ಚಿಕ್ಕುಂಬಿ ಮಠದಲ್ಲಿ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆ

*ವೈ.ಬಿ.ಕಡಕೋಳ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕುಂಬಿ ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರ ಮಠವನ್ನು ಹೊಂದಿದ ಪುಣ್ಯ ಕ್ಷೇತ್ರ. ಈ ಮಠಕ್ಕೆ ಯಾವುದೇ ಅಂತಸ್ತುಗಳಿಲ್ಲ. ಶ್ರೀ ಮಠದ ಪೀಠಾಧಿಪತಿಗಳಾದ ಶ್ರೋತ್ರೀಯ ಬ್ರಹ್ಮನಿಷ್ಟ ಶ್ರೀಮದ್ ಅಭಿನವ ನಾಗಲಿಂಗ ಮಹಾಸ್ವಾಮಿಗಳ ಸಂಕಲ್ಪದ ಮೇರೆಗೆ ಪ್ರತಿ ವರ್ಷವೂ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳವರ ಪುಣ್ಯಾರಾಧನೆ ನಡೆಯುತ್ತದೆ.

ಈ ಬಾರಿ ಕೋವಿಡ್ ನಿಯಮಾನುಸಾರ ಜುಲೈ 11 ರಿಂದ ಪುಣ್ಯಾರಾಧನಾ ಕಾರ್ಯಕ್ರಮಗಳು ಆರಂಭಗೊ0ಡಿದ್ದು15 ರವರೆಗೆ ನಡೆಯಲಿದೆ.

ಪ್ರತಿ ದಿನ ಶ್ರೀಮಠದ ಕರ್ತೃ ಗದ್ದುಗೆಗೆ ಬ್ರಾಹ್ಮೀ ಮುಹೂರ್ತದಲ್ಲಿ ರುದ್ರಾಭಿಷೇಕ ಕಾರ್ಯಕ್ರಮ ಜರುಗುತ್ತಿದ್ದು ಸಾಯಂಕಾಲ 4 ಗಂಟೆಗೆ ಪಲ್ಲಕ್ಕಿ ಉತ್ಸವ, ಪ್ರತಿ ದಿನವೂ ಪ್ರವಚನ ನಡೆಯಲಿದೆ.

ಜುಲೈ 11ರಂದು ಸಂಜೆ 7.30 ಕ್ಕೆ “ದುರಿತ ವೆಚ್ಚನಿತನಾದರು” ವಿಷಯ ಕುರಿತಂತೆ ಪ್ರವಚನ ಜರುಗುವುದು. ನರಗುಂದ ಪುಣ್ಯಾರಣ್ಯ ಪತ್ರಿವನಮಠದ ಶ್ರೀ ಸಿದ್ದವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು.

ಅಣ್ಣಿಗೇರಿ ಶ್ರೀ ದಾಸೋಹಮಠದ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಗದಗ ಜಿಲ್ಲೆಯ ಬೆನಕನಕೊಪ್ಪದ ಶ್ರೀ ಗುರುದೇವ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀ ಶಿವಾನಂದ ಮಹಾಸ್ವಾಮಿಗಳು, ಹಾರೂಗೊಪ್ಪದ ಶ್ರೀ ಚನ್ನವೃಷಭೇಂದ್ರ ಲೀಲಾಮಠದ ಮಾತೋಶ್ರೀ ಶಿವಯೋಗಿನಿದೇವಿ ಹಾಗೂ ಮೊರಬ ಗ್ರಾಮದ ಶ್ರೀ ಸಿದ್ದಾರೂಢಮಠದ ಮಾತೋಶ್ರೀ ಬ್ರಹ್ಮಗಾಯತ್ರಿದೇವಿ ಪ್ರವಚನ ನೀಡುವರು.

ಈ ಸಂದರ್ಭದಲ್ಲಿ ಚಿಕ್ಕುಂಬಿ ಚುಳಕಿಯ ಚುನಾಯಿತ ಗ್ರಾಮಪಂಚಾಯತಿ ಸದಸ್ಯರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಗುವುದು.
15ರಂದು ಸಂಜೆ 7.30ಕ್ಕೆ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀಮದ್ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಠ ಚಿಕ್ಕುಂಬಿ ಪೂಜ್ಯರ ಸಾನ್ನಿಧ್ಯದಲ್ಲಿ “ಗುರು ಮಹಿಮೆ” ಕುರಿತ ಪ್ರವಚನ ಜರಗುವುದು.


