ಸವದತ್ತಿಃ ‘ಚೈತನ್ಯವೇ ಜೀವನ, ನಿಸ್ತೇಜನವೇ ಮರಣ. ನಮ್ಮ ಬದುಕು ಸದಾ ಚೈತನ್ಯದಿಂದ ಕೂಡಿರಬೇಕು. ಚೈತನ್ಯವಿಲ್ಲದ ಶರೀರ ಮರಣ ಹೊಂದಿದ ಶರೀರವಿದ್ದಂತೆ ಎಂಬುದನ್ನು ನಾವು ವಿವೇಕಾನಂದರ ವಾಣಿಯ ಮೂಲಕ ನಾವು ತಿಳಿಯಬಹುದಾಗಿದೆ ಎಂದು ಶ್ರೋತ್ರೀಯ ಬ್ರಹ್ಮನಿಷ್ಟ ಸದ್ಗುರು ಮುಕ್ತಾನಂದ ಪೂಜ್ಯರು ತಿಳಿಸಿದರು.
ಸಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಶನಿವಾರ ಸಂಜೆ ಜರುಗಿದ ಗೂಗಲ್ ಮೀಟ್ ಸತ್ಸಂಗದಲ್ಲಿ “ಋಷಿ ಋಣದ ಮಹತ್ವ’ ಕುರಿತು ಅವರು ಆಶೀರ್ವಚನ ನೀಡಿದರು.
ಜಗತ್ತಿನ ಎಲ್ಲದಕ್ಕೂ ಅಧ್ಯಾತ್ಮದ ತಳಹದಿಯಿದೆ. ಅದನ್ನು ತೋರಿಸಿದವರು ಋಷಿಮುನಿಗಳು. ಅತ್ಯಂತ ಶ್ರೇಷ್ಠ ವಿಚಾರ, ಸರಳ ಬದುಕನ್ನು ತಿಳಿಸಿದ ಋಷಿ ಮುನಿಗಳ ಕೊಡುಗೆ ಬಹಳಷ್ಟಿದೆ. ನಮ್ಮ ದೇಶದ ಋಷಿಮುನಿಗಳಿಂದ ಇಂದಿಗೂ ನಮಗೆ ಸಾಕಷ್ಟು ಮಹತ್ವಪೂರ್ಣ ಸಂಗತಿಗಳು ತಿಳಿದು ಬರುತ್ತವೆ. ಈ ದಿಸೆಯಲ್ಲಿ ಚಾಣಕ್ಯನ ಅರ್ಥಶಾಸ್ತ್ರ ಇಂದಿಗೂ ಉಪಯುಕ್ತ ಪುಸ್ತಕ. ಜನರ ಸುಖವೇ ರಾಜನ ಸುಖ. ಅವರ ಕಲ್ಯಾಣವೇ ಅವನ ಕಲ್ಯಾಣ. ಅವನು ತನ್ನ ಸುಖದ ಎಂಬುದನ್ನು ಈ ಅರ್ಥಶಾಸ್ತ್ರದಲ್ಲಿ ತಿಳಿಸಿದಂತೆ ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ. ಚಂದ್ರಗುಪ್ತ ಮೌರ್ಯನ ಅಳಿಯ ಅಪಘಾನಿಸ್ತಾನದಿಂದ ಭಾರತಕ್ಕೆ ಬಂದಾಗ ತನ್ನ ಮಾವನ ರಾಜ್ಯದ ಸುಖೀ ಸಾಮ್ರಾಜ್ಯದ ಬಗ್ಗೆ ತಿಳಿದಾಗ ಇದಕ್ಕೆ ಕಾರಣ ಚಾಣಕ್ಯನ ಅರ್ಥಶಾಸ್ತ್ರ ಎಂದು ತಿಳಿದು ಚಾಣಕ್ಯನ ಭೇಟಿ ಮಾಡಲು ಬಂದಾಗ ಚಾಣಕ್ಯ ನದಿ ದಂಡೆಯಲ್ಲಿ ಸರಳ ಜೀವನ ನಡೆಸುವುದನ್ನು ಕಂಡು ಅಚ್ಚರಿ ಪಡುತ್ತಾನೆ. ಅಲ್ಲಿ ಚಾಣಕ್ಯ ಆತ ಅಪಘಾನಿಸ್ತಾನದಿಂದ ಭಾರತಕ್ಕೆ ಬರುವಾಗ ಮಾರ್ಗದುದ್ದಕ್ಕೂ ಅವನ ಉಪಚಾರ ಕುರಿತು ತಿಳಿಸಿದಾಗ ಬಹಳ ಅಚ್ಚರಿ ಉಂಟಾಗುತ್ತದೆ. ಅಂದರೆ ಅವನ ತ್ರಿಕಾಲಜ್ಞಾನ ಇದಕ್ಕೆ ಕಾರಣ. ಹೀಗಾಗಿಯೇ ನಮ್ಮ ಋಷಿಮುನಿಗಳ ಅಧ್ಯಾತ್ಮದ ಶಕ್ತಿ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು.
ಅಗಸ್ತö್ಯಮುನಿ ಹಡಗಿನ ತಂತ್ರಜ್ಞಾನ ಕಂಡು ಹಿಡಿದದ್ದು. ಮಹಾಭಾರತದ ಅರಗಿನ ಮನೆಯಿಂದ ಪಾಂಡವರು ಹೊರಬಂದು ಅಂಬಿಗನ ಸಹಾಯದಿಂದ ನದಿಯನ್ನು ದೋಣಿ(ಇಂಜಿನ್ ಹಡಗು)ಯ ಸಹಾಯದಿಂದ ದಾಟುವ ದೃಷ್ಟಾಂತವನ್ನು ಉದಾಹರಿಸುತ್ತ.ಭಾಸ್ಕರಾಚಾರ್ಯರ ಜ್ಯೋತಿಷ್ಯಶಾಸ್ತ್ರ ಕುಂಡಲಿಶಾಸ್ತ್ರದ ಮಹತ್ವವನ್ನು ತಿಳಿಸಿದರು. ಅವರ ಮಗಳು ಲೀಲಾವತಿಯ ಕುಂಡಲಿಯನ್ನು ನೋಡಿ ಅವಳ ವಿಧವೆ ಆಗುವ ಸಂಗತಿ ತಿಳಿದು ಅದಕ್ಕೆ ಪರಿಹಾರ ಸೂಚಿಸಿದಾಗಲೂ ಅದು ಕೈಗೂಡದಾದಾಗ ಮಗಳ ಹೆಸರು ಶಾಶ್ವತವಾಗಿ ಉಳಿಯಲಿ ಎಂದು “ಲೀಲಾವತಿ”ಗ್ರಂಥ ರಚಿಸಿದ್ದು. ಶುಶ್ರೂತ ಎಂಬ ಋಷಿ 125 ರೀತಿಯ ಜ್ವರಕ್ಕೆ ಔಷಧವನ್ನು ಗಿಡಮೂಲಿಕೆಗಳಿಂದ ಕಂಡುಕೊ0ಡಿರುವುದಲ್ಲದೇ ಸರ್ಜರಿಯ ಕುರಿತು ಅಂದಿನ ಕಾಲದಲ್ಲಿ ಉಲ್ಲೇಖಿಸಿದ್ದು ನಮ್ಮ ದೇಶದ ಋಷಿಮುನಿಗಳ ಶಕ್ತಿ. ಚರಕ ಸಂಹಿತೆಯ ಮೂಲಕ ಇಂದಿಗೂ ಕೂಡ ನಾವು ಆಯುರ್ವೇದ ಮಹತ್ವವನ್ನು ತಿಳಿಯಲು ಸಾಧ್ಯವಾಗಿದೆ. ಗಣೇಶಪುರಿಯಲ್ಲಿ ಮುಕ್ತಾನಂದ ಎಂಬ ಋಷಿಗಳು ಒಣಗಿದ ಬಡ್ಡೆಯನ್ನು ಚಿಗುರೊಡೆಯುವಂತೆ ಮಾಡಿದ್ದು ಅಂದಿನ ಋಷಿ ಮುನಿಗಳ ಸಂಶೋಧನೆಗೆ ಒಂದು ನಿದರ್ಶನ. ಇಂದಿನ ನವ ಪೀಳಿಗೆ ಋಷಿ ಮುನಿಗಳ ಋಣವನ್ನು ತಿಳಿದುಕೊಂಡು ಅದನ್ನು ಮುಂದುವರೆಸುವ ಅವಶ್ಯಕತೆಯಿದೆ.
