ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಶ್ರೀ ದೇವಳದಲ್ಲಿ ಮಿಥುನ ಸಂಕ್ರಮಣದಂದು ಶ್ರೀಗುರುನರಸಿಂಹ, ಶ್ರೀ ಆಂಜನೇಯ ಮತ್ತು ಪರಿವಾರ ದೇವರುಗಳಿಗೆ, ಉತ್ತಮ ಮಳೆ ಬೆಳೆ ಹಾಗೂ ಕರೋನ ನಿವಾರಣೆಯಾಗಿ ನಾಡಿನೆಲ್ಲೆಡೆ ಶಾಂತಿ ಸುಭಿಕ್ಷೆಯು ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ವರ್ಷಂಪ್ರತಿಯಂತೆ ಮಾಡುವ ಸೀಯಾಳ ಅಭಿಷೇಕವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ ಅರ್ಚಕರು ಮತ್ತು ಸೀಮಿತ ಸಿಬ್ಬಂದಿಯ ಸಹಕಾರದೊಂದಿಗೆ ಸರಳವಾಗಿ ಆಚರಿಸಲಾಯಿತು.


























