ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ ಕಾರ್ಯಾರಂಭ

ಬೆಂಗಳೂರಿನಲ್ಲಿ ಒಂದು ವಿಶಿಷ್ಟ ಸೇವಾ ಸಂಸ್ಥೆ ತಲೆಯೆತ್ತಿ ನಿಂತಿದೆ. ಹರಿದಾಸವಾಣಿ ಮೊದಲ್ಗೊಂಡು ಸಕಲ ದೇವತಾ ಭಕ್ತಿ ಸಂಗೀತ –ಭಜನೆ- ಗಮಕ ವಾಚನಗಳ ಪುನರುತ್ಥಾನಕ್ಕೆ ಕಟಿಬದ್ಧವಾದ ಈ ಸಂಸ್ಥೆಯೇ  ಸ್ವರಸಾಮ್ರಾಟ್ ಅಭಿರಾಮ್ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ. ಸುಮಾರು ಎರಡು ದಶಕಗಳಿಗೂ ಮೀರಿದಂತೆ ದಕ್ಷಿಣ ಭಾರತದ  ಉದ್ದಗಲಕ್ಕೂ ಭಗವದ್ ಕ್ಷೇತ್ರಗಳಲ್ಲಿ, ಕಿರುತೆರೆಯ ವಿವಿಧ ರಿಯಾಲಿಟಿ ಶೋಗಳಲ್ಲಿ ತನ್ನ ಶ್ರದ್ಧಾ- ಭಕ್ತಿಯುತ ಸಂಗೀತ ಗಾಯನದಿಂದ, ಭಾವಪೂರಿತ ಗಮಕ ವಾಚನಗಳಿಂದ ಸಾವಿರಾರು  ಕಲಾರಸಿಕರ, ಭಗವದ್ಭಕ್ತರ ಮನಸೂರೆಗೊಂಡಿದ್ದ ಯುವಗಾಯಕ ವಿದ್ವಾನ್ ಅಭಿರಾಮ  ಭರತವಂಶಿ ಸ್ಮರಣಾರ್ಥ ಸಂಸ್ಥಾಪಿಸಲಾದ  ಪ್ರತಿಷ್ಠಾನವಿದು! 

ನಮ್ರತೆ-ಸದ್ಗುಣಗಳ ಸಾಕಾರಮೂರ್ತಿ ಈ  ಗಾಯಕ

ವಿ. ಅಭಿರಾಮ್  ಭರತವಂಶಿ ತಮ್ಮ ನಾಲ್ಕನೇ ವಯಸ್ಸಿನಲ್ಲೇ ಭಕ್ತಿಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡು ಹತ್ತಾರು ವರುಷಗಳ ಅಭ್ಯಾಸ-ಅಧ್ಯಯನ-ಸಾಧನೆಗಳಗೈದು ಸುಮಾರು 225ಕ್ಕೂ ಮೀರಿ ಸಂಗೀತ ಕಚೇರಿಗಳ, 75ಕ್ಕೂ ಮೀರಿ ಗಮಕ ವಾಚನ ಕಾರ್ಯಕ್ರಮಗಳಲ್ಲಿ ತಮ್ಮ ವಿದ್ವತ್ ಪ್ರದರ್ಶನ ಮಾಡಿ ವಿನಮ್ರತೆಯ ಪ್ರತೀಕವಾಗಿದ್ದವರು. ಹಠಾತ್ತನೆ ಮೊನ್ನೆ ಮೇ 3ರಂದು ಕ್ರೂರಿ ಕೊರೊನಾ ಮಹಾಮಾರಿಗೆ ಬಲಿಯಾಗಿ ಶ್ರೀಕೃಷ್ಣಸಾಯುಜ್ಯ ಪಡೆದು ಇಂದಿಗೆ ದಿನಗಳು 100 ಉರುಳಿದವು! ಇದೀಗ ದುಃಖಸಾಗರದಲ್ಲಿ ಮುಳುಗಿರುವ ಅಭಿರಾಮ್ ಮಾತಾ-ಪಿತ್ರುಗಳು ಸ್ವರಸಾಮ್ರಾಟ್ ||ಅಭಿರಾಮ್  ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಹುಟ್ಟುಹಾಕಿದ್ದಾರೆ. ತನ್ಮೂಲಕ, ಹರಿದಾಸವಾಣಿ-ಭಜನೆ-ಗಮಕ ಕಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು, ರಾಜ್ಯ ಮಟ್ಟದ ಸ್ಫರ್ಧೆ-ಪ್ರತಿಭಾಶೋಧ-ಶಿಷ್ಯವೇತನಗಳ ಆಯೋಜನೆಯಲ್ಲಿದ್ದಾರೆ.

ವಿದ್ಯಾರ್ಥಿಗಳಿಗೆ  ವಾರ್ಷಿಕ ವೇತನ / ಶ್ರೇಷ್ಠತಾ ಪುರಸ್ಕಾರ

ಈ ನಿಟ್ಟಿನಲ್ಲಿ ಕಳೆದ ಮಾಸ ಭಂಡಾರಕೇರಿ ಮಠದ  ಆಶ್ರಯದಲ್ಲಿ ಜರುಗಿದ ಆನ್ಲೈನ್  ಸಂಗೀತ ಸ್ಫರ್ಧೆಯ ವಿಜೇತರಿಗೆ ಪ್ರಥಮ ಪುರಸ್ಕಾರದ ಪ್ರಾಯೋಜನ  ಅಭಿರಾಮ್ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡಲಾಯ್ತು. ಇದೇ ತಾನೆ ಉಡುಪಿಯ  ಪುತ್ತಿಗೆ ಮಠದ  ಎರಡೂ ಗುರುಕುಲಗಳ ಸುಮಾರು 36 ವಿದ್ಯಾರ್ಥಿಗಳಿಗೆ  ವಾರ್ಷಿಕ ವೇತನ / ಶ್ರೇಷ್ಠತಾ ಪುರಸ್ಕಾರಗಳನ್ನು ನೀಡಲು ಆಯೋಜನೆ ಮಾಡಲಾಗಿದೆ.

ತನ್ನ ಮೂರೂ ವಿಶಿಷ್ಟ ಗುರಿಗಳ ಹೊತ್ತು ಕರುನಾಡಿನ ಸಾಂಸ್ಕೃತಿಕ ಲೋಕದಲ್ಲಿ  ಸೇವೆ ಸಲ್ಲಿಸುವ ಸಂಕಲ್ಪ ತಾಳಿರುವ ಅಭಿರಾಮ್ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ ಮುಂದುವರೆದು ತನ್ನ ಸೇವಾವ್ಯಾಪ್ತಿಯನ್ನು ಕರ್ನಾಟಕ ರಾಜ್ಯಾದ್ಯಂತ ಹರಡಿಕೊಳ್ಳುವ  ವಿಚಾರಮಂಥನದಲ್ಲಿದೆಯೆಂದು  ಸಂಸ್ಥಾಪಕ  ಅಧ್ಯಕ್ಷರಾದ ಡಾ. ಸುದರ್ಶನ ಭಾರತೀಯ ಅವರು ಮಾಹಿತಿ ಹಂಚಿಕೊಂಡಿದ್ದಾರೆ

Related Articles

5 COMMENTS

  1. ಸರ್ ಇದು ಒಂದು ಅದ್ಭುತವಾದ ಕಾರ್ಯಕ್ರಮ, ನಾವೂ ನಿಮ್ಮ ಜೊತೆಗೆ ಇದ್ದೇವೆ……

    • ಹರಿ ಓಂ ! ಅನಂತ ಧನ್ಯವಾದಗಳು ಜೀ ! ಕಾವ್ಯ ವಾಚನ ಯಾ ಗಮಕ ಕಲೆ ನಶಿಸಿಹೋಗುತಿರುವ ಈ ಕಾಲಘಟ್ಟದಲ್ಲಿ ಬನ್ನಿ , ನಾವೆಲ್ಲಾ ಸೇರಿ ಒಟ್ಟಾಗಿ ನಮ್ಮ ನಾಡಿನ
      ಯುವ ಜನತೆಯಲ್ಲಿ ಗಮಕದ ಪುನರುತ್ಥಾನ ಮಾಡೋಣಾ 👍🧡🕉️🇮🇳

  2. ಒಂದು ವಿಶಿಷ್ಟವಾದ ಆಲೋಚನೆಗೆ ಮೂರ್ತ ರೂಪವನ್ನು ಕೊಟ್ಟಿರುವಿರಿ. ಅವನ ವ್ಯಕ್ತಿತ್ವಕ್ಕೊಂದು ಹೃದಯ ