ನಮ್ಮ ಜಾತಕದಲ್ಲಿರುವ ಗ್ರಹಗಳ ದೋಷ ನಿವಾರಣೆಗಾಗಿ ಹಾಗೂ ಅವುಗಳ ಬಲವರ್ಧನೆಗಾಗಿ ನಾವು ಮನೆಯಲ್ಲಿಯೇ ಅದಕ್ಕೆ ಸಂಬಂಧಿಸಿದ ಗಿಡಬಳ್ಳಿಗಳನ್ನು ಬೆಳೆಸುವುದರ ಮೂಲಕ ಕೂಡ ಸರಳವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.
ವ್ಯಕ್ತಿ ಆತ ಹುಟ್ಟಿದ ಸಮಯಕ್ಕೆ ಅನುಗುಣವಾಗಿ ರಾಶಿ ಫಲಗಳನ್ನು ಜ್ಯೋತಿಷ ಶಾಸ್ತ್ರದ ಮೂಲಕ ಕಂಡುಕೊಳ್ಳಲಾಗುತ್ತದೆ. ಅದರಂತೆ ವ್ಯಕ್ತಿಯ ಬದುಕಿನ ಫಲಾಫಲಗಳು, ಜೀವನದ ಏರಿಳಿತಗಳು ಕೂಡಾ ಗೋಚರವಾಗುತ್ತವೆ. ಅದನ್ನು ನಂಬುವವರ ಬದುಕಿನಲ್ಲಿ ಇಂಬು ನೀಡುವಂತಹ ಘಟನೆಗಳು ಕೆಲವೊಮ್ಮೆ ನಡೆಯುವುದು. ಜ್ಯೋತಿಷ ಶಾಸ್ತ್ರವು ಗ್ರಹದೋಷ ನಿವಾರಣೆಗೂ ಕೆಲವೊಂದು ಪರಿಹಾರಗಳನ್ನು ಸೂಚಿಸುತ್ತವೆ.
ಇಲ್ಲಿ ವ್ಯಕ್ತಿಯ ಜನ್ಮ ನಕ್ಷತ್ರಕ್ಕನಗುಣವಾಗಿ ಯಾವ ಗಿಡವನ್ನು ಬೆಳೆಸಿದರೆ ಒಳಿತಾಗುವುದು ಎನ್ನುವ ಮಾಹಿತಿ ನೀಡಲಾಗಿದೆ.
ನಮ್ಮ ಜಾತಕದಲ್ಲಿರುವ ಗ್ರಹಗಳ ದೋಷ ನಿವಾರಣೆಗಾಗಿ ಹಾಗೂ ಅವುಗಳ ಬಲವರ್ಧನೆಗಾಗಿ ನಾವು ಮನೆಯಲ್ಲಿಯೇ ಅದಕ್ಕೆ ಸಂಬಂಧಿಸಿದ ಗಿಡಬಳ್ಳಿಗಳನ್ನು ಬೆಳೆಸುವುದರ ಮೂಲಕ ಕೂಡ ಸರಳವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.
ಅಶ್ವಿನಿ, ಮಘ, ಮೂಲ: ಈ ನಕ್ಷತ್ರಗಳ ಅಧಿಪತಿ ಕೇತು ಗ್ರಹ ಆದ್ದರಿಂದ ಕೇತು ದೋಷ ನಿವಾರಣೆಗೆ ದರ್ಬೆ ಗಿಡವನ್ನು ಬೆಳೆಸಿ ಹಾಗೆಯೇ ಜಾಜಿ ಹೂವಿನ ಗಿಡವನ್ನು ಮನೆಯಲ್ಲಿ ಇಟ್ಟು ಬೆಳೆಸಬಹುದು.
ಭರಣಿ, ಕುಂಭ, ಪೂರ್ವಷಾಢ : ಈ ನಕ್ಷತ್ರಗಳಿಗೆ ಅಧಿಪತಿ ಶುಕ್ರ ಗ್ರಹ ಆದ್ದರಿಂದ ಶುಕ್ರ ಗ್ರಹದ ದೋಷ ನಿವಾರಣೆಗೆ ಔದಂಬರ ಕಮಲದ ಹೂವಿನ ಗಿಡಗಳನ್ನು ಬೆಳೆಸಬಹುದು.*
ಕೃತಿಕಾ, ಉತ್ತರ, ಉತ್ತರಷಾಢಾ : ಈ ನಕ್ಷತ್ರಗಳ ಅಧಿಪತಿ ಸೂರ್ಯ ಗ್ರಹ. ಆದ್ದರಿಂದ ಸೂರ್ಯ ದೋಷ ನಿವಾರಣೆಗೆ ಬಿಳಿ ಎಕ್ಕ ಗಿಡ ಮತ್ತು ಕನಕಾಂಬರ ಹೂವಿನ ಗಿಡಗಳನ್ನು ಬೆಳೆಸಿದರೆ ಒಳ್ಳೆಯದು.
