ಶಂಕರನ ವರ ಪ್ರಸಾದ
ಎದುರಿಸಿದರು ಹಲವು ಪ್ರಮಾದ
ಅಸಾಮಾನ್ಯ ಬಾಲಕ
ಅದ್ವೈತದ ಪ್ರತಿಪಾದಕ
ಕನಕ ಧಾರಾ ಸ್ತೋತ್ರ ರಚಿಸಿದವರು
ಪರಕಾಯ ಪ್ರವೇಶ ಮಾಡಿದವರು
ಅಹಂ ಬ್ರಹ್ಮಾಸ್ಮಿ ಎಂದ ಯತಿ
ಎತ್ತಿ ಹಿಡಿದರು ಸನಾತನ ಸಂಸ್ಕೃತಿ
ಹಿಂದೂ ಧರ್ಮದ ಪುನರುತ್ಥಾನ
ವೇದೋಪನಿಷತ್ ಗಳಿಗೆ ವ್ಯಾಖ್ಯಾನ
ಶಾರದಾ ಪೀಠದ ಸಂಸ್ಥಾಪಕರು
ಸರ್ವಜ್ಞ ಪೀಠವ ಏರಿದವರು

ಜೆ.ಆರ್.ಶಿವಕುಮಾರ್,
ಚಿತ್ರದುರ್ಗ
























