ರಾಮಾಯಣ ರಾಮಾರ್ಪಣ

*ಡಾ.ಗುರುರಾಜ ಪೋಶೆಟ್ಟಿಹಳ್ಳಿ

ರಾಮಾಯಣ ಇದು ಪರಬ್ರಹ್ಮನ ಪ್ರತಿಬಿಂಬ ಮಾತ್ರವಲ್ಲ, ವಿಶ್ವದ ವಿಕಾಸದಂತೆ ಅನವರತ ವಿಕಾಸಮುಖಿಯಾಗಿದೆ. ಅಧಿಮಾನಸಕ್ಕೇರಿದ ವಿಶ್ವಪುರುಷನ ಪುರುಷೋತ್ತಮ ಪರಾತ್ಪರ ವಸ್ತುವಿನ ಪರಿಪೂರ್ಣಾಭಿವ್ಯಕ್ತಿಯವರೆಗಿನ ಮಾನವನ ವಿಕಾಸ ರಾಮಕಥೆಯ ವಿಕಾಸದಲ್ಲಿ ಮೇಳೈಸಿದೆ ಎಂದರೆ ಆಶ್ರ‍್ಯವಾಗದು. ಆದ್ದರಿಂದಲೇ ರಾಮಾಯಣ ನಿತ್ಯ ರಾಮಾಯಣ ಎಂದು ಕರೆಸಿಕೊಳ್ಳುತ್ತಿದೆ.


ರಾಮಾಯಣವು ಕಲ್ಪಿತ ಕಾವ್ಯವೆಂದು ಆರಂಭಿಸಿ ರಾಮನ ಬಗ್ಗೆ ಧ್ವನಿ ಏರಿಸಿದಾಗ ರಾಮನನ್ನು ಐತಿಹಾಸಿಕ ವ್ಯಕ್ತಿಯನ್ನಾಗಿ ಭಾವಿಸಿರುವವರೆಂದು ಭಾಸವಾಗುವಂತೆ ಮಾತನಾಡುವವರೂ ಕೂಡಾ ಉಂಟು. ಎರಡೂ ಬಗೆಗಳೂ ಸ್ವಾಗತಾರ್ಹವೇ ! ಏಕೆಂದರೆ ರಾಮ ಮತ್ತು ರಾಮಾಯಣ ಉಳಿದು ಬರುತ್ತಿರುವುದು ಹಾಗೆಯೇ ! ಅವುಗಳ ಮೂಲವನ್ನು ಹುಡುಕುವುದು ಒಂದು ಕಲಾತ್ಮಕ ಸಾರಸ್ವತ ಸೇವೆಯೇ ತಾನೆ ?ರಾಮೋ ವಿಗ್ರಹವಾನ್ ಧರ್ಮಃ
ಶ್ರೀಮದ್ರಾಮಾಯಣದ ಕಥಾನಾಯಕನಾದ ಶ್ರೀರಾಮನನ್ನು ಧರ್ಮದ ಮೂರ್ತ ಸ್ವರೂಪ ಎಂದು ವಾಲ್ಮೀಕಿ ನಿರೂಪಿಸುತ್ತಾರೆ. ಸಮಸ್ತ ಜಗತ್ತಿಗೂ ಆಧಾರವಾಗಿರುವುದು ಧರ್ಮ, ಧರ್ಮವೇ ಸತ್ಯ, ಜಗತ್ತಿನ ಒಳಿತಿಗಾಗಿ ಯಾವುದು ಆಗುವುದೋ ಅದು ಧರ್ಮ. ಶ್ರೀರಾಮನ ಮಹಿಮೆಯನ್ನು ಅರಿತಿದ್ದ ಮಾರೀಚ ರಾವಣನಿಗೆ ಹಿತವಚನವನ್ನು ಹೇಳುವಾಗ ರಾಮನ ಧರ್ಮ ಪರತ್ವವನ್ನು ಮುಕ್ತಕಂಠದಿ0ದ ಕೊಂಡಾಡುತ್ತಾನೆ.
ಅವನು ರಣರಂಗದಲ್ಲಿ ತನ್ನ ಪರಮ ಶತ್ರುವಾದ ರಾವಣನೊಡನೆ ನಡೆದುಕೊಂಡ ರೀತಿ ಅವನ ಮಹಾಸತ್ವಕ್ಕೂ ಧರ್ಮಪರತೆಗೂ ಸಾಕ್ಷಿಯಾಗಿದೆ. ಮುಧ್ಯಾರಂಭ ಕಾಲದಲ್ಲಿ ಸ್ವಯಂ ರಾವಣನೇ ಯುದ್ಧಕ್ಕೆ ಹೊರಟು ಬಂದಾಗ ರಾಮ ರಾವಣನನ್ನು ಮೊದಲು ಕಂಡ. ಶತ್ರುವಿನ ತೇಜಸ್ಸನ್ನು ಪ್ರಶಂಸಿಸಿ, ಈ ಪಾಪಾತ್ಮನು ಇಂದು ನನ್ನ ಕಣ್ಣಿಗೆ ಗೋಚರಿಸಿದ್ದಾನೆ. ನನ್ನ ಕ್ರೋಧವನ್ನು ಈಗ ತೋರಿಸುತ್ತೇನೆ. ಎಂದು ಕನಲಿ ಘೋರವಾದ ಸಂಗ್ರಾಮವನ್ನು ನಡೆಸಿದ. ರಾಮ ಬಾಣದಿಂದ ಅಭಿಹತನಾದ ರಾವಣ ತತ್ತರಿಸಿದ. ಅವನ ಕೈಯಿಂದ ಬಿಲ್ಲು ಜಾರಿತು. ಅವನು ವಿಹ್ವಲನಾದ. ಪ್ರಕಾಶವನ್ನು ಕಳೆದುಕೊಂಡ ಸೂರ‍್ಯನಂತೆ ಗತಶ್ರೀಕನಾದ ರಾವಣನನ್ನು ಕುರಿತು ನೀನು ಪ್ರಶಾಂತನಾಗಿದ್ದೀಯೇ, ಆದ್ದರಿಂದ ನನ್ನ ಶರಗಳಿಂದ ನಿನ್ನನ್ನು ಮೃತ್ಯುವಿಗೆ ಈಗ ಗುರಿ ಮಾಡುವುದಿಲ್ಲ ಎಂದು ಅವನನ್ನು ಉಳಿಸಿ ಕಳುಹಿಸಿದ. ತನ್ನ ಕೈಗೆ ಸಿಕ್ಕಿದ ಅಂಥ ಪರಮ ಶತ್ರುವನ್ನು ಅಂಥ ಸಮಯದಲ್ಲಿ ವಧಿಸದೆ,ವಿಶ್ರಾಂತಿ ಹೊಂದಿ ಬಾ’ ಎಂದು ಬಿಟ್ಟುಕೊಟ್ಟ ಆ ಶ್ರೀರಾಮನ ಈ ಗುಣವನ್ನು ಏನೆಂದು ಸ್ತುತಿಸೋಣ ಎಂದು ಅಭಿಯುಕ್ತರು ಹೇಳುತ್ತಾರೆ.

ರಾವಣ ವಧಾ ನಂತರದ ರಾಮನನ್ನು ಅಭಿನಂದಿಸಲು ಬಂದ ಬ್ರಹ್ಮದೇವ ‘ನೀನೇ ಲೋಕಗಳಿಗೆಲ್ಲಪರಮಧರ್ಮ’ ಎಂದು ಸ್ತುತಿಸಿ ರಾಮನ ಧರ್ಮ ಸ್ವರೂಪವನ್ನು ಬೆಳಗಿದ.
ಕಲಿಕ ಎಂಬ ವ್ಯಾಧ ಮಹಾಪಾಪಿಷ್ಠನಾಗಿ ಉತ್ತಕವೆಂಬ ಬ್ರಾಹ್ಮಣನನ್ನು ಹೊರಟಿರುತ್ತಾನೆ. ಆ ಸಂದರ್ಭದಲ್ಲಿ ಚೈತ್ರಮಾಸದಲ್ಲಿ ಒಂಭತ್ತು ದಿನಗಳವರೆಗೆ ಭಕ್ತಿಯಿಂದ ರಾಮಾಯಣ ಕಥಾಶ್ರವಣದ ಫಲವಾಗಿ ಕಲಿಕನು ಪಾಪಗಳಿಂದ ಮುಕ್ತನಾಗಿ ಸದ್ಗತಿ ಹೊಂದಿದ ಎಂಬುದಾಗಿ ಸ್ಕಾಂದ ಪುರಾಣ ತಿಳಿಸುತ್ತದೆ.