ಪರೋಪಕಾರಕ್ಕಾಗಿ ನಾವು ನಮ್ಮ ಬದುಕನ್ನು ಮೀಸಲಿಡಬೇಕು. ಕರ್ಮಣ್ಯೇ ವಾಧಿಕಾರಸ್ಥೆ ಎಂಬುದನ್ನು ಉಲ್ಲೇಖಿಸಿ ನಮ್ಮ ಜೀವನದಲ್ಲಿ ನಾವು ಯಾವುದನ್ನು ಮಾಡುತ್ತೇವೆಯೋ ಅದನ್ನು ಉಣ್ಣುತ್ತೇವೆ. ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆ ಮಾತನ್ನು ನಾವು ಮರೆಯಬಾರದು ಎಂದು ಋಷಿ ಮುನಿಗಳ ಋಣವನ್ನು ಕುರಿತು ಸವಿಸ್ತಾರವಾಗಿ ತಿಳಿಸಿದರು.
ಸತ್ಸಂಗದ ಪ್ರಾರಂಭದಲ್ಲಿ ಅಭಿನವ ಶ್ರೀನಿವಾಸ ಆರಿ “ತಂದೆ ನೀನು ತಾಯಿ ನೀನು” ವಚನವನ್ನು ಹೇಳಿದನು. ಶಿಕ್ಷಕಿ ಉಮಾದೇವಿ ಏಣಗಿಮಠ “ ಆವ ಕುಲವೋ ರಂಗಾ ಅರಿಯಲಾಗದು” ಪ್ರಾರ್ಥನಾ ಗೀತೆಯನ್ನುಹಾಡಿದರು. ಕಂಕಣವಾಡಿ ಶಿಕ್ಷಕರು ಗೂಗಲ್ ಮೀಟ್ ಹೋಸ್ಟ ಆಗಿ ನಿರ್ವಹಿಸಿದರು. ಸತ್ಸಂಗ ಕುರಿತಂತೆ ಅನ್ನಪೂರ್ಣ ಲಂಬೂನವರ. ಬಡಿಗೇರ. ಸುಲೋಚನ ಹೊನ್ನುಂಗುರ. ನಿರ್ಮಲಾ ಕುಂದರಗಿ. ಚವ್ಹಾಣ ಮೊದಲಾದವರು ತಮ್ಮ ಪ್ರತಿಕ್ರಿಯೆ ತಿಳಿಸಿದರು. ವೀರಣ್ಣ ಕೊಳಕಿ ಶಿಕ್ಷಕರು ಕಾರ್ಯಕ್ರಮ ನಿರ್ವಹಿಸಿ ಸ್ವಾಗತ ಮತ್ತು ವಂದನಾರ್ಪಣೆಗೈದರು.
ಈ ಸತ್ಸಂಗದಲ್ಲಿ 50 ಕ್ಕೂ ಹೆಚ್ಚು ಸತ್ಸಂಗ ಕುಟುಂಬಗಳು ಸವದತ್ತಿ ಮುನವಳ್ಳಿ ಸಿಂದೋಗಿ ಧಾರವಾಡ ಹುಬ್ಬಳ್ಳಿ, ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಚಿಕ್ಕುಂಬಿ ದೇವರ ಹುಬ್ಬಳ್ಳಿ ಹೀಗೆ ವಿವಿಧ ಸ್ಥಳಗಳಿಂದ ಹಾಜರಾಗಿದ್ದರು.
ವರದಿಃ ವೈ.ಬಿ.ಕಡಕೋಳ ಸಂಪನ್ಮೂಲ ವ್ಯಕ್ತಿಗಳು ಸಿಂದೋಗಿ ಮುನವಳ್ಳಿ