ಉಡುಪಿ: ಯಕ್ಷಗಾನ ಕಲಾರಂಗ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮಾರಕ ಯಕ್ಷಗಾನ ಕಲಾರಂಗ ಪ್ರಶಸ್ತಿ ಪುರಸ್ಕೃತ ಗಣೇಶ ಕೊಲೆಕಾಡಿಯವರ ಕಾವ್ಯ ಛಂದ ವಿಚಾರಗೋಷ್ಠಿ ಇಂದು ಡಿಸೆಂಬರ್ 25ರಂದು ಮಧ್ಯಾಹ್ನ 3.30ರಿಂದ 5 ಗಂಟೆಯವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಜಾನಪದ ಯಕ್ಷಗಾನ ವಿದ್ವಾಂಸ ಕುಂಜೂರು ಲಕ್ಷ್ಮೀ ನಾರಾಯಣ ಕುಂಡಂತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಯಕ್ಷಗಾನ ಅರ್ಥಧಾರಿ, ವಾಗ್ಮಿ ವಾದಿರಾಜ ಕಲ್ಲೂರಾಯ-ಪ್ರಸಂಗ ಸಾಹಿತ್ಯ ಸೌಂದರ್ಯ, ಕಲಾವಿಮರ್ಶಕ, ಮದ್ದಳೆಗಾರ ಕೃಷ್ಣ ಪ್ರಕಾಶ್ ಉಳಿತ್ತಾಯ- ನವ ತಾಳ ಶೋಧನ, ಯಕ್ಷಗಾನ ಭಾಗವತರು, ಪ್ರಸಂಗಕರ್ತರು ಆದ ಭವ್ಯಶ್ರೀ ಕುಲ್ಕುಂದ – ಹಿಮ್ಮೇಳ ಪಾಠಕ್ಕೆ ಗುರುತ್ವ, ವಿಶ್ವನಾಥ ಕೆ. ಛಾಂದಸ -ಛಂದೋವೈವಿಧ್ಯದ ಕುರಿತು ಉಪನ್ಯಾಸ ನೀಡಲಿದ್ದಾರೆ.