ಮಾರ್ಚ್ 15 ರಂದು ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 400ನೇ ಪಟ್ಟಾಭಿಷೇಕ

ಶ್ರೀ ಸುಬುಧೇಂದ್ರತೀರ್ಥರು

ಬೆಂಗಳೂರು ನಗರದ ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ,

ಶ್ರೀ ವಿಶ್ವಪ್ರಸನ್ನತೀರ್ಥರು

ಶ್ರೀ 108 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮತ್ತು ವರ್ಧಂತ್ಯೋತ್ಸವ ಸಮಾರಂಭ ಮಾರ್ಚ್ 15 ರಿಂದ 20 ರ ವರೆಗೆ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮಾರ್ಚ್15 ರಂದು 400ನೇ ಪಟ್ಟಾಭಿಷೇಕ ಮಹೋತ್ಸವ

ಈ ಪ್ರಯುಕ್ತ ಬೆಳಗ್ಗೆ 8 ಗಂಟೆಗೆ, ಶ್ರೀ ಗುರುಸಾರ್ವಭೌಮರ ಅಷ್ಟೋತ್ತರ ಸಹಿತ ಸಹಸ್ರ ಕಳಶ ಕ್ಷೀರಾಭಿಷೇಕ ಹಾಗೂ ಸ್ವರ್ಣ ಸಿಂಹಾಸನದಲ್ಲಿ ರಾಯರ ಪಾದುಕಾ ಪಟ್ಟಾಭಿಷೇಕ, ಮಹಾಮಂಗಳಾರತಿ. ಸಂಜೆ 5-30ಕ್ಕೆ ಹೊಸಕೆರೆಹಳ್ಳಿ ಶ್ರೀ ಅಂಭ್ರಣೀಶ ಭಜನಾ ಮಂಡಳಿಯವರಿಂದ ಭಜನೆ, 7 ಗಂಟೆಗೆ ಕು|| ದಿವ್ಯಶ್ರೀ ರಂಗನಾಥ್ ಅವರಿಂದ

ದಿವ್ಯಶ್ರೀ ರಂಗನಾಥ್

“ಸ್ಯಾಕ್ಸೋಫೋನ್” ವಾದನ. ಪಕ್ಕವಾದ್ಯ ಸಹಕಾರದಲ್ಲಿ, ಕು|| ಪೂಜಾ ಶ್ರೀಧರ್ – ಪಿಟೀಲು, ಟಿ. ಆರ್. ನಿಶ್ಚಿತ್ – ಮೃದಂಗದಲ್ಲಿ ಸಾಥ್ ನೀಡುವರು.

ವಿವಿಧ ಭಜನಾ ಮಂಡಳಿಯವರಿಂದ ಭಜನೆ

16 ರಂದು ಸಂಜೆ 5-30ಕ್ಕೆ ಕುಮಾರಸ್ವಾಮಿ ಬಡಾವಣೆಯ ಶ್ರೀ ವೇದವ್ಯಾಸ ಭಜನಾ ಮಂಡಳಿಯವರಿಂದ ಭಜನೆ, 17ರಂದು ವಿಜಯನಗರದ ಶ್ರೀ ಶ್ರೀಕಾಂತ ಭಜನಾ ಮಂಡಳಿಯವರಿಂದ ಭಜನೆ, 18ರಂದು ಇಟ್ಟುಮಡು ಶ್ರೀ ಪೇಜಾವರ ಭಜನಾ ಮಂಡಳಿಯವರಿಂದ ಭಜನೆ, 19-ಶುಕ್ರವಾರ : ಮಲ್ಲೇಶ್ವರದ ಸ್ತುತಿ ವಾಹಿನಿ ಭಜನಾ ಮಂಡಳಿಯವರಿಂದ ಭಜನೆ.

ಮಾರ್ಚ್20 ರಂದು 426ನೇ ಜನ್ಮದಿನೋತ್ಸವ

ಬೆಳಗ್ಗೆ 10 ಗಂಟೆಗೆ ಪೇಜಾವರ ಮಠಾಧೀಶರಾದ ಶ್ರೀ 108 ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಲಕ್ಷ ಪುಷ್ಪಾರ್ಚನೆ ಮತ್ತು ಸಂಸ್ಥಾನ ಪೂಜೆ, ಸಂಜೆ 5-30ಕ್ಕೆ ವಿಜಯನಗರದ ಶ್ರೀ ವರದೇಂದ್ರ ಭಜನಾ

ವಿವೇಕ್ ವಿ. ಕೃಷ್ಣ

ಮಂಡಳಿಯವರಿಂದ ಭಜನೆ. 7-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ವಿವೇಕ್ ವಿ. ಕೃಷ್ಣ ಮತ್ತು ಸಂಗಡಿಗರಿಂದ “ಕೊಳಲು ವಾದನ” ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಭಾಗವಹಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಧಾನ ಅರ್ಚಕರಾದ ಶ್ರೀ ನಂದಕಿಶೋರಾಚಾರ್ ಅವರು ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles