ಹೊಸಕೋಟೆಯಲ್ಲಿ ಲಿಂಗೈಕ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದ್ವಿತೀಯ ಪುಣ್ಯಸ್ಮರಣೆ, ದಾಸೋಹ

ಹೊಸಕೋಟೆ: ತುಮಕೂರು ಶ್ರೀ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದ್ವಿತೀಯ ಪುಣ್ಯಸ್ಮರಣೆ ಹೊಸಕೋಟೆ ಟೌನ್‌ನಲ್ಲಿರುವ ಶ್ರೀ ಬಸವೇಶ್ವರ ವೃತ್ತ (ತಾಲ್ಲೂಕು ಕಚೇರಿ ಮುಂಭಾಗ)ದಲ್ಲಿ ಜ.21 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ನಂತರ 11 ಗಂಟೆಗೆ ದಾಸೋಹ ನಡೆಯಲಿದೆ.

ಹೊಸಕೋಟೆಯ ಶ್ರೀ ವೀರಶೈವ ಲಿಂಗಾಯತ ಸಂಘಟನೆಗಳು ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ನಾಗಲಾಪುರ ವೀರ ಸಿಂಹಾಸನ ಸಂಸ್ಥಾನ ಮಠದ ಅಧ್ಯಕ್ಷರಾದ ಪಟ್ಟದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles