ಹಿಮಾಲಯದ ರಾಜ ದಕ್ಷನಿಗೆ ಉಮಾ ಎನ್ನುವ ಅಪ್ರತಿಮ ಸೌಂದರ್ಯ ಹೊಂದಿದ್ದ ಮಗಳಿದ್ದಳು. ಶಿವನನ್ನು ಮದುವೆಯಾಗುವ ಬಯಕೆ ಹೊಂದಿದ್ದಳು. ಅದಕ್ಕಾಗಿ ಶಿವನನ್ನು ಒಲಿಸಿಕೊಳ್ಳಲು ಘೋರ ತಪಸ್ಸು ಕೈಗೊಳ್ಳುತ್ತಾಳೆ. ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗುತ್ತಾನೆ.
ಶಿವನನ್ನು ಕರೆದುಕೊಂಡು ಅರಮನೆಗೆ ಬರುತ್ತಾಳೆ. ಜಠಾಧಾರಿ, ಜಿಂಕೆಯ ಚರ್ಮವನ್ನೇ ಹೊದ್ದುಕೊಂಡಿದ್ದ ಶಿವನ ರೂಪವನ್ನು ನೋಡಿ ಅವರಿಬ್ಬರ ವಿವಾಹ ಮಾಡಿಕೊಡಲು ದಕ್ಷ ಮಹಾರಾಜ ಒಪ್ಪುವುದಿಲ್ಲ. ಶಿವನನ್ನು ಹೊರತಾಗಿ ಬೇರೆ ಯಾರನ್ನು ಮದುವೆ
ಯಾಗುವುದಿಲ್ಲ ಎಂದು ಹಠ ಹಿಡಿಯುತ್ತಾಳೆ ಉಮಾದೇವಿ, ಕೊನೆಗೆ ಶಿವನನ್ನೇ ಮೆಚ್ಚಿ ಮದುವೆಯಾಗುತ್ತಾಳೆ.
ಒಂದು ದಿನ ದಕ್ಷ ರಾಜ ದೊಡ್ಡ ಯಜ್ಞವೊಂದನ್ನು ಆಯೋಸುತ್ತಾನೆ. ಯಾಗಕ್ಕೆ ಶಿವನನ್ನು ಬಿಟ್ಟು ಎಲ್ಲರನ್ನೂ ಆಹ್ವಾನಿಸುತ್ತಾನೆ. ಯಜ್ಞಕಾರ್ಯಕ್ಕೆ ತನ್ನ ಪತಿಯನ್ನೇ ಆಹ್ವಾನಿಸಿಲ್ಲ ಎಂದು ಕುಪಿತಳಾದ ಉಮಾ ಯಜ್ಞಕುಂಡದ ಅಗ್ನಿಗೆ ಹಾರಿ ತನ್ನ ಪ್ರಾಣ ಕಳೆದುಕೊಳ್ಳುತ್ತಾಳೆ.
ಇದರಿಂದ ತನ್ನ ಸ್ಥಿಮಿತವನ್ನು ಕಳೆದುಕೊಂಡ ಶಿವ ಸತಿಯ ದೇಹವನ್ನಿಡಿದುಕೊಂಡು ರುದ್ರ ನರ್ತನ ಮಾಡುತ್ತಾನೆ. ಬ್ರಹ್ಮಾಂಡವಿಡೀ ಅಲ್ಲೋಲ ಕಲ್ಲೋಲವಾಗುತ್ತಾನೆ. ಇದನ್ನು ತಪ್ಪಿಸುವುದಕ್ಕಾಗಿ ವಿಷ್ಣು ಸುದರ್ಶನ ಚಕ್ರದಿಂದ ದೇವಿಯ ದೇಹವನ್ನು ಛಿದ್ರಗೊಳಿಸುತ್ತಾನೆ. ಉಮಾದೇವಿಯ ದೇಹದ ಪ್ರತಿಯೊಂದು ಭಾಗಗಳು ಬಿದ್ದ ಸ್ಥಳ ಶಕ್ತಿ ಪೀಠಗಳಾಗಿ ಹೆಸರು ಪಡೆದಿವೆ.