ಮನುಷ್ಯತ್ವದಿಂದ ದೈವತ್ವಕ್ಕೆ ಏರಿದ ಮಹಾಪುರುಷ
ಶ್ರೀರಾಮನು ಸಾಮಾನ್ಯ ಪುರುಷನಂತೆಯೇ ಹಸಿದ, ಅವರಂತೆಯೇ ಊಟ ಮಾಡಿದ ಅವರಂತೆಯೇ ಅತ್ತ, ಸಾಮಾನ್ಯ ಮನುಷ್ಯನು ತನ್ನ ಪ್ರಿಯೆಗಾಗಿ ಹಾತೊರೆಯುವಂತೆ ಅವನೂ ಹಾತೊರೆದ. ಅವನು ನೂರರಲ್ಲಿ ತೊಂಭತ್ತೊ0ಭತ್ತು ಕಡೆ ಸಾಮಾನ್ಯರಂತೆ ನಡೆದಿದ್ದರಿಂದಲೇ ಮಿಕ್ಕ ಒಂದು ವಿಷಯದಲ್ಲಿ ತಮಗಿಂತ ಉತ್ಕೃಷ್ಟನೆಂದು ಕಂಡುಕೊಂಡು ಅವನನ್ನು ಅನುಕರಣೀಯನೆಂದು ಅಂಗೀಕರಿಸಿದರು. ಅವನು ಮನುಷ್ಯತ್ವದಿಂದ ದೈವತ್ವಕ್ಕೆ ಏರಿದವನು.
ಸಂಸ್ಕೃತದಲ್ಲಿ `ಅಧ್ಯಾತ್ಮ ರಾಮಾಯಣ’ ವೇ ಉಂಟು. ಅದು ಅಷ್ಟಾದಶಾ ಪುರಾಣದಲ್ಲಿ ಒಂದೆನಿಸಿದ ಬ್ರಹ್ಮಾಂಡ ಪುರಾಣದ ಉತ್ತರ ಖಂಡದ ಒಂದು ಭಾಗ. ಉಮಾಮಹೇಶ್ವರ ಸಂವಾದ ರೂಪದಲ್ಲಿ ಏಳು ಕಾಂಡಗಳಲ್ಲಿದೆ. ರಾಮಗೀತೆಯೂ ಇದರಲ್ಲಿದೆ. ಇದರಲ್ಲಿ ಶ್ರೀ ರಾಮಚರಿತ್ರೆಯನ್ನು ಪರಮ ರಸಾಯನವೆಂಬ0ತೆ ವರ್ಣಿಸುತ್ತ ನಡುನಡುವೆ ಭಕ್ತಿ, ಜ್ಞಾನ, ಉಪಾಸನ, ಆಧ್ಯಾತ್ಮ ತತ್ತ÷್ವಗಳ ವಿವೇಚನೆಯನ್ನು ಮಾಡಲಾಗಿದೆ. ಇದು ಹಿಂದಿಯಲ್ಲಿ ತುಲಸಿದಾಸರು ಬರೆದ ರಾಮಚರಿತ ಮಾನಸ ಎಂಬ ರಾಮಾಯಣಕ್ಕೆ ಮೂಲ ಆಕರವೆಂದೂ ಹೇಳಲಾಗುತ್ತದೆ.
ಮುಂದಿನ ಕವಿಗಳಿಗೆ ಇದು ಅವಲಂಬನ ಎನ್ನುವುದು ಭಗವಾನ್ ವಾಲ್ಮೀಕಿಯ ಆತ್ಮವಿಶ್ವಾಸದ ನುಡಿ. ಹಾಗೆ ನೋಡಿದರೆ ವಾಲ್ಮೀಕಿ ರಾಮಾಯಣದಲ್ಲಿ ಅಧ್ಯಾತ್ಮದ ತುಡಿತವಿಲ್ಲ. ಧರ್ಮ ಅರ್ಥ ಕಾಮಗಳ ಮೇಲಿರುವ ಒತ್ತು ಮೋಕ್ಷಕ್ಕೆ ಇಲ್ಲ.
ಮಹರ್ಷಿ ವಾಲ್ಮೀಕಿ ಹುಡುಕ ಹೊರಟಿರುವುದು ಒಬ್ಬ ಮಹಾಪುರುಷನನ್ನು ತನ್ನ ಆಲೋಚನೆಯ ನೇರಕ್ಕೆ ನಿಲ್ಲಬಲ್ಲ ಧೀರ, ಧೀಮಂತ, ಸಾಹಸಿ ಸತ್ಪುರುಷನನ್ನು ಭಕ್ತಿ ಮತ್ತು ದೈವಾಗಮ ಶ್ರದ್ಧೆಗಳ ಪ್ರತಿಪಾಲನೆ ಮಹರ್ಷಿಯ ಧ್ಯೇಯವಲ್ಲ, ಪುರುಷಾರ್ಥ ಚತುಷ್ಪಾದಲ್ಲಿ ಆತನ ನಾಲ್ಕನೆಯವರ ಗೋಜಿಗೆ ಹೋಗುವುದಿಲ್ಲ, ಶ್ರೀಮದ್ರಾಮಾಯಣ ಬೇಸತ್ತ ಜಗದ ಕಾವ್ಯವಲ್ಲ, ಅದರಲ್ಲಿ ಶಾಂತಿಪಾಠವಿಲ್ಲ, ಸಮೃದ್ಧ ಜೀವಿತವನ್ನು ನಡೆಸಬಯಸುವವರ ಆದರ್ಶ ಕಾವ್ಯವದು.

