* ಡಾ.ಗುರುರಾಜ ಪೋಶೆಟ್ಟಿಹಳ್ಳಿ
ಹರಿದಾಸ ಸಾಹಿತ್ಯದ ಬಾನಿನಲ್ಲಿ ಪ್ರಖರ ತೇಜಸ್ಸಿನ ಉಜ್ವಲ ನಕ್ಷತ್ರ ಶ್ರೀವಾದಿರಾಜರು. ಉಡುಪಿಯ ಶ್ರೀಕೃಷ್ಣನ ಪೂಜಾಮಂದಿರದಲ್ಲಿ ಕನ್ನಡದ ಸರಳ-ಸುಂದರ ಕೀರ್ತನೆಗಳನ್ನು ಹಾಡುವ ಸತ್ಸಂಪ್ರದಾಯವನ್ನು ಸಮರ್ಥವಾಗಿ ಪ್ರಾರಂಭಿಸಿದ ಪ್ರವರ್ತಕ ಮನೀಷಿಗಳು. ಅವರು ತುಳುನಾಡಿನಲ್ಲಿ ಹುಟ್ಟಿ ಬೆಳೆದರು. ಭಾರತದ ನಾನಾ ಕಡೆ ಸಂಚರಿಸಿ, ವಾದಿಗಳನ್ನು ಎದುರಿಸಿ, ತಮ್ಮ ಆಶ್ರಮ ನಾಮವನ್ನು ಸಾರ್ಥಕಪಡಿಸಿಕೊಂಡರು. ಅವರ ವಿದ್ವತ್ತು ಸನ್ಯಾಸನಿಷ್ಠೆ, ವಿಷ್ಣುಭಕ್ತಿ ಮುಂತಾದ ಉತ್ತಮ ಗುಣಗಳನ್ನು ಕಂಡು ಮೆಚ್ಚಿದ ಜನರು ಅವರನ್ನು ಋಜುಗಣಸ್ಥರೆಂದು ಮುಂದೆ ಬ್ರಹ್ಮಪಟ್ಟಕ್ಕೆ ಬರಬಹುದಾದ ಭಾವೀಸಮೀಪರೆಂದು ಕರೆದರು.
ತಾವಿದ್ದ ಪರಿಸರದಲ್ಲೆಲ್ಲಾ ಧಾರ್ಮಿಕ ಜಾಗೃತಿಯ ನವಚೇತನವನ್ನು ಮೂಡಿಸಿ ದಾರ್ಶನಿಕ ಧೃವತಾರೆಗಳೆನಿಸಿ, ಉಪನ್ಯಾಸಮೂರ್ತಿ ಶ್ರೀ ಹಯಗ್ರೀವ ದೇವರ ಮಹಿಮಾತಿಶಯಗಳನ್ನು ಕಂಡು ಹಯವದನ ಅಂಕಿತದಿ0ದ ಸಹಸ್ರಸಹಸ್ರ ಕೀರ್ತನೆಗಳನ್ನು ಕನ್ನಡಿಗರ. ಭಗವದ್ಭಕ್ತರ ಒಡಲಿಗೆ ಹಾಕಿದ ಪುಣ್ಯಪುರುಷರು.
ಇವರ ವಿದ್ವತ್ತು ಸಂನ್ಯಾಸ ನಿಷ್ಠೆ, ವಿಷ್ಣುಭಕ್ತಿ ಮುಂತಾದ ಉತ್ತಮ ಗುಣಗಳಿಂದ ಅವರು ಶ್ರೀಮಧ್ವಾಚಾರ್ಯರ ಸಾದೃಶ್ಯದಲ್ಲಿದ್ದು ಚತುಃಷಷ್ಠಿಕಲಾ ಪ್ರವೀಣರೆಂಬುದಾಗಿ ವ್ಯಕ್ತವಾಗುತ್ತದೆ.
ಉಡುಪಿಯ ಶ್ರೀಕೃಷ್ಣನ ಪೂಜೆಯ ಪರ್ಯಾಯ ವ್ಯವಸ್ಥೆಯನ್ನು ಎರಡು ತಿಂಗಳುಗಳಿಂದ ಎರಡು ವರ್ಷಗಳಿಗೆ ಬದಲಾಯಿಸಿದ್ದು ಇವರ ಸಾಮಾಜಿಕ ಪ್ರತಿಷ್ಠಗೆ ದ್ಯೋತಕವಾಗಿದೆ.
ಸ್ವರ್ಣಕಾರರು, ಕೋಟೇಶ್ವರದವರು ಮೊದಲಾದ ಅನೇಕರಿಗೆ ವೈಷ್ಣವ ದೀಕ್ಷೆ ನೀಡಿ ಉದ್ಧರಿಸಿದ ಇವರ ವಿಶಾಲ ದೃಷ್ಟಿ ಅನುಕರಣೀಯವಾದುದು.
ಅದ್ವೈತ, ಶೈವ ಮತ್ತು ಜೈನ ಪಂಗಡಗಳ ವಾದಿಯನ್ನು ತುಂಬಾ ಸಮರ್ಥವಾಗಿ ಎದುರಿಸಿ ಇವರಿಗೆ ವಾದಿರಾಜರೆಂಬ ಹೆಸರು ಉಚಿತವೇ ಆಗಿದೆ. ಅವರ ವಾದ ಕೌಶಲ್ಯಕ್ಕೆ ತಲೆಬಾಗದ ಪ್ರತಿವಾದಿಯೇ ಆ ಕಾಲದಲ್ಲಿ ಇರಲಿಲ್ಲ. ಪರಮ ಪವಿತ್ರವಾದ ತಿರುಪತಿ ಬೆಟ್ಟವನ್ನು ಮೊಣಕಾಲುಗಳಿಂದಲೇ ಹತ್ತಿ ತಾವು ಗಂಡಕಿ ನದಿಯಿಂದ ತಂದಿದ್ದ ಸಾಲಿಗ್ರಾಮದ ಹಾರವನ್ನು ಶ್ರೀನಿವಾಸನಿಗೆ ಅರ್ಪಿಸಿದರು. ಕುಡುಮ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿಯನ್ನು ಪ್ರತಿಷ್ಠಾಪಿಸಿ ಲೋಕ ಪ್ರಸಿದ್ಧಿ ಆಗುವಂತೆ ಅನುಗ್ರಹಿಸಿದರು.
ಸಾಹಿತ್ಯಕ್ಕೆ ಕೊಡುಗೆ
ತಾವು ಸಂದರ್ಶಿಸಿದ ತೀರ್ಥಕ್ಷೇತ್ರಗಳು ಹಾಗು ಅವುಗಳ ದೇವತೆಗಳ ಮಹಿಮೆಗಳನ್ನು ಶಾಸ್ತ್ರಶುದ್ಧವಾಗಿ ತರ್ಕಬದ್ಧವಾಗಿ ಶ್ಲೋಕರೂಪದಲ್ಲಿ ನಿರೂಪಿಸುವ ಇವರ ತೀರ್ಥಪ್ರಬಂಧ ಕೃತಿಯು ಸಮಗ್ರ ಸಂಸ್ಕೃತದಲ್ಲೇ ವಿನೂತನ ರೀತಿಯ ರಚನೆಯಾಗಿದೆ.
ಗಾಢಗಹನವಾದ ಕಠಿಣ ಶಾಸ್ತ್ರ ಪ್ರಕ್ರಿಯೆಗಳನ್ನು ಸರಳವಾಗಿ ಲೌಕಿಕ ಮುಕ್ತಯುಕ್ತವಾಗಿ ಹೇಳಿರುವ ಅಪೂರ್ವ ಶಾಸ್ತ್ರಗ್ರಂಥ ಯುಕ್ತಿಮಲ್ಲಿಕಾ, ಶ್ರೀ ಕೃಷ್ಣನ ಚರಿತ್ರೆಯನ್ನು ವರ್ಣಿಸುವ ರುಕ್ಮಿಣೀಶ ವಿಜಯವು ನವರಸಭರಿತವಾದ ಒಂದು ಸುಂದರ ಮಹಾಕಾವ್ಯ, ತಮ್ಮ ಕೃತಿಕೌಶಲ್ಯದಿಂದ ಹೊರನಾಡಿನಲ್ಲೂ ಕನ್ನಡಿಗರ ವಿಜಯಧ್ವಜವನ್ನು ಹಿಡಿದೆತ್ತಿ ಯಶೋದಿಂಡಿಮ ಮೊಳಗಿದ ರಾಜರು, ಸಂಭಾಷಣಾ ತಂತ್ರ ಇವರವೈಶಿಷ್ಟ್ಯ.
