ನಮಾಮಿನಾಗದೇವ

*ಜ್ಯೋತಿ ಕೋಟಗಿ ಶಿಕ್ಷಕಿ

ಸ.ಮಾ.ಪ್ರಾ. ಶಾಲೆ ತಲ್ಲೂರ

ನಿನಗಾಗಿ ಕಾಯುತಿಹರು ಎಲ್ಲ
ಹಾಲೆರೆಯಲು ಸಿದ್ಧತೆ ಮಾಡಿರುವರೆಲ್ಲ
ನಿಜವಾಗಿ ನೀ ಬಂದರೆ ಮೆಲ್ಲ
ಬಿಟ್ಟೋಡುವದು ನಿಜ ಎಲ್ಲ||

ಮಣ್ಣಿನ ನಾಗನಿಗೆ ಪೂಜೆ
ನಿಜನಾಗನಿಗೆ ಸಜೆ
ಆಚರಿಸಿಕೊಂಡು ಬಂದಿಹರು ಹೀಗೆ
ನಿಜನಾಗನಿಗೆ ಹಾಲೆರದರೆ ಹೇಗೆ||

ನಾಗಪ್ಪ ನಿನಮೇಲೆ
ಹೇಳದಷ್ಟು ಭಯ ಭಕ್ತಿ
ಅದ್ಯಾಕೋ ತಿಳಿಯದು
ಕಂಡರೆ ನಿನ್ನ ಓಡುವರು ಗ್ಯಾರಂಟಿ||

ಪುರಾಣಗಳಲಿಹುದು ನಿನಗೆ ಅಗ್ರಸ್ಥಾನ
ಭೂತಾಯಿಯ ಮಡಿಲೇ ನಿನ್ನ ವಾಸಸ್ಥಾನ
ಹರನ ಕೊರಳ ಆಭರಣ
ಹರಿಯ ಸುಖನಿದ್ರೆಯ ಸಿಂಹಾಸನ||

ಕರಮುಗಿದು ಬೇಡುವೆ ಆದಿಶೇಷ
ಕಾಪಾಡುವ ಹೊಣೆ ನಿನ್ನದೇ ದೇವ
ನಂಬಿಹೆ ನಿನ್ನನೇ ನಾಗರಾಜ
ಸದಾ ಹರಿಸೆಮ್ಮ ನಾಗದೇವ||




Related Articles

ಪ್ರತಿಕ್ರಿಯೆ ನೀಡಿ

Latest Articles