ಶಿವನನ್ನು ಪರಮೋಚ್ಚ ದೈವ ಎಂದು ಪೂಜಿಸುವವರಿಗೆಲ್ಲ ತಮಿಳುನಾಡಿನ ಚಿದಂಬರಂನಲ್ಲಿರುವ ಶ್ರೀ ನಟರಾಜ ಮಂದಿರ ಅತ್ಯಂತ ಪವಿತ್ರವಾದ ಕ್ಷೇತ್ರಗಳಲ್ಲೊಂದು.
ನಟರಾಜ ದೇವಾಲಯವು ತಮಿಳುನಾಡಿನ ಚಿದಂಬರಂ ನಗರದ ಪ್ರಮುಖ ಆಕರ್ಷಣೆಯಾಗಿದೆ. ಶೈವರ ಪ್ರಮುಖ ಧಾರ್ಮಿಕ ಕೇಂದ್ರ ಇದಾಗಿದ್ದು, ದೇಶದ ನಾನಾ ಮೂಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ದೇವಾಲಯವು ತಮಿಳುನಾಡಿನ ಕಲೆ, ವಾಸ್ತುಶಿಲ್ಪ, ನೃತ್ಯ, ಲಲಿತ ಕಲೆಗಳ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರಿದೆ. 2000 ವರ್ಷಗಳಷ್ಟು ಹಳೆಯದಾದ ಈ ದೇವಾಲಯ ರಾಜರ ಕಾಲದಲ್ಲಿ ಹಲವು ಬಾರಿ ಪುನರ್ ನವೀಕರಣಗೊಂಡಿದೆ. ಇಲ್ಲಿ ಶಿವನನ್ನು ತಿಲ್ಲೈ ಕೂಥನ್ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಇಲ್ಲಿನ ಪ್ರಮುಖ ಮೂರ್ತಿ ನಟರಾಜ. ಶಿವನು ಇಲ್ಲಿ ಪ್ರಣವ ಮಂತ್ರ `ಓಂ’ ರೂಪದಲ್ಲಿ ನೆಲೆಸಿದ್ದಾನೆ ಎಂಬುದು ಭಕ್ತರ ನಂಬಿಕೆ.
ನಾಲ್ಕು ಗೋಪುರಗಳನ್ನು ಹೊಂದಿರುವ ಈ ದೇವಾಲಯ ಆಕರ್ಷಕವಾಗಿದೆ. ದೇವಸ್ಥಾನದ ಒಳಾಂಗಣದಲ್ಲಿ ಶಿಲ್ಪ ಕಲಾ ವೈಭವವನ್ನು ಕಾಣಬಹುದು. ದೇವಾಲಯದ ಪ್ರತಿಯೊಂದು ಕಂಬಗಳು ಭರತನಾಟ್ಯದ ವಿವಿಧ ಭಂಗಿಗಳನ್ನು ವ್ಯಕ್ತಪಡಿಸುತ್ತವೆ. ದೇವಾಲಯವು ಒಂದು ನೃತ್ಯಾಲಯದಂತೆ ಕಾಣುತ್ತದೆ. ನೃತ್ಯವಾಡುವ ಶಿವನಿಗೆ ನಟರಾಜ ಎಂಬ ಹೆಸರೂ ಇದೆ. ಇದೇ ಕಾರಣಕ್ಕೆ ಭರತನಾಟ್ಗಯ ಅಭ್ಯಾಸ ಮಾಡುವವರು ಮೊದಲು ನಟರಾಜನಿಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿರುವ ನಟರಾಜನ ಮೂರ್ತಿ ಆಭರಣದಿಂದ ಅಲಂಕೃತನಾಗಿದ್ದು, ಸಾಂಕೇತಿಕವಾಗಿ ನೃತ್ಯವನ್ನು ಪ್ರತಿನಿಸಿದರೂ ಬ್ರಹ್ಮಾಂಡದ ಚಲನೆಯನ್ನು ಸೂಚಿಸುತ್ತದೆ.
ಈ ದೇಗುಲವು ಒಟ್ಟು 50 ಎಕರೆ ವಿಸ್ತೀರ್ಣವನ್ನು ಹೊಂದಿದೆ. `ಚಿದಂಬರಂ’ ಎಂಬ ಪದವು `ಚಿತ್’ ಅಂದರೆ `ಪ್ರಜ್ಞೆ’ ಹಾಗೂ `ಅಂಬರಂ’ಅರ್ಥಾತ್ `ಆಕಾಶ’ಎಂಬ ಪದದಿಂದಾಗಿದೆ. ಚಿದಂಬರಂ ಅಂದರೆ ಅರಿವಿನ ಆಕಾಶ ಎಂದರ್ಥ.
ಶಿವನ ಪಂಚಕ್ಷೇತ್ರಗಳಲ್ಲಿ ಒಂದು
ಚಿದಂಬರಂ ಈಶ್ವರನ ಆಕಾಶ ಕ್ಷೇತ್ರವಾಗಿದ್ದರೆ, ಆಂಧ್ರಪ್ರದೇಶದ ಕಾಳಹಸ್ತಿಯಲ್ಲಿ ವಾಯು ಕ್ಷೇತ್ರ, ಕಾಂಚೀಪುರಂನಲ್ಲಿ ಪೃಥ್ವಿ ಕ್ಷೇತ್ರ, ತಿರುವನೈಕಾವಲ್ ಜಲ ಕ್ಷೇತ್ರ ಮತ್ತು ತಿರುವಣ್ಣಾಮಲೈ ಅರುಣಾಚಲೇಶ್ವರವು ಅಗ್ನಿ ಕ್ಷೇತ್ರ ಎಂದೇ ಪರಿಗಣಿಸಲ್ಪಟ್ಟಿದೆ.
ಚಿದಂಬರ ರಹಸ್ಯ
ದೇವರ ರಹಸ್ಯವೊಂದನ್ನು ಬಯಲು ಮಾಡಲಾಗುತ್ತದೆ. ಅದುವೇ ಚಿದಂಬರ ರಹಸ್ಯ. ದೇವರನ್ನು ತೋರಿಸುತ್ತೇನೆಂದು ಂದು ನಿರ್ದಿಷ್ಟ ಜಾಗ ಇರುತ್ತದೆ ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಪರದೆಯನ್ನು ಸರಿಸಿ ದೇವರನ್ನು ನೋಡಿ ಎನ್ನುತ್ತಾರೆ. ಅ
ಗೋವಿಂದನ ಸನ್ನಿಧಿ
ಶಿವ ಕ್ಷೇತ್ರಗಳಲ್ಲಿ ಒಂದು. ಇಲ್ಲಿ ಗೋವಿಂದರಾಜನ ಸನ್ನಿಧಿಯೂ ಇದೆ. ಒಂದೇ ತಾಣದಲ್ಲಿ ಶಿವ ಮತ್ತು ಗೋವಿಂದನ ದರ್ಶನವನ್ನು ಪಡೆಯಬಹುದು.