ವಾದಿರಾಜರ ತಾಯಿ ಭೂವರಾಹಸ್ವಾಮಿಯನ್ನು ಆರಾಧಿಸುತ್ತಾ ಪುತ್ರಪ್ರಾಪ್ತಿಯಾದರೆ ಆ ಸ್ವಾಮಿಗೆ ಲಕ್ಷಾಭರಣವೆಂಬ ಒಂದು ಶ್ರೇಷ್ಠವಾದ ಒಡವೆಯನ್ನು ಸಮರ್ಪಿಸುವುದಾಗಿ ಹರಸಿಕೊಂಡಿದ್ದರ0ತೆ. ಆದರೆ ಆ ಹರಕೆಯನ್ನು ಅವರಿಂದ ಪೂರೈಸಲಾಗಲಿಲ್ಲ. ಆಕೆಯ ಸುಪುತ್ರರೇ ಮಹಾಭಾರತಕ್ಕೆ ಟಿಪ್ಪಣಿ ರೂಪವಾದ ಲಕ್ಷಾಭರಣವನ್ನು ರಚಿಸಿ ದೇವರಿಗೆ ಸಮರ್ಪಿಸಿ ಆಕೆಯನ್ನು ಕೃತಾರ್ಥರನ್ನಾಗಿ ಮಾಡಿದರು.
ಮದುವೆಯ ಮಂಟಪದಲ್ಲಿ ವರನೊಬ್ಬ ಅನಿರೀಕ್ಷಿತವಾಗಿ ಮೃತನಾದಾಗ ಶ್ರೀವಾದಿರಾಜರು ಲಕ್ಷ್ಮಿಶಾಭಾನವೆಂಬ ಬಹುಪ್ರಭಾವಪೂರ್ಣವಾದ, ಲಕ್ಷ್ಮಿದೇವಿಯ ಆಗಮ್ಯ ಮಹಿಮೆಯನ್ನು ವರ್ಣಿಸುವ ಸುಂದರಕಾವ್ಯವೇ ಅವನಿಗೆ ಸಂಜೀವಿನಿ ಸ್ಪರ್ಶವಾಯ್ತು. ಇದನ್ನರಿಯದ ವೈಷ್ಣವರೇ ಇಲ್ಲವೆನ್ನಬಹುದು.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ತೋತ್ರ ಕೃತಿಗಳನ್ನು ಬರೆದಿರುವ ವೈಷ್ಣವ ಗ್ರಂಥಕಾರರೆ0ಬುದು ಇವರ ಮತ್ತೊಂದು ಪ್ರಶಸ್ತಿ.
ತಾಳುವಿಕೆಗಿಂತ ತಪವು ಇಲ್ಲ…
ತಾಳುವಿಕೆಗಿಂತ ತಪವು ಇಲ್ಲ ಎಂಬುದು ಈ ಮಹಾನುಭಾವರು ಜನತೆಗಿತ್ತಿರುವ ಸಂದೇಶ.
ಆವಕಡೆಯಿ0ದ ಬಂದೆ ವಾಜಿವದನನೇ…. ಎಂಬ ಪದ್ಯವನ್ನು ಅವರು ಭಕ್ತಿಪರವಶೆಯಿಂದ ಹಾಡಿದಾಗ ಶ್ರೀಹಯವದನನ ಮೂರ್ತಿ ಇವರ ಹೆಗಲ ಮೇಲೆ ಎರಡು ಕಾಲೂರಿ ಮಡ್ಡಿಯನ್ನು ಮೆಲ್ಲುತ್ತಿದ್ದನಂತೆ.