ಮಹಾಭಾರತ ಒಂದು ನಾಗರೀಕತೆಯ ಇಳಿಗಾಲವನ್ನು ಒಂದು ಮಹಾಯುಗದ ಅಂತ್ಯವನ್ನು ವರ್ಣಿಸಿದರೆ ರಾಮಾಯಣವೋ ಪ್ರಾತಃ ಸಂಧ್ಯೆವರೆಗೂ ಕಾಲವನ್ನು ವರ್ಣಿಸುತ್ತದೆ. ಇದರ ವರ್ಣನೆಗೆ ಸಿಕ್ಕಿರುವುದು ಧರ್ಮ ಸಂಯಮಿತವಾದ ಅರ್ಥಕಾಮಪ್ರಪಂಚ. ಅರ್ಥ ಕಾಮಗಳೇ ತಮ್ಮ ವೃದ್ಧಿಗಾಗಿ ಇಂಥ ಒಂದು ಧರ್ಮವನ್ನು ನಿರ್ಮಿಸಿಕೊಂಡವೋ ಏನೋ ಎನ್ನಿಸುವಂತಿದೆ. ಈ ಮಹಾಕಾವ್ಯದಲ್ಲಿ ಮೂಡಿರುವ ದಿವ್ಯ ಸ್ತಿçÃಪುರುಷರ ಚರಿತ್ರೆ.
ಇದರರ್ಥ ರಾಮಾಯಣಕ್ಕೂ ಮೋಕ್ಷಶಾಸ್ತç ಅಥವಾ ಆಧ್ಯಾತ್ಮಕ್ಕೂ ಸಂಬ0ಧವೇ ಇಲ್ಲವೆಂದಲ್ಲ, ಧರ್ಮ ಅರ್ಥ ಕಾಮಗಳೆಂಬ ಕೈ ಮರದಿಂದ ಸೂಚಿತವಾದದ್ದು, ಮೋಕ್ಷ, ತ್ರಿವರ್ಗ ಯಥಾರ್ಥವಾಗಿ ಫಲಿಸಿದಾಗ ಅದು ಮೋಕ್ಷಕ್ಕೆ ದಾರಿಯಾಗುತ್ತದೆ. ವಾಲ್ಮೀಕಿ ಆ ದಾರಿಯ ಬಗ್ಗೆ ತನ್ನ ಗಮನವನ್ನು ಕೇಂದ್ರೀಕರಿಸಿದಾಗ ಅದಕ್ಕಾಗಿ ಅದು ರಾಮಾಯಣ (ರಾಮ +ಆಯನ) ಇಹದ ಬದುಕಿನ ವಿವಿಧ ಭಾವಗಳ ಮಡು ರಾಮಾಯಣ.
ಶ್ರೀರಾಮಚಂದ್ರ ಭರತಖಂಡದ ಪ್ರಾತಿನಿಧಿಕ ಪುರುಷ, ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಎಲ್ಲಾ ಉನ್ನತ ಮೌಲ್ಯಗಳಿಗೆ ಅವನೊಂದು ಅನುಪಮ ಪ್ರತಿಮೆ ! ಮಾನವನ ಗುಣ, ನಡತೆಗಳು ಹೇಗಿರಬೇಕು? ಹೇಗಿದ್ರೆ ಚೆನ್ನ? ಎಂದು ಅವನು ನುಡಿದು ತೋರಿಸಲಿಲ್ಲ,, ನಡೆದು ತೋರಿಸಿದ. ಇವತ್ತಿಗೂ ಎಲ್ಲಾ ತಂದೆತಾಯಿಗಳೂ ಬಯಸುವುದು ಶ್ರೀರಾಮನಂತಹ ಮಗನನ್ನು. ಶ್ರೀರಾಮನಂತಹ ಏಕಪತ್ನೀವ್ರತಸ್ಥನಾದ ಪುರುಷನೇ ಎಲ್ಲಾ ಹೆಣ್ಣುಗಳ ಕನಸಿನಲ್ಲಿ ಬರುವನಲ್ಲ ! ರಾಮರಾಜ್ಯವೆಂಬುದು ಇಂದಿಗೂ ನನಸಾಗದೇ ಉಳಿದು ಹೋಗಿರುವ ನಮ್ಮ ಒಂದು ಅತಿ ಸುಂದರ ಕನಸು !