ಚಿಕ್ಕುಂಬಿ ಮಠದ ಹಾಗೂ ಪೂಜ್ಯರ ಪರಿಚಯ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಾ ಕೇಂದ್ರ. ಈಗ ಇದು ಸವದತ್ತಿ ಎಲ್ಲಮ್ಮಾ ಕ್ಷೇತ್ರವೆಂದೂ ಹೆಸರಾಗಿದೆ. ಇದು ಬೆಳಗಾವಿ ಜಿಲ್ಲಾ ಕೇಂದ್ರದಿ0ದ 88 ಕಿ,ಮೀ, ಧಾರವಾಡ ಜಿಲ್ಲಾ ಕೇಂದ್ರದಿ0ದ 38 ಕಿ.ಮೀ. ಅಂತರದಲ್ಲಿದ್ದು ಇಲ್ಲಿಂದ 13 ಕಿ.ಮೀ ಅಂತರದಲ್ಲಿರುವ ಗ್ರಾಮ ಚಿಕ್ಕುಂಬಿ.

ಚಿಕ್ಕುಂಬಿಗೆ ಬರಲು ಸಾಕಷ್ಟು ಬಸ್ ವ್ಯವಸ್ಥೆ ಇದ್ದು ನರಗುಂದದಿ0ದ 25 ಕಿ,ಮೀ ನವಲಗುಂದದಿ0ದ 30 ಕಿ.ಮೀ ಹಿರೇಕುಂಬಿಯಿ0ದ ಒಂದೂವರೆ ಕಿ.ಮೀ ಯಲ್ಲಮ್ಮನಗುಡ್ಡದಿಂದ 7 ಕಿಮೀ ಅಂತರವಿರುವ ಈ ಗ್ರಾಮ ಊರ ಹೊರವಲಯದಲ್ಲಿ ವಿಶಾಲವಾದ ಕೆರೆಯನ್ನು ಹೊಂದಿದ್ದು ಬಸ್ ನಿಲ್ದಾಣದಿಂದ ಹತ್ತಿರದ ಬೆಟ್ಟದಂಚಿನಲ್ಲಿ ಶ್ರೀ ಜಗದ್ಗುರು ಅಜಾತ ಶ್ರೀ ನಾಗಲಿಂಗ ಮಹಾಸ್ವಾಮಿಗಳ ಮಠವುಂಟು. ಇಲ್ಲಿನ ಪೀಠಾಧಿಪತಿಗಳಾದ ಶ್ರೋತ್ರೀಯ ಬ್ರಹ್ಮನಿಷ್ಟ ಶ್ರೀ ಮದ್ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಸಕಲ ಸದ್ಬಕ್ತರ ಸದಿಚ್ಚೆಯ ಮೇರೆಗೆ ಇಲ್ಲಿ ರಚನಾತ್ಮಕ ಕಾರ್ಯ ಹಮ್ಮಿಕೊಳ್ಳುವ ಮೂಲಕ ಶ್ರೀ ಮಠವು ಸುಸಂಸ್ಕೃತ ಕಾರ್ಯಚಟುವಟಿಕೆಗಳ ಮೂಲಕ ಹೆಸರುವಾಸಿಯಾಗಿದೆ.

ಮಠದ ಹಿನ್ನಲೆ
ಪುರಾಣ ಪ್ರವಚನಕಾರರೂ ಆಗಿರುವ ಶ್ರೋತ್ರೀಯ ಬ್ರಹ್ಮನಿಷ್ಟ ಶ್ರೀ ಮದ್ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಇದೇ ಮಠದಲ್ಲಿ ಬೆಳೆದವರು. ಈ ಹಿಂದಿನ ಸ್ವಾಮಿಗಳು ಕೂಡ ಇವರ ಸಂಬ0ಧಿಕರೇ. ಈ ಮಠಕ್ಕೆ ತನ್ನದೇ ಆದ ಹಿನ್ನಲೆಯುಂಟು. ಶ್ರೀ ಅಜಾತ ಜಗದ್ಗುರು ನಾಗಲಿಂಗ ಶಿವಯೋಗಿಗಳು ತಮ್ಮ ಸಂಚಾರ ಕಾಲದಲ್ಲಿ ಚಿಕ್ಕುಂಬಿ ಗ್ರಾಮಕ್ಕೆ ಆಗಮಿಸಿ ಅನೇಕ ಲೀಲೆಗಳನ್ನು ಮಾಡಿ ಗ್ರಾಮದ ಪಶ್ಚಿಮ ಭಾಗಕ್ಕೆ ಇರುವ ಗುಡ್ಡದ ಓರೆಯಲ್ಲಿ ಆಲದ ಮರದ ಬುಡದಲ್ಲಿ ಕುಳಿತು ಯೋಗವನ್ನು ಮಾಡಿ ಇಲ್ಲಿಯೇ ಕೆಲವು ದಿನ ಉಳಿದುಕೊಂಡು ಈ ಕ್ಷೇತ್ರ ಪುಣ್ಯ ಕ್ಷೇತ್ರವಾಗಲೆಂದು ಹರಸಿದರು. ಅಷ್ಟೇ ಅಲ್ಲ ಇಲ್ಲಿಗೆ ಸಮೀಪದ ಹಂಚಿನಾಳ ಗ್ರಾಮದ ವಿಶ್ವಕರ್ಮ ದಂಪತಿಗಳದ ಅಖಂಡಪ್ಪ-ತುಳಜಮ್ಮ ದಂಪತಿಗಳಿಗೆ ಮಕ್ಕಳಾಗದಿರಲು ಅವರು ನಾಗಲಿಂಗಜ್ಜನನ್ನು ಸ್ಮರಿಸಲು, ಅವರಿದ್ದ ಮನೆಗೆ ಹೋಗಿ ನಿಮಗೆ ಸಂತಾನ ಪ್ರಾಪ್ತವಾಗಲೆಂದು ಹರಸುವ ಮೂಲಕ ಆ ಸಂತಾನ ಹದಿನೈದು ವರುಷಗಳವರೆಗೆ ಮಾತ್ರ ತಂದೆ ತಾಯಿಯ ಅಕ್ಕರೆಯಲ್ಲಿರಬೇಕು ಮುಂದಿನ ದಿನಗಳು ನಾಗಲಿಂಗ ಅಜ್ಜನ ಜೊತೆಗಿರಬೇಕು ಎಂಬ ಷರತ್ತು ವಿಧಿಸಲು ಸತಿಪತಿಗಳು ಅವರ ಅಭಿಲಾಷೆಗೆ ಒಪ್ಪಿದರು.
ಆ ಪ್ರಕಾರ ಅವರಿಗೆ ಗಂಡು ಮಗು ಜನಿಸಿತು. ನಾಗಲಿಂಗಜ್ಜನವರು ಆ ಮಗುವಿಗೆ ರುದ್ರೇಶನೆಂದು ನಾಮಕರಣ ಮಾಡಿದರು. ಸದರಿ ಮಗು ಹದಿನೈದು ವರುಷದ ನಂತರ ನಾಗಲಿಂಗಜ್ಜನೊ0ದಿಗೆ ಇರತೊಡಗಿತು.ತಮ್ಮ ಲೀಲೆಗಳನ್ನು ಪವಾಡಗಳನ್ನು ಮಾಡುತ್ತ ನಾಗಲಿಂಗಜ್ಜನು ಮುಂದೆ ರುದ್ರೇಶನನ್ನು ಚಿಕ್ಕುಂಬಿಗೆ ಕರೆದುಕೊಂಡು ಬಂದು ತಾನು ಈ ಹಿಂದೆ ಯೋಗ ಮಾಡಿದ ಗುಡ್ಡದ ಓರೆಯ ಆಲದ ಮರವಿದ್ದ ಸ್ಥಳದಲ್ಲಿಯೇ ಇದ್ದುಕೊಂಡು ಜನರಿಗೆ ಒಳ್ಳೆಯದನ್ನು ಮಾಡುತ್ತ ಸಾಗು ಎಂದು ಆಶೀರ್ವದಿಸಿ ಸಂಚಾರಗೈದರು. ಆ ಪ್ರಕಾರ ರುದ್ರೇಶ ಸ್ವಾಮಿಗಳು ಶ್ರೀ ಗುರು ತಪಸ್ಸು ಮಾಡಿದ ಸ್ಥಳದಲ್ಲಿ ಪರ್ಣಕುಟೀರ ಹಾಕಿಕೊಂಡು ಸದ್ಗುರುಗಳು ಹೇಳಿದ ಸಾಧನೆಯಲ್ಲಿ ನಡೆದು ಅನೇಕ ಲೀಲೆಗಳನ್ನು ಮಾಡಿ ಕಾಲಾಂತರದಲ್ಲಿ ಬ್ರಹ್ಮಲೀನವಾದರು.
ನಂತರದ ದಿನಗಳಲ್ಲಿ ಈ ಸ್ಥಳಕ್ಕೆ ಸವದತ್ತಿ ತಾಲೂಕಿನ ನವಿಲುತೀರ್ಥ ಹತ್ತಿರದಲ್ಲಿರುವ ವಟ್ನಾಳ ಗ್ರಾಮದ ವಿಶ್ವಕರ್ಮ ದಂಪತಿಗಳಾದ ಶಿದ್ಲಿಂಗಪ್ಪ-ಫಕೀರಮ್ಮ ಎಂಬ ಪುಣ್ಯ ದಂಪತಿಗಳ ಗರ್ಭದಲ್ಲಿ ಜನಿಸಿದ ಸುಪುತ್ರ ಬಾಲಕನು ಬಾಲ್ಯದಲ್ಲಿಯೇ ಸನ್ಯಾಸತ್ವವನ್ನು ಸ್ವೀಕರಿಸಿ ಮಲಪ್ರಭೆ ದಡದಲ್ಲಿ ವೈರಾಗ್ಯದಿಂದ ಜಪ-ತಪಗಳನ್ನು ಮಾಡಿ ಶ್ರೀ ದೇವಿಯ ಅನುಗ್ರಹ ಪಡೆದುಕೊಂಡು ಸಂಚಾರ ಮಾಡುತ್ತ ಚಿಕ್ಕುಂಬಿ ಗ್ರಾಮಕ್ಕೆ ಆಗಮಿಸಿದರು. ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರರು ಪಾದವನಿಟ್ಟ ನೆಲದಲ್ಲಿ ರುದ್ರಪ್ಪಜ್ಜನವರ ಸಮಾಧಿಯಾಗಿರುವ ಗುಡ್ಡದ ಓರೆಯಲ್ಲಿರುವ ಸ್ಥಳದಲ್ಲಿ ನಾಗಲಿಂಗನೆ0ಬ ಹೆಸರು ಪಡೆದು ಮಠವನ್ನು ಸ್ಥಾಪಿಸಿದರು. ಹೀಗೆ ಚಿಕ್ಕುಂಬಿಯಲ್ಲಿ ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರ ಮಠವು ಸ್ಥಾಪನೆಗೊಂಡಿತು.
ಇವರು ಕೂಡ ಅನೇಕ ಲೀಲೆಗಳನ್ನು ಮಾಡಿದರು. ಒಂದು ದಿನ ಅವರು ವಟ್ನಾಳ ಗ್ರಾಮಕ್ಕೆ ಆಗಮಿಸಲು ಅವರ ಸಹೋದರ ಅಂದರೆ ಈಗಿರುವ ಸ್ವಾಮಿಗಳ ತಂದೆಯವರಾದ ಗಂಗಪ್ಪನು ಪೂಜ್ಯರಿಗೆ ನಮಸ್ಕರಿಸಿ ಮನೆಯಲ್ಲಿ ಪತ್ನಿಯ ಮೂರನೆಯ ಹೆರಿಗೆಯಾಗಿರುವ ವಿಷಯವನ್ನು ತಿಳಿಸಿದರು. ಸಂತಸಗೊ0ಡ ನಾಗಲಿಂಗಜ್ಜನು “ಯಾವ ಮಗು.?” ಎಂದು ಕೇಳಲು”ಗಂಡು” ಎಂದಾಗ “ನಿನಗೊಂದು ಮಗುವಾಯಿತು, ನನಗೊಂದು ಮಗುವಾಯಿತು” ಎಂದು ಮಾರ್ಮಿಕವಾಗಿ ಹೇಳಿ ಸಂಚರಿಸುತ್ತ ಮರಳಿ ಚಿಕ್ಕುಂಬಿಗೆ ಬಂದರು.

