ಬೆಂಗಳೂರಿನ ವಯ್ಯಾಲಿಕಾವಲ್ ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಮಾನಸಾ ಜಯರಾಜ್ (ಕುಲಕರ್ಣಿ) ಅವರು ಜುಲೈ 31ರಂದು ಸಂಗೀತ ಸೇವೆ ಸಲ್ಲಿಸಿದರು.
ಮಾನಸಾ ಜಯರಾಜ್ (ಕುಲಕರ್ಣಿ) ಅವರು, “ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ” ಎಂಬ ಗಣೇಶನ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, “ಅಂಬಿಕಾ ಪತಿ ಶಂಭೋ”, “ಹರಿ ಕುಣಿದ ನಮ್ಮ ಹರಿ ಕುಣಿದ”, “ಗರುಡ ಗಮನ (ಶ್ರೀ ಅನ್ನಮಾಚಾರ್ಯರ ಕೀರ್ತನೆ), “ನಿನ್ನ ನೋಡಿ ಧನ್ಯನಾದೆನೋ”, “ಗೋವಿಂದಾಶ್ರಿತ ಗೋಕುಲ ಬೃಂದಾ” (ಶ್ರೀ ಅನ್ನಮಾಚಾರ್ಯರ ಕೀರ್ತನೆ), “ಕಂದ ಹಾಲು ಕುಡಿಯೋ ಗೋವಿಂದ”, “ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ), “ನಾರಾಯಣ ನಿನ್ನ ನಾಮದ”, “ಉಯ್ಯಾಲಾ ಉಯ್ಯಾಲಾ” (ಶ್ರೀ ಅನ್ನಮಾಚಾರ್ಯರ ಕೀರ್ತನೆ), “ಕಾಪಾಡಲೇ ಸಕಲಿಪದ್ವರೇ”, “ಕಂಡೆ ನಾ ಗೋವಿಂದನ” ಮುಂತಾದ ಹಾಡುಗಳನ್ನು ಪ್ರಸ್ತುತ ಪಡಿಸಿ, “ಮಂಗಳಂ ಸರ್ವೇಶ ಮಾರಮಣ” ಎನ್ನುವ ಹಾಡಿನೊಂದಿಗೆ ಮಂಗಳ ಮಾಡಿದರು.
ವಾದ್ಯ ಸಹಕಾರದಲ್ಲಿ, ವಿದ್ವಾನ್ ದುಶ್ಯಂತ್ ಅವರು ಕೀಬೋರ್ಡ್ ನಲ್ಲಿ, ವಿದ್ವಾನ್ ಶ್ರೀನಿವಾಸ ಕಾಖಂಡಕಿ ಅವರು ತಬಲಾದಲ್ಲಿ ಸಾಥ್ ನೀಡಿದರು.