ಬೆಂಗಳೂರು: ತಿರುಪತಿ ಪ್ಯಾಕೇಜ್ ಪ್ರವಾಸವನ್ನು ಕೆಎಸ್‌ಆರ್‌ಟಿಸಿ ಜುಲೈ 16ರಿಂದ ಮತ್ತೆ ಆರಂಭಿಸಲಿದೆ.
ಐರಾವತ ಕ್ಲಾಸ್ ಕ್ಲಬ್, ಬಸ್‌ನಲ್ಲಿ ಪ್ರವಾಸ ಕೈಗೊಳ್ಳಲಾಗುತ್ತದೆ.
ಪ್ರತಿದಿನ ರಾತ್ರಿ 8.45 ಕ್ಕೆ ಶಾಂತಿನಗರ ಬಸ್‌ನಿಲ್ದಾಣದಿಂದ ಬಸ್ ಹೊರಡಲಿದೆ. ಜಯನಗರ, ನಾಗಸಂದ್ರ, ಎನ್‌ಆರ್ ಕಾಲೊನಿ, ಕೆಂಪೇಗೌಡ ಬಸ್‌ನಿಲ್ದಾಣ, ದೊಮ್ಮಲೂರು, ಮಾರತಹಳ್ಳಿ, ಐಟಿಐ ಗೇಟ್ ಕೆ.ಆರ್.ಪುರ ಮಾರ್ಗವಾಗಿ ತಿರುಪತಿಗೆ ಪ್ರಯಾಣ ಬೆಳೆಸಲಿದೆ.
ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣದಿಂದ ರಾತ್ರಿ 8.30 ಕ್ಕೆ ಹೊರಡುವ ಮತ್ತೊಂದು ಬಸ್ ವಿಜಯನಗರ ಟಿಎಂಸಿ, ನವರಂಗ್, ಮಲ್ಲೇಶ್ವರ ವೃತ್ತ, ಮೆಜೆಸ್ಟಿಕ್, ಐಟಿಐ ಗೇಟ್, ಕೆಆರ್‌ಪುರ ಮಾರ್ಗವಾಗಿ ತೆರಳಿದೆ.
ಭಾನುವಾರದಿಂದ ಗುರುವಾರ ತನಕ ವಯಸ್ಕರಿಗೆ ಪ್ರಯಾಣ ದರ ರೂ.2200, ಮಕ್ಕಳಿಗೆ (6-12ವರ್ಷ) ರೂ.1800 ದರ ನಿಗದಿ ಪಡಿಸಲಾಗಿದ್ದು, ವಾರಾಂತ್ಯದ ದಿನ ರೂ. 2600 ಮಕ್ಕಳಿಗೆ ರೂ. 2000 ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಕೆಎಸ್‌ಆರ್‌ಟಿಸಿ ಯ ಅಧಿಕೃತ ಬುಕ್ಕಿಂಗ್ ಸೆಂಟರ್‌ಗಳಲ್ಲಿ ಬುಕ್ಕಿಂಗ್ ಮಾಡಬಹುದು.
ಫ್ರೆಶ್ ಅಪ್ ಆಗಲು ಹೋಟೆಲ್ ಸೌಲಭ್ಯ, ಗೈಡ್, ಶ್ರೀ ಪದ್ಮಾವತಿ ದೇವಿ ದೇವಸ್ಥಾನಕ್ಕೆ ಭೇಟಿ, ಉಪಾಹಾರ, ನಂತರ ಶೀಘ್ರ ದರ್ಶನ ವ್ಯವಸ್ಥೆ ಮೂಲಕ ದೇವರ ದರ್ಶನ, ಊಟದ ವ್ಯವಸ್ಥೆಯನ್ನು ಪ್ಯಾಕೇಜ್ ಟೂರ್ ಒಳಗೊಂಡಿರುತ್ತದೆ.
https://m.ksrtc.in/oprs-mobile/package/tour/avail/services.do