ಸಹೋದರನ ವಾಣಿಯಂತೆ ತಮಗೆ ಜನಿಸಿದ ಮೂರನೆಯ ಮಗುವನ್ನು ಬಾಲ್ಯದಲಿಯ್ಲೇ ಚಿಕ್ಕುಂಬಿಗೆ ಕರೆದುಕೊಂಡು ಬಂದು ಶ್ರೀ ಮಠದಲ್ಲಿ ಬಿಟ್ಟು ಹೋದರು. ನಾಗಲಿಂಗಜ್ಜನು 1971 ರಲ್ಲಿ ಬ್ರಹ್ಮಲೀನವಾದರು.

ಸದರಿ ಮಗು ಚಿಕ್ಕುಂಬಿಯಲ್ಲಿಯೇ ವ್ಯಾಸಾಂಗ ಮಾಡುತ್ತಿರಲು ಹುಬ್ಬಳ್ಳಿ ನಾಗಶೆಟ್ಟಿಕೊಪ್ಪದ ಶಾಂಡಿಲ್ಯಾಶ್ರಮದ ಸಂಸ್ಥಾಪಕರಾದ ಶ್ರೋ.ಬ್ರ.ಸದ್ಗುರು ಶ್ರೀ ಶ್ರೀ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳವರು ಆಗಾಗ ಚಿಕ್ಕುಂಬಿಯ ಶ್ರೀ ಮಠಕ್ಕೆ ಬಂದು ಹೋಗುತ್ತಿದ್ದರು. ಅವರು ಬಾಲ್ಯಾವಸ್ಥೆಯಿಂದ ನೋಡುತ್ತಿದ್ದ ಬಾಲಕ ಗುರುಸೇವೆ ಮಾಡುತ್ತ ಬೆಳೆದಿರುವುದನ್ನು ಗಮನಿಸಿ ಗ್ರಾಮದ ಗುರುಹಿರಿಯರಲ್ಲಿ ಚರ್ಚಿಸಿ ಎಲ್ಲರ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆಯನ್ನು ಕೊಡುವ ವಿಚಾರ ಮಾಡಿ ಅದಕ್ಕೊಂದು ದಿನವನ್ನು ನಿಗದಿಗೊಳಿಸಿದರು. ಆ ಪ್ರಕಾರ ೧೯೮೫ ರಲ್ಲಿ ಹಿಂದಿನ ಶ್ರೀಗಳ ವಾಣಿಯಂತೆ ಸನ್ಯಾಸ ದೀಕ್ಷೆಯನ್ನು ಪಡೆಯುವ ಮೂಲಕ ಅಭಿನವ ನಾಗಲಿಂಗನೆ0ಬ ನಾಮಕರಣಗೊಂಡು ಈಗಿರುವ ಶ್ರೀಗಳನ್ನು ಮಠದ ಪೀಠಾಧಿಪತಿಗಳನ್ನಾಗಿ ಮಾಡಲಾಯಿತು.
ಅಂದಿನಿ0ದ ಇಂದಿನವರೆಗೂ ಶ್ರೀ ಮಠಕ್ಕೆ ಯಾವುದೇ ಅಸ್ತಿ ಅಂತಸ್ತುಗಳಿಲ್ಲದೇ ಭಕ್ತರ ಕೋರಿಕೆಯ ಮೇರೆಗೆ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತ ಬಂದಿರುವರು. ಶ್ರೀ ಅಭಿನವ ನಾಗಲಿಂಗ ಸ್ವಾಮಿಗಳು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಹತ್ತಿರದ ಚುಳಕಿ ಗ್ರಾಮದಲ್ಲಿ ಪುರಾಣ ಪ್ರವಚನ ನಡೆಸುತ್ತಿರುವರು. ಇವರು ಪ್ರವಚನಗೈಯುವ ಪ್ರಮುಖ ಪುರಾಣಗಳೆಂದರೆ ೧)ಇಟಗಿ ಶ್ರೀ ಭೀಮಾಂಬಿಕಾದೇವಿ ಪುರಾಣ, ೨)ಹೂಲಿ ಅಜ್ಜನವರ ಪುರಾಣ, ೩)ಹುಬ್ಬಳ್ಳಿಯ ಸಿದ್ದಾರೂಡಜ್ಜನ ಪುರಾಣ, ೪) ಸಿದ್ರಾಮೆಶ್ವರರ ಪುರಾಣ ೫)ನವಲಗುಂದ ನಾಗಲಿಂಗಜ್ಜನವರ ಪುರಾಣ, ೬)ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಹೀಗೆ ಹಲವು ಪುರಾಣಗಳ ಪ್ರವಚನದ ಮೂಲಕ ಭಕ್ತಜನರನ್ನು ಹೊಂದಿದ ಚಿಕ್ಕುಂಬಿ ಗ್ರಾಮದ ಶ್ರೀ ಮಠದಲ್ಲಿಯೂ ಕೂಡ ಪ್ರತಿವರ್ಷವೂ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆಯನ್ನು ನಡೆಸುತ್ತ ಬಂದಿರುವರು.

