ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಪ್ರತಿಷ್ಠಾಪನೆಗೊಂಡ ಶಕ್ತಿ ಗಣಪನ ಸನ್ನಿಧಿಯಲ್ಲಿ ವಿಶೇಷ ಪೂಜೆ

ಬೆಂಗಳೂರು: ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಪ್ರತಿಷ್ಠಾಪನೆಗೊಂಡ  ಸಕಲ ಇಷ್ಟಾರ್ಥದಾಯಕ ಶಕ್ತಿ ಗಣಪನ  ಸನ್ನಿಧಿಯಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀ ಶಕ್ತಿ ಗಣಪತಿಗೆ ಬೆಳ್ಳಿಯ ಕಿರೀಟ, ಮುಖವಾಡ, ಕವಚವನ್ನು ಧಾರಣೆ ಮಾಡಿ, ವಿಶೇಷ ಅಲಂಕಾರ ಮಾಡಲಾಗಿತ್ತು.

ಶಕ್ತಿ ಗಣಪ ದೇವಸ್ಥಾನದ ಹಿನ್ನೆಲೆ, ಇಲ್ಲಿನ ವಿಶೇಷತೆ

 ನಗರದ ಬನಶಂಕರಿ 3ನೇ ಹಂತದ ಹೊಸಕ್ಕೇರಿ ಹಳ್ಳಿಯ ಗ್ರಾಮಕ್ಕೆ ಸಮೀಪದಲ್ಲಿರುವ ಶ್ರೀ ದತ್ತ ಪೀಠದಿಂದ ಕೊಗಳತೆಯ ದೂರದಲ್ಲಿದೆ ಗುರು ದತ್ತ ಬಡವಾಣೆಯಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾನವಿದೆ. ಮುಂಜಾನೆಯ ಸೂರ್ಯ ಉದಯಿಸುವ ಹೊತ್ತಿನಲ್ಲಿ ಶಾಂತ ವಾತಾವರಣ, ಹಕ್ಕಿಗಳ ಕಲರವದ ನಡುವೆ ಭಕ್ತಾದಿಗಳಿಗೆ ಭಗವಂತನ ದಿವ್ಯದರ್ಶನ ಮಾಡಿದ ಧನ್ಯತಾ ಭಾವ. ನಾಲ್ಕು ಕೈಗಳನ್ನು ಹೊಂದಿ, ಬಲ ಬದಿಯ ಎರಡು ಪಾಶ-ಅಂಕುಶಗಳನ್ನು ಹಾಗೂ ಮತ್ತೆರಡು ಕೈಗಳಲ್ಲಿ ಭಕ್ತರ ಇಷ್ಟಾರ್ಥಗಳನ್ನು ಸಿಂಧೂರ ವರ್ಣದ ಸ್ವಾಮಿ ನೆರವೇರಿಸುತ್ತಿದ್ದಾನೆ.  

ಗಣಪತಿಯ ಎಡ ಪಾರ್ಶ್ವದಲ್ಲಿ ಶಕ್ತಿ ದೇವಿ ಆಸೀನಳಾಗಿದ್ದಾಳೆ. ಅಭಯ ಮುದ್ರೆ, ಅಂಕುಶ(ಸೃಣೀ), ಪಾಶವನ್ನು ಧರಿಸಿ, ಮತ್ತೊಂದು ಕೈಯಿಂದ ಶಕ್ತಿಯನ್ನು ಗಣಪ ಆಲಂಗಿಸಿಕೊಂಡಿದ್ದಾನೆ .
ಶಕ್ತಿ ಗಣಪತಿಯು ಸೂರ್ಯಾಸ್ತದ ನಸುಗೆಂಪು ವರ್ಣದವನಾಗಿ, ಶಕ್ತಿಯು ಹಸಿರು ಬಣ್ಣವನ್ನು ಹೊಂದಿದ್ದಾಳೆ. ಇಂದ್ರಿಯಗಳ ನಿಯಂತ್ರಣವನ್ನು ಸಾಧಿಸಿ ಇಚ್ಛಿತ ಕೆಲಸದ ಮೆಲೆ ಏಕಾಗ್ರತೆ ಕೇಂದ್ರಿಕರಿಸಲು ಶಕ್ತಿ ಗಣಪತಿಯ ಆರಾಧನೆಯು ಉಪಯುಕ್ತವೆಂದು ಪರಿಗಣಿಸಲಾಗಿದೆ.  ಮುದ್ಗಲ ಪುರಾಣದಲ್ಲಿ 32 ಗಣಪತಿಯ ಬಗ್ಗೆ ಉಲ್ಲೇಖವಿದೆ. ಇದರಲ್ಲಿ ಶಕ್ತಿ ಗಣಪತಿ ಕೂಡ ಒಂದು. ಶಕ್ತಿಯೆಂದರೆ ಪಾರ್ವತಿ ದೇವಿಯ ಅಂಶವಿರುವಂತಹ ದೇವತೆ. ಆ ಶಕ್ತಿ ದೇವತೆಯನ್ನು ಎಡ ಬದಿಯ ತೊಡೆಯ ಮೇಲೆ ಕುಳ್ಳಿರಿಸಿರುವ ಗಣಪನೇ ಶಕ್ತಿ ಗಣಪ. ಶಕ್ತಿ ಗಣಪತಿಯನ್ನು ಉಪಾಸನೆ ಮಾಡುವುದರಿಂದ ಸಕಲ ಜೀವಿಗಳಲ್ಲಿ, ಶಕ್ತಿ ಪರಾಕ್ರಮ ಪ್ರಾಪ್ತಿಯಾಗುತ್ತದೆ. ಇಷ್ಟಾರ್ಥದಾಯಕ, ವಿಘ್ನಗಳನ್ನು ಪರಿಹರಿಸುವ ಅಭೀಷ್ಟಗಳನ್ನು ನೀಡುವ ಹಾಗೂ ನಮ್ಮಲ್ಲಿ ನವ ಚೈತನ್ಯ, ಶಕ್ತಿ ತುಂಬುವ ಭಗವಂತನೇ ಶ್ರೀ ಶಕ್ತಿ ಗಣಪತಿ. ಶ್ರೀ ಶಕ್ತಿ ಗಣಪತಿ ನಾಲ್ಕು ಭುಜಗಳಿಂದ ಕೂಡಿದ್ದವನಾಗಿದ್ದಾನೆ. ಕೆಂಪು, ಸ್ವರ್ಣ, ನೀಲಿ, ಬಿಳಿ, ಪಿಂಗಳ ಕೂಡಿದಂತೆ ಸಿಂಧೂರ ವರ್ಣದವನಾಗಿದ್ದಾನೆ. ಮಾಧ್ವ ಸಂಪ್ರದಾಯದಲ್ಲಿ ಗಣಪತಿಯನ್ನು ವಿಶ್ವಂಭರ ಮೂರ್ತಿ ಎಂದು ಕರೆಯಲಾಗುತ್ತದೆ.  

ಮಾಹಿತಿ: ತೀರ್ಥಹಳ್ಳಿ ಅನಂತ ಕಲ್ಲಾಪುರ

Related Articles

ಪ್ರತಿಕ್ರಿಯೆ ನೀಡಿ

Latest Articles