ಥನರ್ತನಾ
ಸಪ್ತಜಿಹ್ವ ಸಪ್ತಭಾವ ಹೃಸ್ವದೀರ್ಘ ತಪ್ತಾನನಾ
ಮುಕ್ತ ಉಕ್ತ ಭಕ್ತ ನಾವ ನಕ್ಕುದಿಕ್ಕು
ವೃಂದಾವನಾ ನಿರ್ಗುಣ ನಿರಾಲಂಬ
ನಿರಂತನ ನಿರ್ಮಲ ಸಗುಣ ಸಹಸ್ರ ವರ್ಣನಾ
ಅನಂತ ಸ್ವನಂತ ತರ್ಪಣಾ
ಜಾರು ಏರು ನಿಂತನಾರು
ಕಾರುಭಾರು ಎಲ್ಲಮೀರು
ಆಗು ನೀನು ಎಲ್ಲ ಅವರು
ಬಾರದೂರು ತಿರುಗದಿರು.
*ಎಚ್ ಜಿ ಮಳಗಿ