ಕಡೇ ನಂದಿಹಳ್ಳಿ ಕ್ಷೇತ್ರದಲ್ಲಿ ದಸರಾ: ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಆಮಂತ್ರಣ

ರಂಭಾಪುರಿ ಪೀಠ (ಬಾಳೆಹೊನ್ನೂರು): ಬಹಳ ವರುಷಗಳಿಂದ ಶರನ್ನವರಾತ್ರಿ ದಸರಾ ಮಹೋತ್ಸವ ಆಚರಿಸಿಕೊಂಡು ಬರುತ್ತಿರುವ ಡಾ. ವೀರಸೋಮೇಶ್ವರ ಜಗದ್ಗುರುಗಳಿಗೆ ಕಡೇನಂದಿಹಳ್ಳಿ ಕ್ಷೇತ್ರದ ಶ್ರೀಗಳನ್ನು ಮೊದಲ್ಗೊಂಡು ನೂರಾರು ಜನ ಸದ್ಭಕ್ತರು ರಂಭಾಪುರಿ ಪೀಠಕ್ಕೆ ಸೆ.21 ರಂದು ಆಗಮಿಸಿ ಅಧಿಕೃತವಾಗಿ ಭಿನ್ನಹ ಪತ್ರ ಅರ್ಪಿಸಿ ಆಶೀರ್ವಾದ ಪಡೆದರು.


ಶಕ್ತಿ ಆರಾಧನೆಯ ನಾಡಹಬ್ಬ ದಸರಾ ಮಹೋತ್ಸವ ಬರಲಿರುವ ಅಕ್ಟೋಬರ 7 ರಿಂದ 15 ರ ವರೆಗೆ ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿ ಕ್ಷೇತ್ರದಲ್ಲಿ ನೆರವೇರಿಸಲು ಎಲ್ಲ ಭಕ್ತರು ಸಿದ್ಧರಾಗಿ ಶ್ರೀ ಜಗದ್ಗುರುಗಳನ್ನು ಆಮಂತ್ರಿಸಲು ರಂಭಾಪುರಿ ಪೀಠಕ್ಕೆ ಬಂದಿದ್ದೇವೆ ಎಂದು ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಬಿನ್ನಹ ಪತ್ರವನ್ನು ಭಕ್ತರೊಡಗೂಡಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನವಿತ್ತ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಂತೋಷದಿ0ದ ಒಪ್ಪಿ ತಮ್ಮ ಅನುಮತಿಯನ್ನಿತ್ತರು. ಸರ್ವ ಜನಾಂಗದ ಶಾಂತಿಯ ತೋಟ ಈ ಕನ್ನಡ ನಾಡು. ನಾಡಹಬ್ಬ ಶಕ್ತಿ ಆರಾಧನೆಯ ಹಬ್ಬವಾಗಿದ್ದು ಸಂಪ್ರದಾಯ ಮತ್ತು ಸರಳವಾಗಿ ಆಚರಿಸಿ ಧರ್ಮದ ಆದರ್ಶ ಮೌಲ್ಯಗಳನ್ನು ಪ್ರಸಾರಪಡಿಸುವ ಉದ್ದೇಶ ಹೊಂದಿದ್ದೇವೆ. ಜಾತಿ ಮತ ಪಂಥ ಎನ್ನದೇ ಶ್ರೀ ಪೀಠದ ನಿಬಂಧನೆಯ0ತೆ ಆಚರಿಸಿಕೊಂಡು ಬರುವ ಜವಾಬ್ದಾರಿ ತಮ್ಮದಾಗಿದೆ ಎಂದ ಜಗದ್ಗುರುಗಳು ಬೆಳಿಗ್ಗೆ ಲೋಕ ಕಲ್ಯಾಣಾರ್ಥ ಇಷ್ಟಲಿಂಗ ಮಹಾಪೂಜಾ ಸಂಜೆ ಧರ್ಮ ಸಮ್ಮೇಳನ ಜಗುಲಿದ್ದು ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಡೇನಂದಿಹಳ್ಳಿ ಕ್ಷೇತ್ರದಲ್ಲಿ ನೆನಪು ಉಳಿಯುವಂಥ ಸಮಾರಂಭ ಇದಾಗಿದೆ ಎನ್ನುವುದರಲ್ಲಿ ಯಾವ ಸಂದೇಹವು ಇಲ್ಲ ಎಂದರು.
ಈ ಸಂದರ್ಭದಲ್ಲಿ ಜಕ್ಕಲಿ ವಿಶ್ವಾರಾಧ್ಯ ಶ್ರೀ, ಕಡೇನಂದಿಹಳ್ಳಿ ಶ್ರೀ, ಬಬಲಾದ ಶ್ರೀ, ಹಾರನಹಳ್ಳಿ ಶ್ರೀ, ಹಂಪಸಾಗರ ಶ್ರೀ, ಚನ್ನಗಿರಿ ಶ್ರೀ, ಮುತ್ತಿಗೆ ಶ್ರೀಗಳು ಸೇರಿದಂತೆ ನೂರಾರು ಪ್ರಮುಖ ಭಕ್ತರು ಉಪಸ್ಥಿತರಿದ್ದರು.


ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,

Related Articles

ಪ್ರತಿಕ್ರಿಯೆ ನೀಡಿ

Latest Articles