ಸಾಲಿಗ್ರಾಮ: ಉಡಪಿ ಜಿಲ್ಲೆಯ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದಲ್ಲಿ ಬ್ರಹ್ಮರಥೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜನವರಿ 13ರಿಂದ 18ರವರೆಗೆ ನಡೆಯಲಿದೆ.
ಜ. 13ರಂದು ಸಂಜೆ 7.30ಕ್ಕೆ ಮುಹೂರ್ತ ಬಲಿ, ಜಾತ್ರೆಯ ಉತ್ಸಾವಾದಿ ಕಾರ್ಯಕ್ರಮಗಳು ಪ್ರಾರಂಭ, ಕಿರಿ ರಂಗ ಪೂಜೆ.
14ರಂದು ಮಕರಸಂಕ್ರಮಣ ಪ್ರಯುಕ್ತ ನರಸಿಂಹ ಹೋಮ, ಗಣಹೋಮ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 12.30ಕ್ಕೆ ರಜತ ರಥೋತ್ಸವ ಸಂಜೆ 7.30ಕ್ಕೆ ಧ್ವಜಾರೋಹಣ, ಕಿರಿರಂಗಪೂಜೆ, ಉತ್ಸವ ಬಲಿ.
15 ರಂದು ಬೆಳಗ್ಗೆ ವೇದಪಾರಾಯಣ ಉತ್ಸವಾದಿ ಕಾರ್ಯಕ್ರಮಗಳು. ಸಂಜೆ 5.30ರಿಂದ ಸುತ್ತುಸೇವೆ, ರಜತಪಲ್ಲಕ್ಕಿ ಉತ್ಸವ, ಪುರಮೆರವಣಿಗೆ, ಹಿರಿ ರಂಗಪೂಜೆ, ಉತ್ಸವ ಬಲಿ, ಪುಷ್ಪರಥೋತ್ಸವ.
16ರಂದು ಬೆಳಗ್ಗೆ 10.20ಕ್ಕೆ ರಥಾರೋಹಣ, ಸಂಜೆ 6.30ಕ್ಕೆ ರಥಾವರೋಹಣ. ನಂತರ ಓಲಗಮಂಟಪ ಸೇವೆ, ಅಷ್ಟಾವಧಾನ ಸಢವೆ, ಮಹಾಮಂಗಳಾರತಿ, ಭೂತಬಲಿ, ಶಯನೋತ್ಸವ.
17ರಂದು ಬೆಳಗ್ಗೆ ೮ಕ್ಕೆ ಪ್ರಭೋಧೋತ್ಸವ, ಸಾಯಂಕಾಲ ಓಕುಳಿ ಸೇವೆ, ರಜತ ರಥೋತ್ಸವ, ಅವಭೃತ ಸ್ನಾನ, ಅಷ್ಟಾವಧಾನ ಸೇವೆ, ಕಟ್ಟೆ ಓಲಗ, ಧ್ವಜಾವರೋಹಣ, ವಸಂತಾರಾಧನೆ, ಮಂತ್ರಾಕ್ಷತೆ.
18ರಂದು ಬೆಳಗ್ಗೆ ಸಂಪ್ರೋಕ್ಷಣೆ, ಗಣಹೋಮ, ಸಂಜೆ ಕಿರಿ ರಂಗಪೂಜೆ ನೆರವೇರಲಿದೆ.
ಜನವರಿ 14ರಿಂದ ದೇಗುಲದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಆರಂಭಗೊಳ್ಳಲಿದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಭಕ್ತರು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ದೇವಳದ ಪ್ರಕಟಣೆ ತಿಳಿಸಿದೆ.