ಫಟಾಫಟ್ ಮಾಡಿ ಮಜ್ಜಿಗೆ ಸಾರು

ರೆಸಿಪಿ ಬರಹ: ಶಿವಭಟ್ ಸೂರ್ಯಂಬೈಲು, ಉಪ್ಪಿನಂಗಡಿ

ಕಡಿಮೆ ಅವಧಿಯಲ್ಲಿ ತಯಾರಿಸಬಹುದಾದ ಸಾರು ಇದು. ಬಿಸಿ ಬಿಸಿ ಅನ್ನಕ್ಕೆ ಬಹಳ ರುಚಿ, ಹಾಗೆಯೇ ಕುಡಿಯಬಹುದು. ಆರೋಗ್ಯಕ್ಕೂ ಒಳ್ಳೆಯದು.

ಮಾಮೂಲು ಒಗ್ಗರಣೆಗಿಟ್ಟು, ಚಿಟಿಕೆ ಇಂಗು, ನಾಲ್ಕು ಬೆಳ್ಳುಳ್ಳಿ ಬೀಜ,ಹಾಕಿ. ಒಂದು ಲೀ. ನೀರು ಹಾಕಿ, ಉಪ್ಪು, ಒಂದು ಚಮಚ ಜೀರಿಗೆ ಹುಡಿ, ಒಂದು ಚಮಚ ಸಾರಿನಪುಡಿ, ಸ್ವಲ್ಪ ಬೆಲ್ಲ, ಐದಾರು ಕಾಯಿಮೆಣಸು, ಕಾಲು ಚಮಚ ಕಾಳುಮೆಣಸಿನಹುಡಿ, ಚಿಟಿಕೆ ಅರಶಿನಹುಡಿ ಎಲ್ಲಾ ಹಾಕಿ ಚೆನ್ನಾಗಿ ಕುದಿ ಬಂದಾಗ ಎರಡು ಕಪ್ ದಪ್ಪ ಮಜ್ಜಿಗೆ ಸೇರಿಸಿ ಕುದಿಸಿ, ಕೊತ್ತಂಬರಿ ಸೊಪ್ಪು ಕಟ್ ಮಾಡಿ ಮಿಶ್ರ ಮಾಡಿ. ತುಂಬಾ ರುಚಿಯಾದ ಮಜ್ಜಿಗೆ ಸಾರು ರೆಡಿ.

10ನಿಮಿಷದಲ್ಲಿ ಮಾಡಬಹುದಾದ ಸಾರು ಇದು. ತುಪ್ಪ ಅಥವಾ ಬೆಣ್ಣೆಯಲ್ಲಿ ಒಗ್ಗರಣೆ ಮಾಡಿದರೆ ಪರಿಮಳ ಜಾಸ್ತಿ.

Related Articles

ಪ್ರತಿಕ್ರಿಯೆ ನೀಡಿ

Latest Articles