ರಾಮನ ಇನ್ನೊಂದು ಅವತಾರ ಶ್ರೀಕೃಷ್ಣನ ಜೀವನ ವೃತ್ತಾಂತ. ಅದೆಷ್ಟು ವರ್ಣರಂಜಿತವಾಗಿದೆ ಅವನ ಬಾಲಲೀಲೆಗಳನ್ನು ಗೋಕುಲದ ಮನೆಮನೆಗಳಿಗೆ ನುಗ್ಗಿ ಅವನು ನಡೆಸಿದ ಹಾವಳಿಗಳನ್ನು ಆನಂದದಿ0ದ ಬಣ್ಣಿಸಿದ ಅದೆಷ್ಟು ಕಥೆಗಳಿಲ್ಲ? ಹಾಡುಗಳಿಲ್ಲ? ಬಾಲರಾಮನ ಬಗ್ಗೆಯೂ ಅಂತಹ ಹಾಡುಗಳು ಇರಬಹುದಾದರೂ, ಅವುಗಳ ಸಂಖ್ಯೆ ಅಷ್ಟೇನೂ ಹೆಚ್ಚಿರಲಾರವು, ರಾಮ ಚೇಷ್ಟೆ ಮಾಡಿದವನೇ ಅಲ್ಲ, ಯಾವುದಕ್ಕೂ ಎಂದೂ ಹಠ ಮಾಡಿದವನಲ್ಲ, ಅಂತಹ ವರ್ಣನೆ ಇರುವ ಹಾಡುಗಳಲ್ಲಿ ನಮಗೆ ಗೊತ್ತಿರುವುದಂತೂ ಇದೊಂದೇ, ಅಂಗಳದಲ್ಲಿ ರಾಮನಾಡಿದ, ಚಂದ್ರ ಬೇಕೆನ್ನುತ ಹಠ ಮಾಡಿದ.


