ಗುಣ ಪರಿಪೂರ್ಣನಾದ ಪರಮಾತ್ಮನನ್ನು ಭಜಿಸುವುದೇ ಆನಂದ

‘ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು.’: ಪರಮಾತ್ಮನ ವೈಭವ, ಪರಮಾತ್ಮನ ಮಹಿಮೆ, ರೂಪ, ಐಶ್ವರ್ಯ, ಜ್ಞಾನ, ಗುಣ, ಔದಾರ್ಯ, ಸೌಶೀಲ್ಯಾದಿ, ಅನಂತ ಕಲ್ಯಾಣ ಗುಣ ಪರಿಪೂರ್ಣನಾದ ಪರಮಾತ್ಮನನ್ನು ಕೀರ್ತಿಸುವುದೇ ಆನಂದ. ಅದೇ ಮನುಷ್ಯ ಜನ್ಮದ ಸಾರ್ಥಕತೆ. ಅದೇ ದಾಸರ ಅಂಬೋಣ.   

ದೃಷ್ಟಾಂತ: ಮೂವರು ಸಖಿಯರು ಸಂಜೆ ಸಮಯ. ವಿಹಾರಕ್ಕೆ ಹೊರಟರು. ಮಾರ್ಗದಲ್ಲಿ ಮಲ್ಲಿಗೆ ಪರಿಮಳ ಪುಷ್ಪರಾಶಿ ನೋಡಿ…

ಮೊದಲನೆಯವಳು: ಹೂಮಾಲೆ ಮಾಡಿ ದೇವರ ಪಾದಕ್ಕೆ ಅರ್ಪಿಸಿ ಪ್ರಸಾದವಾಗಿ ಪಡೆದಳು. 

ಎರಡನೆಯವಳು: ಹೂವನ್ನು ಮಾಲೆ ಮಾಡಿ ಮುಡಿಗಿಟ್ಟಳು. 

ಮೂರನೆಯವಳು: ಹೂವನ್ನು ಮಾಲೆ ಮಾಡಿ ಎಂಟಾಣೆಗೆ ಮಾರಿದಳು.


ಇದು ಸತ್ವ, ರಜ, ತಮೋಗುಣದ ಪ್ರತೀಕ. 

ಸತ್ವ ಗುಣ: ನಂದು ನಿನಗೆ, ನಿಂದು ನಿನಗೆ. 

ರಜೋಗುಣ: ನಂದು ನಿನಗೆ, ನಿಂದು ನಿನಗೆ. 

ತಮೋಗುಣ: ನಿಂದು ನನಗೆ, ನಂದು ನನಗೆ. 

ಅದಕ್ಕೆ ಭಗವದರ್ಪಿತ ಬುದ್ಧಿಯಿಂದ ಮಾಡಿದ ಎಲ್ಲಾ ವಸ್ತುವು ಪ್ರಸಾದರೂಪವಾಗಿ ಪ್ರಾಪ್ತಿಯಾಗುವುದು. ಇದನ್ನೆ ಪರಮಾತ್ಮ ಗೀತೆಯಲ್ಲಿ “ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತೇ// (ಗೀ. ೨–೬೫ ಶ್ಲೋಕ)  ಪ್ರಸಾದ ರೂಪವಾಗಿ ಸ್ವೀಕಾರ ಮಾಡಿದಾಗ ಮನಸ್ಸು ಪ್ರಸನ್ನತೆ ಉಂಟಾಗಿ ಸರ್ವದುಃಖನಾಶವಾಗಿ ಬುದ್ಧಿಯೂ ಪರಮಾತ್ಮನಲ್ಲಿ ಸ್ಥಿರವಾಗಿ ನಿಲ್ಲುವುದು. 
“ಹರಿಯು ಮುಡಿದ ಹೂವ, ಹರಿವಾಣದಲ್ಲಿ ಹೊತ್ತುಕೊಂಡು ಹರುಷದಿಂದ ಹಾಡಿಪಾಡಿ / ಕುಣಿದು ಚಪ್ಪಳಿಕ್ಕುತ// ಡಂಗುರವ ಸಾರಿ /ಹರಿಯ ಡಿಂಗರಿಗರೆಲ್ಲರು //

Related Articles

ಪ್ರತಿಕ್ರಿಯೆ ನೀಡಿ

Latest Articles