ರೋಹಿಣಿ, ಹಸ್ತ, ಶ್ರವಣ: ಈ ನಕ್ಷದ ಅಧಿಪತಿ ಚಂದ್ರ ಗ್ರಹ ಆದ್ದರಿಂದ ಚಂದ್ರ ಗ್ರಹ ದೋಷ ನಿವಾರಣೆಗೆ ಮುತ್ತುಗದ ಮರ ಮತ್ತು ಬಿಳಿ ತವರೆ ಗಿಡಗಳನ್ನು ಬೆಳೆಸಿದರೆ ಉತ್ತಮ.
ಮೃಗಶಿರಾ, ಚಿತ್ತ, ಧನಿಷ್ಟ: ಈ ನಕ್ಷತ್ರಗಳಿಗೆ ಅಧಿಪತಿ ಕುಜ ಗ್ರಹ ಆದ್ದರಿಂದ ಕುಜ ಗ್ರಹ ದೋಷ ನಿವಾರಣೆಗೆ ಕಗ್ಗಲಿ ಮರ ಹಾಗೂ ದತ್ತುಲಿ ಗಿಡಗಳನ್ನು ಮನೆಯ ಬಳಿ ಬೆಳೆಸಬಹುದಾಗಿದೆ.
ಆರಿದ್ರಾ, ಸ್ವಾತಿ, ಶತಾಭಿಷ; ಈ ನಕ್ಷತ್ರಗಳಿಗೆ ಅಧಿಪತಿ ರಾಹು ಗ್ರಹ ರಾಹು ಗ್ರಹ ದೋಷ ನಿವಾರಣೆಗೆ ಗರಿಕೆಯನ್ನು ಹಾಗೂ ಬೆಟ್ಟದ ತಾವರೆ ಹೂವಿನ ಗಿಡವನ್ನು ಬೆಳೆಸಬಹುದು.
ಪುನರ್ವಸು, ವಿಶಾಖ, ಪೂರ್ವ ಭಾದ್ರಪದ: ಗುರು ಗ್ರಹ ದೋಷ ನಿವಾರಣೆಗೆ ಅರಳಿ ಗಿಡ ಮತ್ತು ಪಾರಿಜಾತ ಹೂವಿನ ಗಿಡವನ್ನು ಬೆಳೆಸಬಹುದಾಗಿದೆ.
ಪುಷ್ಯ, ಅನುರಾಧ, ಉತ್ತರ ಭಾದ್ರಪದ: ಶನಿ ಗ್ರಹ ದೋಷ ನಿವಾರಣೆಗೆ ಶಮಿ ವೃಕ್ಷ ಹಾಗೂ ತುಳಸಿ ಗಿಡವನ್ನು ಬೆಳೆಸಬಹುದು.
ಆಶ್ಲೇಷ, ಜೇಷ್ಠ, ರೇವತಿ: ಬುಧ ಗ್ರಹ ದೋಷ ನಿವಾರಣೆಗೆ ಉತ್ತರೇನಿ ಗಿಡವನ್ನು ಮತ್ತು ಮಲ್ಲಿಗೆ ಗಿಡವನ್ನು ಬೆಳೆಸಿದರೆ ಒಳ್ಳೆಯದು.
ಇದರಿಂದ ನಾವು ಪರಿಸರಕ್ಕೂ ಕೊಡುಗೆ ನೀಡಿದಂತಾಗುವುದು ಅಲ್ಲದೆ ನಮ್ಮ ದೇಹ ಹಾಗೂ ಮನಸ್ಸಿನ ಸ್ವಾಸ್ಥ್ಯಕ್ಕೆ ಸಹಕಾರಿಯಾಗುತ್ತದೆ.
ಸಂಗ್ರಹ: ರಂಗರಾಜನ್ ಹೆಚ್.ಎಸ್
ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇವಸ್ಥಾನ, ಹುಸ್ಕೂರು, ಬೆಂಗಳೂರು