ರಾಜ್ಯದ ಧಾರ್ಮಿಕ-ಸಾಮಾಜಿಕ-ಸಾಂಸ್ಕೃತಿಕ- ಆರ್ಥಿಕ ರಂಗಗಳಲ್ಲಿ ಶ್ರೀರಾಮನು ಸಾಧಿಸಿದ ಸರ್ವತೋಮುಖ ಪ್ರಗತಿ ಎಂಥದ್ದೆ0ದರೆ, ಆದರ್ಶ ರಾಜ್ಯದ ಕಲ್ಪನೆಗೆ “ರಾಮರಾಜ್ಯ” ಎನ್ನುವುದೇ ಪರ್ಯಾಯನಾಮವಾಗಿ ನಿಂತಿದೆ. ಅಂಥ ಆದರ್ಶವನ್ನು ಸಾಧಿಸಬೇಕಾದರೆ ರಾಮನ ಕಾರ್ಯ ನಿಷ್ಠೆ, ಕಾರ್ಯ ಕೌಶಲ ಹಾಗು ಪ್ರಾಮಾಣಿಕ ಶ್ರಮವೆಷ್ಟಿದ್ದಿರಬಹುದಲ್ಲವೇ?
ಶ್ರೀ ರಾಮಚಂದ್ರನ ಜೀವನ, ವ್ಯಕ್ತಿತ್ವ, ತ್ಯಾಗಗಳು ಭಾರತದ ಧರ್ಮ-ಸಂಸ್ಕೃತಿ-ಸಾಹಿತ್ಯ-ಕಲೆಗಳಿಗೆ ಸಮೃದ್ಧವಾಗಿ ಒದಗಿರುವ ವಸ್ತುವಿಶೇಷವೂ ಹೌದು. ರಾಮಚಂದ್ರನು ಕುಲಧರ್ಮವನ್ನು ಪ್ರಜಾಹಿತವನ್ನು ಕಾಪಾಡುವುದಕ್ಕಾಗಿ ರಾಜಸಂವಿಧಾನಕ್ಕೆ ವಿಧೇಯತೆಯನ್ನು ಸಲ್ಲಿಸುವುದಕ್ಕಾಗಿ ಗೈದ ತ್ಯಾಗ ಹಾಗು ನುಂಗಿ ಜೀರ್ಣಿಸಿಕೊಂಡ ಕಷ್ಟ-ನಷ್ಟ-ದುಃಖಗಳು ಮನುಕುಲಕ್ಕೆ ಸರ್ವಕಾಲಿಕ ಸಂದೇಶಗಳಾಗಿವೆ.
ರಾಮನು ಪತಿತಪಾವನ ಎಂದು ಗಾಂಧಿ ಮೊದಲಾದ ಗಣ್ಯರು, ಮಹಾಸಂತರು ಒಮ್ಮತದಿಂದ ಕೊಂಡಾಡಿದರು. ರಾಮನ ಭಜನೆ ಮಾಡುವ ನಮ್ಮ ಸಮಾಜ ರಾಮನ ಈ ಆದರ್ಶವನ್ನು ಏಕೆ ಅನುಸರಿಸುತ್ತಿಲ್ಲ. ಶೋಷಿತ ಹೆಣ್ಣು ಪತಿತೆ ಅಲ್ಲ ಪಾವನೆ ಎಂಬ ಹೆಮ್ಮೆಯ ಗುಣ ನಮ್ಮಲ್ಲೇಕೆ ಇಲ್ಲ, ಪತಿತಪಾವನ ರಾಮನೊಬ್ಬನೇ ಆಗಬೇಕೇ? ಪತಿತಪಾವನ ನಮ್ಮ ಸಮಾಜ ಆಗಬೇಕು.

Related Articles

ಪ್ರತಿಕ್ರಿಯೆ ನೀಡಿ

Latest Articles