ರೆಸಿಪಿ: ಶಿವ ಭಟ್, ಉಪ್ಪಿನಂಗಡಿ
ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವಿನ ಹಣ್ಣಿನ ಸೀಸನ್ ಶುರುವಾಗಿದೆ. ಮಾರುಕಟ್ಟೆಯಲ್ಲಿಯೂ ಮಾವಿನ ಹಣ್ಣು ಸಿಗುತ್ತಿದೆ. ಮಾವಿನ ಹಣ್ಣನ್ನು ಹಾಗೆಯೇ ತಿನ್ನುವುದರ ಜತೆಗೆ ಅದರಿಂದ ವಿಧವಿಧ ತಿನಿಸುಗಳನ್ನು ಕೂಡಾ ಮಾಡಿ ಸವಿಯಬಹುದು.
ಮಾವಿನ ಹಣ್ಣಿನ ದೋಸೆ ಮಾಡುವ ವಿಧಾನ: ಹಿಂದಿನ ದಿನ ರಾತ್ರಿ 2 ಲೋಟ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ. ನೆನೆಸಿಟ್ಟು 2-3 ತಾಸು ಆದ ನಂತರ ಅದಕ್ಕೆ ಕಾಯಿ ಸ್ವಲ್ಪ ತುರಿದು ಹಾಕಿ, 1 ಮಾವಿನಹಣ್ಣನ್ನು (ಸಿಪ್ಪೆ ತೆಗೆದು) ಹಾಕಿ ಇದನ್ನು ಚೆನ್ನಾಗಿ ರುಬ್ಬಿ ಸ್ವಲ್ಪ ಉಪ್ಪು ಹಾಕಿ ಇಡಿ. ಬೆಳಗ್ಗೆ ಈ ಹಿಟ್ಟಿನ ಮಿಶ್ರಣಕ್ಕೆ ಬೆಲ್ಲ ಹಾಕಿ ಹುಟ್ಟಿನಲ್ಲಿ ತಿರುಗಿಸಿ, ದೋಸೆ ಕಾವಲಿಯಲ್ಲಿ ದೋಸೆ ಎರೆಯಬೇಕು. ದೋಸೆಯನ್ನು ಚಟ್ನಿ ಜೊತೆ ಹಾಕಿ ಸವಿಯಿರಿ.