ಸವದತ್ತಿ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ ಆರಾಧನಾ ಮಹೋತ್ಸವ

ಸವದತ್ತಿ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರು ಸಾರ್ವಭೌಮರ 169ನೇ ಆರಾಧನೋತ್ಸವ ಪ್ರಯುಕ್ತ ಇಂದು ಪೂರ್ವಾರಾಧನೆ ಕಾರ್ಯಕ್ರಮಗಳು ನಡೆದವು.

ಬೆಳಗ್ಗೆ 6.30 ಸುಪ್ರಭಾತ, 7 ರಿಂದ ಅಷ್ಟೋತ್ತರ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಮಹಾಪೂಜಾ ಪುಷ್ಪಾಲಂಕಾರ, ಮಧ್ಯಾಹ್ನ 1.30ಕ್ಕೆ ಮಹಾನೈವೇದ್ಯ ಮಹಾ ಮಂಗಳಾರತಿ, ಸಾಯಂಕಾಲ 6.30ಕ್ಕೆ ಭಜನೆ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ, ಫಲಮಂತ್ರಾಕ್ಷತೆ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಪರ್ಯಾಯ ಅರ್ಚಕರಾದ ರಾಮಾಚಾರ್ಯ ಗು ಕಟ್ಟಿ ಹಾಗೂ ಗುರಾಚಾರ್ಯ ರ ಕಟ್ಟಿ ನಡೆಸಿಕೊಟ್ಟರು.

ಪೂಜಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಮುಖಂಡರಾದ ವೆಂಕಟೇಶ ವೈದ್ಯ ವಿಶ್ವಾಸ ವೈದ್ಯ, ಧೀರೇಂದ್ರ ಕಾನಡೆ, ರಾಮತೀರ್ಥ ಜ್ಯೋಶಿ ಭಂಡುರಾವ ಕುಲಕರ್ಣಿ, ರಾಜು ದೇಶಪಾಂಡೆ, ವಾಸು ಮುನವಳ್ಳಿ ಸುನಿ¯ ಆಚಾರ್ಯ ಗದಗ ತವಿಲ್ದಾರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles