ಅಕ್ಷಯ ಎನ್ನುವುದು ಕ್ಷಯವಾಗದೆ ಅಂದರೆ ಮುಗಿಯದೇ ಇರುವುದು ಎಂದರ್ಥ ಅಂದು ರೋಹಿಣಿ. ನಕ್ಷತ್ರವು ಇದ್ದರೆ ಅಂದು ಮೂರುವರೆ ಘಳಿಗೆ ಮುಹೂರ್ತದಲ್ಲಿ ಬರುವ ತಿಥಿ ಅಕ್ಷಯ ತೃತೀಯ. 1. ಈ ದಿನವು ತ್ರೇತಾಯುಗದ ಆರಂಭವನ್ನು ಸೂಚಿಸುತ್ತದೆ. 2. ಪಾಂಡವರು ಸೂರ್ಯ ದೇವರಿಂದ ಅಕ್ಷಯ ಪಾತ್ರೆಯನ್ನು ಪಡೆದದ್ದು, 3. ಪರಶುರಾಮನ ಅವತಾರವಾದ ದಿನ 4. ಕುಚೇಲನು ಕೃಷ್ಣನ ಮನೆಗೆ ಸಹಾಯ ಯಾಚಿಸಲು ಹೋಗಿ, ಕೃಷ್ಣನಿಂದ ಪಾದಪೂಜೆ ಪಡೆದು ಅವನಿಂದ ಅನುಗ್ರಹಿತನಾದನು. 5. ವೇದವ್ಯಾಸರು ಇದೇ ದಿನ ಮಹಾಭಾರತ ಗ್ರಂಥ ಆರಂಭಿಸಿದ್ದು. 6. ಪರಮಾತ್ಮ ತನ್ನ ದೇಹದ ಗಂಧದಿಂದ ಮಂಡೋದರಿಯನ್ನು ಸೃಷ್ಟಿಸಿದ್ದು ಇದೇ ದಿನ. 7. ಇದೇ ದಿನ ದೇವೇಂದ್ರ ತಾನು ಕಳೆದುಕೊಂಡಿದ್ದ ಪದವಿಯನ್ನು ಬೃಹಸ್ಪತ್ಯಾಚಾರ್ಯರ ನಿರ್ದೇಶನದಂತೆ ಜಪ ತಪ ಯಜ್ಞ ಮಾಡಿ ವಾಪಸ್ ಪಡೆದನು.
ಅಕ್ಷಯ ತೃತೀಯ ಕರ್ತವ್ಯಗಳು : 1. ಸೂರ್ಯೋದಯ ಮುನ್ನ ಏಳಬೇಕು. 2. ಸಂಕಲ್ಪ ಸಹಿತ ಸ್ನಾನ 3. ಆಹ್ನೀಕ, ಪೂಜೆ, ಜಪ, ಪಾರಾಯಣ 4. ತರ್ಪಣಾಧಿಕಾರಿಗಳು ತರ್ಪಣ ನೀಡಬೇಕು. 5. ಯಥಾಶಕ್ತಿ ದಾನಧರ್ಮ 6. ಗಂಧ ಸಮರ್ಪಣೆ ದೇವರಿಗೆ
ಅಕ್ಷಯ ತೃತೀಯ ದಿನದಂದು ಗಂಧಲೇಪನ ವೈಶಿಷ್ಟ್ಯ : ಇದೇ ದಿನ ಭಗವಂತನು ತನ್ನ ದೇಹದ ಸುಗಂಧದಿಂದ ಮಂಡೋದರಿಯ ಸೃಷ್ಟಿ ಮಾಡಿದ್ದರಿಂದ ದೇವರಿಗೆ ಗಂಧ ಸಮರ್ಪಣೆ ಮಾಡುವ ಸಂಪ್ರದಾಯ ಇದೆ. ಅಕ್ಷಯ ತೃತೀಯ ಬಗ್ಗೆ ನಮ್ಮ ಪುರಾಣಗಳಲ್ಲಿ ಒಂದಾದ ನಾರದ ಪುರಾಣದಲ್ಲಿ ಉಲ್ಲೇಖವಿದೆ . “ಅಕ್ಷಯ” ಎನ್ನುವುದು ಕ್ಷಯವಾಗದೆ ಇರುವುದು ಎಂದರ್ಥ. ಅಕ್ಷಯ ಅಂದರೆ ಕ್ಷಯರಹಿತ. ವೈಶಾಖ ಶುದ್ಧ ತೃತೀಯ ದಿನದಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತದೆ. ಬಹಳ ಜನರಿಗೆ ಅಕ್ಷಯ ತೃತೀಯ ಬಗ್ಗೆ ತಪ್ಪು ತಿಳುವಳಿಕೆ ಇದೆ. ಅಂದು ಬಂಗಾರ ತೆಗೆದುಕೊಳ್ಳಲೇ ಬೇಕು ಅದು ಇಮ್ಮಡಿ ಆಗುತ್ತದೆ ಎಂದು ಪ್ರಚೋದಿಸಿದ್ದಾರೆ ಕೆಲವು ಬಂಗಾರದ ಅಂಗಡಿಗಳು ಮತ್ತು ಜ್ಯೋತಿಷಿಗಳು. ಟೀವೀ ಛಾನೆಲ್ ಮೂಲಕ ಬಂಗಾರ ತೆಗೆದುಕೊಂಡರೆ ವೃದ್ಧಿಯಾಗುತ್ತದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯಾವ ಪುರಾಣದಲ್ಲೂ ಬಂಗಾರ ಇಮ್ಮಡಿಯಾಗುವ ಪ್ರಸ್ತಾಪ ಇಲ್ಲ. ಜನಗಳು ಇದಕ್ಕೋಸ್ಕರ ಸಾಲ ಮಾಡಿ ಬಂಗಾರ ಕೊಳ್ಳುತ್ತಿದ್ದಾರೆ. ಹೌದು. ಸಾಲ ಇಮ್ಮಡಿಯಾಗುತ್ತದೆ. ಬಂಗಾರ ಅಲ್ಲ. ಬಂಗಾರ ಎಂದು ಕೊಂಡರೂ ಅದರ ಬೆಲೆ ಇದ್ದೇ ಇರುತ್ತದೆ.
ಅಕ್ಷಯ ತೃತಿಯದ ಮುಹೂರ್ತದ ಮಹತ್ವ ? ಗೃಹ ಪ್ರವೇಶ , ಮದುವೆ, ಹೊಸ ವ್ಯವಹಾರ, ದಾನ ಧರ್ಮಗಳನ್ನು ಮಾಡಲು ಅಕ್ಷಯ ತೃತೀಯ ಅತ್ಯುತ್ತಮ ದಿನ. ಈ ದಿನವು ತ್ರೇತಾ ಯುಗದ ಆರಂಭವನ್ನು ಸೂಚಿಸುತ್ತದೆ. ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು. “ಅಕ್ಷಯ” ಎನ್ನುವುದು ಕ್ಷಯವಾಗದೆ ಅಂದರೆ ಮುಗಿಯದೇ ಇರುವುದು ಎಂದರ್ಥ. ಇದೊಂದು ಸ್ವಯಂಸಿದ್ಧ ಮೂರೂವರೆ ಮುಹೂರ್ತಗಳಲ್ಲಿ ಇದೂ ಒಂದು. ಈ ದಿನ ಮುಹೂರ್ತ ಇಡುವಾಗ ನಕ್ಷತ್ರ, ವಾರ, ತಿಥಿ, ಮುಂತಾದವನ್ನು ನೋಡುವ ಅವಶ್ಯಕತೆ ಇಲ್ಲ.
ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು(ಎಲೆಕ್ಟಾçನಿಕ್ ಸಿಟಿ ಸಮೀಪ) ಬೆಂಗಳೂರು.