ಶ್ರೀವಾದಿರಾಜರ ವೇದ ವೇದಾಂಗ ವೇದಾಂತಗಳ ವಿಕ್ರಮದ ಬೌದ್ಧಿಕ ಹಿರಿಮೆಗೆ ಹಾಗು ಅವರ ವಾದಕೌಶಲ್ಯ ವಾಗ್ವೈಖರಿ, ವಿಷಮ ವಿನ್ಯಾಸ ಪಾಠಗಳಿಗೆ ನಿತ್ಯದರ್ಶನವೆನ್ನಿಸುವಂತಹ ಕೃತಿಗಳು, ಸರಸ ಭಾರತಿ ವಿಲಾಸ, ವೈಕುಂಠ ವರ್ಣನೆ, ದಶಾವತಾರ ಸ್ತುತಿ ಇತ್ಯಾದಿ ಕನ್ನಡವರಿಯದ ಕೆಳವರ್ಗದ ಜನಕ್ಕೂ ಪರಮಾತ್ಮನ ಜ್ಞಾನ ದೊರೆಯಲೆಂಬ ಸದಿಚ್ಚೆಯಿಂದ ಅವರಿಗಾಗಿ ತುಳು ಭಾಷೆಯಲ್ಲಿ ಪಾಡ್ಡನಗಳನ್ನು ರಚಿಸಿ ಪಂಡಿತವ0ದ್ಯರಾದ0ತೆ ಪಾಮರೋದ್ಧಕರು ಹೌದು.
ಅಪರಿಮಿತ ಪಾಂಡಿತ್ಯ
ವಾದಿರಾಜರು ವಾದದಲ್ಲಿ ತರ್ಕದಲ್ಲಿ ಅಪರಿಮಿತವಾದ ಪಾಂಡಿತ್ಯವನ್ನು ಹೊಂದಿದ್ದ ಅಗ್ರಗಣ್ಯರು. ಅಷ್ಟೇ ಅಲ್ಲದೆ ವಾದಿರಾಜ ಗುರುಗಳು ಸಂಗೀತದ ಭಂಡಾರವೇ ಆಗಿದ್ದಾರೆ. ಅವರು ಹಾಡುವ ಒಂದೊಂದು ಸ್ವರದಲ್ಲೂ ದೈವಿಕತೆ, ಒಂದೊಂದು ಸ್ವರದಲ್ಲೂ ಸುನಾದದ ಪರಾಕಾಷ್ಠತೆ.
ಕುಡುಮ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿಯನ್ನು ಪ್ರತಿಷ್ಠಾಪಿಸಿ ಲೋಕ ಪ್ರಸಿದ್ಧಿ ಆಗುವಂತೆ ಅನುಗ್ರಹಿಸಿದರು. ತಾವು ಸಂದರ್ಶಿಸಿದ ತೀರ್ಥಕ್ಷೇತ್ರಗಳು ಹಾಗು ಅವುಗಳ ದೇವತೆಗಳ ಮಹಿಮೆಗಳನ್ನು ಶಾಸ್ತçಶುದ್ಧವಾಗಿ ತರ್ಕಬದ್ಧವಾಗಿ ಶ್ಲೋಕರೂಪದಲ್ಲಿ ನಿರೂಪಿಸುವ ಇವರ ತೀರ್ಥಪ್ರಬಂಧ ಕೃತಿಯು ಸಮಗ್ರ ಸಂಸ್ಕೃತದಲ್ಲೇ ವಿನೂತನ ರೀತಿಯ ರಚನೆಯಾಗಿದೆ.
ಇಂದಿಗೂ ಗುರುರಾಜರು ಮಹಿಮೆ ವೈಭವೋಪೇತವಾಗಿ ವಿಜೃಂಭಿಸುತ್ತಾ ಭಕ್ತವೃಂದದ ಕಲ್ಪವೃಕ್ಷ ಎನಿಸಿದ್ದಾರೆ. ವಾದಿರಾಜರ ಪಾದೋದಕ, ಬೃಂದಾವನಸ್ಥ ಮೃತ್ತಿಕಾ ಸೇವನೆಗಳಿಂದ ವ್ಯಾಧಿಗಳು ಪರಿಹಾರವಾಗುತ್ತದೆ. ವಾದಿರಾಜರ ಕವಚ ಮೊದಲಾದ ಸ್ತೋತ್ರಗಳನ್ನು ಪಠಿಸಿದರೆ ವಿದ್ಯೆ, ಬುದ್ಧಿ, ಕೀರ್ತಿ ಹೀಗೆ ತಮಗೆ ಬೇಕಾದ ಇಷ್ಟಾರ್ಥಗಳನ್ನು ಭಕ್ತರು ಪಡೆಯುತ್ತಿದ್ದಾರೆ.