ಗದ್ದುಗೆಗೆ ಮಾದಲಿಯ ಬುತ್ತಿ ಪೂಜೆ ಅಲಂಕಾರ
ಈ ಸಂದರ್ಭದಲ್ಲಿ ಗದ್ದುಗೆಗೆ ಮಾದಲಿಯ ಬುತ್ತಿ ಪೂಜೆ ಅಲಂಕಾರ ಮಾಡುವುದು ವಾಡಿಕೆ. ಛಟ್ಟಿ ಅಮವಾಸೆಯಂದು ಕಾರ್ತಿಕೋತ್ಸವವನ್ನು ಕೂಡ ವಿಶಿಷ್ಟವಾಗಿ ಆಚರಿಸುತ್ತ ಬಂದಿದ್ದು ಪ್ರತಿ ವರ್ಷ ಒಂಬತ್ತು ದಿನಗಳ ಕಾಲ ಮಹಾನವಮಿಯನ್ನು ಆಚರಣೆಯನ್ನು ವಿಶಿಷ್ಟವಾಗಿ ಆಚರಿಸುತ್ತ ಬಂದಿದ್ದು ಶ್ರೀ ಚಿದಾನಂದ ಅವಧೂತ ವಿರಚಿತ ಶ್ರೀ ದೇವಿ ಮಹಾತ್ಮೆಯನ್ನು ಪಾರಾಯಣ ಹಾಗೂ ಶ್ರೀ ಬಗಳಾಮುಖ ಶತಕ,ಶ್ರೀ ಬಗಳಾ ಬ್ರಹ್ಮೆöÊಕ್ಯ ಸ್ತೋತ್ರ ಪಾರಾಯಣ ಅನುಷ್ಠಾನ ಸಕಲ ಸದ್ಬಕ್ತರ ಸದಿಚ್ಚೆಯ ಮೇರೆಗೆ ಜರುಗುತ್ತ ಬಂದಿರುವುದು ವಿಶೇಷವಾಗಿದೆ.


ಇಲ್ಲಿನ ಜನರು ಶ್ರೀ ಮಠಕ್ಕೆ ತಮ್ಮದೇ ಆದ ತನು-ಮನ-ಧನವನ್ನು ಅರ್ಪಿಸುವ ಜೊತೆಗೆ ಸುತ್ತಮುತ್ತಲಿನ ಸದ್ಬಕ್ತರು ಕೂಡ ಈ ಸಂಕಲ್ಪಿತ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವುದು ಇಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಾಕ್ಷಿ. ನಾಡಿನ ಅನೇಕ ಸ್ವಾಮೀಜಿಯವರು ವಿದ್ವಾಂಸರು ಸಾಹಿತಿಗಳು ಇಲ್ಲಿನ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಗೌರವವನ್ನು ಪಡೆದುಕೊಳ್ಳುವ ಜೊತೆಗೆ ತಮ್ಮ ಹಿತವಚನಗಳಿಂದ ಜನರಲ್ಲಿ ಸುಸಂಸ್ಕೃತಿಯನ್ನು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

Related Articles

ಪ್ರತಿಕ್ರಿಯೆ ನೀಡಿ

Latest Articles