ಶಿವಮೊಗ್ಗ ಪರಿಸರದ ಪುರಾತನ ರಾಯರ ಬೃಂದಾವನಗಳು

  • ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನಲ್ಲಿ ಗುರುಗಳ ಆರಾಧನೆಯಲ್ಲಿ ಪ್ರಮುಖವಾಗಿ ಕಾಣ ಸಿಗುವುದು ಗುರು ಶ್ರೀ ರಾಘವೇಂದ್ರರ
ವೃಂದಾವನಗಳು. ಬಹುತೇಕ ನಾಡಿನ ಉದ್ದಕ್ಕೂ ಹರಡಿದ ರಾಯರ ವೃಂದಾವನಗಳಲ್ಲಿ ಶಿವಮೊಗ್ಗದ
ಪರಿಸರದಲ್ಲಿಯೇ ಪುರಾತನವಾದ ಮೃತ್ತಿಕಾ ಬೃಂದಾವನಗಳು ಕಾಣ ಸಿಗುತ್ತವೆ. ಅವುಗಳಲ್ಲಿ ಅಯ್ದ
ಬೃಂದಾವನಗಳ ಕಿರು ಪರಿಚಯ.

ಹೊನ್ನಾಳಿ ಬೃಂದಾವನ :
ಈ ಭಾಗದ ಪ್ರಸಿದ್ದ ಬೃಂದಾವನಗಳಲ್ಲಿ ಒಂದಾದ ಇದು ದ್ವಿತಿಯ ಬೃಂದಾವನವೆಂದೆ ಖ್ಯಾತಿ ಪಡೆದಿದೆ.
ರಾಯರು ವೃಂದಾವನ ಪ್ರವೇಶದ 50 ವರ್ಷದ ನಂತರ ಅಂದರೆ ಸುಮಾರು 1720 ರಲ್ಲಿಸ್ಥಾಪನೆಯಾದ ಈ ಬೃಂದಾವನವೂ ತುಂಗಭದ್ರಾ ನದಿಯ ತಟದಲ್ಲಿದೆ. ಇಲ್ಲಿನ ಸ್ಥಳೀಯ ನಂಬಿಕೆಯಂತೆ ಶ್ರೀ ಗುರು ರಾಘವೇಂದ್ರರೇ ಇದನ್ನು ಸ್ಥಾಪಿಸಿದರು ಎನ್ನುತ್ತಾರೆ. ಇಲ್ಲಿನ ಬೃಂದಾವನ ಸ್ಥಾಪಿಸಲು ರಾಮಾಚಾರ್ಯ ಎಂಬ ಭಕ್ತರ ಅಪೇಕ್ಷೆ ಮೇರೆಗೆ ಭಕ್ತರು ಮೂಲ ಬೃಂದಾವನದಿಂದ ಮೄತ್ತಿಕೆ ತರುವಾಗ ಮೃತ್ತಿಕೆ ಭರುವ ಮುನ್ನವೇ ಸ್ಥಾಪನೆಗೆ ಸಮಯವಾದಾಗ ಒಬ್ಬ ವಯಸ್ಸಾದ ವ್ಯಕ್ತಿ ತಾನೇ ಮೃತ್ತಿಕೆ ತಂದಿರುವೆ ಎಂದು ಮಠ ಸ್ಥಾಪಿಸಲು ನಿಗದಿಪಡಿಸಿದ ಜಾಗಕ್ಕೆ ತೆರಳಿ ಹಾಗೆಯೇ ಮರೆಯಾಗಿದ್ದನ್ನು ನೋಡುತ್ತಾರೆ. ಶ್ರೀ ರಾಯರೇ ಇಲ್ಲಿ ಅವತರಿಸಿದರು ಎಂಬ ನಂಬಿಕೆ ಇದೆ. ಇಲ್ಲಿನ ಹನುಮನ ಮೂರ್ತಿಯನ್ನ ಅವರೇ ತಂದರು ಎಂಬ ನಂಬಿಕೆ ಇದೆ. ನಂತರ ಇಲ್ಲಿ ಸ್ಥಾಪಿಸಲು ತಂದ ಮೃತ್ತಿಕೆಯನ್ನು ಸಮೀಪದ ಉಡುಗಣಿಯಲ್ಲಿ ಸ್ಥಾಪಿಸಲಾಯಿತು. ಶಿವಮೊಗ್ಗ – ಹರಿಹರ ಹೆದ್ದಾರಿಯಲ್ಲಿ ಹೊನ್ನಾಳಿ ಇದ್ದು ಸುಲಭವಾಗಿ ತಲುಪಬಹುದು.

ಉಡುಗಣಿ ಬೃಂದಾವನ:

ಉಡುಗಣಿ ಬೃಂದಾವನ:
ಸುಮಾರು 1764 ರಲ್ಲಿ ಸ್ಥಾಪನೆಯಾದ ಈ ಬೃಂದಾವನ ಅಕ್ಕಮಹಾದೇವಿಯ ಜನ್ಮ ಸ್ಥಳ ಉಡುತಣಿಯಸಮೀಪದಲ್ಲಿದೆ. ಚಿಕ್ಕ ಕಟ್ಟದಲ್ಲಿದ ಇದ್ದ ಈ ಬೃಂದಾವನಕ್ಕೆ ಈಗ ನೂತನವಾಗಿ ವಿಶಾಲವಾದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ರಾಯರು ಬೃಂದಾವನ ಪ್ರವೇಶಿಸಿದ ಸುಮಾರು 93 ವರ್ಷಗಳ ನಂತರ ಸ್ಥಾಪನೆಗೊಂಡ ಈ ವೃಂದಾವನ ಶ್ರೀ ಶ್ರೀ ವರದೇಂದ್ರ ತೀರ್ಥರು ಮಂತ್ರಲಾಯದ
ಯತಿಗಳಾಗಿದ್ದಾಗ ಸ್ಥಾಪನೆಗೊಂಡಿದೆ. ಹೊನ್ನಾಳಿಯಲ್ಲಿ ಸ್ಥಾಪಿಸಲು ತಂದಿದ್ದ ಮೃತ್ತಿಕೆಯನ್ನ ಇಲ್ಲಿ ಇರಿಸಿ ಸ್ಥಾಪನೆ ಮಾಡಿದ ಕಾರಣ ಈ ಕ್ಷೇತ್ರ ತನ್ನದೇ ಆದ ಪ್ರಸಿದ್ದಿ ಪಡೆದಿದೆ. ಇಲ್ಲಿ ಮೂಲ ಬೃಂದಾವನ ಹಾಳಾಗಿದ್ದ ಕಾರಣ ಹೊಸ ಬೃಂದಾವನವನ್ನು ನಿರ್ಮಾಣ ಮಾಡಲಾಗಿದೆ. ಈಗ
ನವೀಕರಣ ಕಟ್ಟಡದಲ್ಲಿ ಎರಡೂ ಬೃಂದಾವನಕ್ಕೆ ಸ್ಥಳ ಮಾಡಿಕೊಡಲಾಗುತ್ತಿದೆ. ಉಡುಗಣಿ
ಷಿಕಾರಿಪುರದಿಂದಿ ಸುಮಾರು 14 ಕಿ ಮೀ ದೂರದಲ್ಲಿದೆ.

ಚನ್ನಗಿರಿ ಬೃಂದಾವನ

ಚನ್ನಗಿರಿ ಬೃಂದಾವನ :

06-02-1783 ರಲ್ಲಿ ಸ್ಥಾಪನೆಯಾದ ಈ ಬೃಂದಾವನ ಈ ಭಾಗದ ಪುರಾತನ ಬೃಂದಾವನಗಳಲ್ಲಿ
ಒಂದು. ಸುಮಾರು 12 ಕ್ಷೇತ್ರಗಳ ಸಾಲಿಗ್ರಾಮಗಳಲ್ಲಿ ಅವಾಹಿಸಿ ಕೂರ್ಮ ಪೀಠದಲ್ಲಿ ಈ
ಬೃಂದಾವನದಲ್ಲಿ ಸ್ಥಾಪನೆ ಮಾಡಲಾಗಿದೆ. ಶ್ರೀಕರಾಷ್ಟಾಕ್ಷರ ಮಂತ್ರವನ್ನು ಬರೆದ ಲಿಖಿತ
ತಾಮ್ರದ ತಗಡನ್ನು ಅಷ್ಟಭಂದ ಪಾಕದ ಮೂಲಕ ಸ್ಥಾಪನೆ ಮಾಡಲಾಗಿದೆ. ಇನ್ನು ಬೃಂದಾವನಕ್ಕೆ ಸುಮಾರು 1993 ರಲ್ಲಿ ಹೊಸದಾದ ರಥವನ್ನು ಮಾಡಲಾಗಿದೆ. ಇದು ಪಂಚಮ ಮಂತ್ರಾಲಯವೆಂದೆ
ಪ್ರಸಿದ್ದಿ ಪಡೆದಿದೆ.

ಸಾಗರದ ಬೃಂದಾವನ:
ಈ ಬೃಂದಾವನ ಮೂಲತಹ ರಾಯರು ಬೃಂದಾವನ ಪ್ರವೇಶಿಸಿದ ನಾಲ್ಕು ವರ್ಷದ ನಂತರ 1675 ರಲ್ಲಿ ಹೊಸನಗರ ತಾಲ್ಲೂಕಿನ ನಗರದಲ್ಲಿ ಸ್ಥಾಪನೆಯಾಗಿತ್ತು. ಆದರೆ ಕಳೆದ ಶತಮಾನದಲ್ಲಿ ಶರಾವತಿ ನದಿಗೆ ಆಣೆಕಟ್ಟು ನಿರ್ಮಾಣವಾದಾಗ ಈ ಬೃಂದಾವನ ಮುಳುಗಡೆ ಭೀತಿ ಎದುರಾಯಿತು. ಆಗ ಅಲ್ಲಿನ
ಭಕ್ತರು ವೆಂಕಟಾಚಲ ಹೊಳ್ಳ ಅವರ ನೇತೃತ್ವದಲ್ಲಿ ಈ ಬೃಂದಾವನವನ್ನು ಸಮೀಪದ ಸಾಗರಕ್ಕೆ ಸ್ಥಳಾಂತರಿಸಿದರು. ಆದರೆ ಮೂಲ ಬೃಂದಾವನದಲ್ಲಿ ಭಿನ್ನವಾದ ಕಾರಣ ಸುಮಾರು 40 ವರ್ಷದ ಹಿಂದೆ ನೂತನ ಬೃಂದಾವನವನ್ನು ಸ್ಥಾಪಿಸಲಾಯಿತು. ಈಗ ಅಲ್ಲಿ ಹಲವು ಪರಿವಾರ ದೇವರುಗಳನ್ನ ಸ್ಥಾಪಿಸಲಾಗಿದ್ದು ತನ್ನದೇ ಆದ ಸ್ಥಾನವನ್ನು ಪಡೆದಿದೆ. ಕಾಲಂತರದಲ್ಲಿ ಹಲವು ಬೃಂದಾವನಗಳು ಸ್ಥಾಪಿತಗೊಂಡರು ಪುರಾತನ ಹಿನ್ನೆಲೆಯಲ್ಲಿ ಇವು ಪ್ರಮುಖವಾದವು. ಈಗ ಶಿವಮೊಗ್ಗದ ನಗರದಲ್ಲಿಯೇ ಹಲವು ಬೃಂದಾವನಗಳನ್ನು ನೋಡಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles