ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ದಿವ್ಯ ಸಂಕಲ್ಪಮತ್ತು ಅನುಗ್ರಹದೊಂದಿಗೆ ಪ್ರಾರಂಭವಾದ ಶ್ರೀಶಾಂಕರ ತತ್ತ÷್ವಪ್ರಸಾರ ಅಭಿಯಾನದಿಂದ 2016ರಲ್ಲಿ ರಾಜ್ಯಾದ್ಯಂತ ಶ್ರೀ ಶಂಕರಾಚಾರ್ಯರ ಅಷ್ಟೋತ್ತರ ಶತನಾಮ ಪಾರಾಯಣ ಯಜ್ಞವನ್ನು ಹಮ್ಮಿಕೊಳ್ಳಲಾಗಿತ್ತು.
ಅಂದಿನಿ0ದ ಈ ಯಜ್ಞವು ಅವಿರತವಾಗಿ ನಡೆಯುತ್ತಿದ್ದಯ ಇಂದಿಗೂ ಸನಾತನಧರ್ಮೋದ್ಧಾರಕರಾದ ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಪವಿತ್ರ ನಾಮದ ಪಾರಾಯಣ ಎಲ್ಲೆಡೆ ಪ್ರಚಲಿತವಾಗಿದ್ದು, ಮನೆಮನೆಗಳಲ್ಲಿ ನಿತ್ಯ ಪಾರಾಯಣದಲ್ಲಿದೆ.
2018 ರ ಮೇ 20 ರ ವಿಲಂಬಿನಾಮ ಸಂವತ್ಸರದ ಅಧೀಕ ಜೇಷ್ಠ ಶುಕ್ಲ ಪಂಚಮಿಯ0ದು ಶೃಂಗೇರಿಯಲ್ಲಿ ನಡೆದ ಈ ಯಜ್ಞದ ಸಮಾರೋಪ ಸಮಾರಂಭದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ತನ್ನ ಅನುಗ್ರಹ ಭಾಷಣದಲ್ಲಿ ‘ನಮಃ ಶಂಕರಾಯ’ ಎಂಬ ಮಂತ್ರದ ಉಪದೇಶವನ್ನು ಭಕ್ತರಿಗೆ ಅನುಗ್ರಹಿಸಿದ್ದರು.
ಪ್ರಸ್ತುತ ಬರುವ ಪ್ಲವನಾಮ ಸಂವತ್ಸರಕ್ಕೆ ಈ ಮಂತ್ರೋಪದೇಶವು ದೊರೆತು 3 ವರ್ಷಗಳು ಪೂರೈಸುತ್ತಿರುವುದು ಹಾಗೂ ಇದೇ ವರ್ಷ ಶ್ರೀ ಮಹಾಸನ್ನಿಧಾನಂಗಳವರ ಸಪ್ತತಿಪೂರ್ತಿ ವರ್ಧಂತಿ ಮಹೋತ್ಸವ ಸಂದರ್ಭವೂ ಇದಾಗಿರುವುದರಿಂದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಅಪ್ಪಣೆಯಂತೆ ಲೋಕಕಲ್ಯಾಣಕ್ಕಾಗಿ ಒಂದು ತಿಂಗಳ ಪರ್ಯಂತ ಈ ಮಂತ್ರದ ವಿಶೇಷ ಜಪಯಜ್ಞವನ್ನು ಹಮ್ಮಿಕೊಳ್ಳಲಾಗಿದೆ.
ಜಪಯಜ್ಞದ ಪ್ರತಿನಿತ್ಯದ ಸ್ವರೂಪ: ಗುರು ಪ್ರಾರ್ಥನೆ, ಶ್ರೀ ಶಂಕರಾಚಾರ್ಯ ಅಷ್ಟೋತ್ತರ ಶತನಾಮಾವಳಿ ಪಾರಾಯಣ (1 ಬಾರಿ), ನಮಃ ಶಂಕರಾಯ – ನಾಮ ಜಪ (ಕನಿಷ್ಟ ಒಂದು ಸಾವಿರ ಬಾರಿ).
ಆಸ್ತಿಕರೆಲ್ಲರೂ ಈ ಮಂತ್ರವನ್ನು ಪ್ರತಿನಿತ್ಯ ಜಪ ಮಾಡುತ್ತಿದ್ದರೂ, ಈ ಒಂದು ತಿಂಗಳ ಕಾಲ ತಮ್ಮ ತಮ್ಮ ಮನೆಗಳಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜಪಮಾಡಿ ಶ್ರೀ ಆದಿಶಂಕರ ಭಗವತ್ಪಾದರ ಮತ್ತು ಉಭಯ ಜಗದ್ಗುರು ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀಮಠ ಶೃಂಗೇರಿಯ ಆಡಳಿತಾಧಿಕಾರಿ ಡಾ.ವಿ.ಆರ್.ಗೌರಿಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