ಹರಿನಾಮ ಸಂಕೀರ್ತನೆ

ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾರ್ಚ್ 11 ರಂದು ಜರುಗಿದ “ಹರಿನಾಮ ಸಂಕೀರ್ತನೆ” ಕಾರ್ಯಕ್ರಮದಲ್ಲಿ ಕು|| ಭೂಮಿಕಾ ಮತ್ತು ಕು|| ಅನ್ವಿತಾ ಸಾವಿತ್ರಿ ಅವರು, “ಮೊದಲ್ವೊಂದಿಪೆ ನಿನಗೆ ಗಣನಾಥ” ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಗಾಯನ ಸೇವೆಯನ್ನು ಪ್ರಾರಂಭಿಸಿದರು.

‘ಎದ್ದು ಬರುತಾರೆ ನೋಡೆ”, “ಬಾರೋ ನಮ್ಮ ಮನೆಗೆ”, “ರಾಯ ಬಾರೋ ರಾಘವೇಂದ್ರ ಬಾರೋ”, “ರಥವನೇರಿದ ಚಂದ್ರ”, “ಶಿವನೇ ನಾ ನಿನ್ನ ಸೇವಕನಯ್ಯಾ”, “ಘಟಿಕಾಚಲದಿ ನಿಂತ”, “ವೀರ ಹನುಮ ಬಹು ಪರಾಕ್ರಮ”, “ನಿಲ್ಲೆ ನಿಲ್ಲೆ ಕೊಲ್ಹಾಪುರ ದೇವಿ”, “ಶೇಷಾಚಲವಾಸ”, “ದಾಸನಾಗು ವಿಶೇಷನಾಗು”, “ರಂಗನಾಥನ ನೋಡುವಾ ಬನ್ನಿ”, ಇನ್ನೂ ಮುಂತಾದ ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ, ಕೊನೆಯಲ್ಲಿ ವಿಜಯದಾಸರ ರಚನೆಯ “ತೊಳಸದಕ್ಕಿಯ ತಿಂಬ” ಎಂಬ ಕೃತಿಯೊಂದಿಗೆ ನಡೆಸಿಕೊಟ್ಟ ಈ ವಿಶೇಷ ಗಾಯನ ಕಾರ್ಯಕ್ರಮ ನೆರೆದಿದ್ದ ಭಕ್ತಾದಿಗಳ ಮನೆ ಸೆಳೆದಿತ್ತು.

ನಂತರ ಮಠದ ಅರ್ಚಕರು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಈ ಮಕ್ಕಳ ಮೇಲೆ ಸದಾ ಇರಲಿ ಎಂದು ಹಾರೈಸುತ್ತಾ ರಾಯರ ಪ್ರಸಾದ ನೀಡಿದರು. ಇವರ ಗಾಯನಕ್ಕೆ ತಬಲಾದಲ್ಲಿ ಶ್ರೀ ಮಧುಸೂದನ್ ಮುತಾಲಿಕ್, ಕೀಬೋರ್ಡ್ ನಲ್ಲಿ ಶ್ರೀ ಬಿ. ಆರ್. ಪ್ರಕಾಶ್ ಅವರು ಸಾಥ್ ನೀಡಿದರು

Related Articles

ಪ್ರತಿಕ್ರಿಯೆ ನೀಡಿ

Latest Articles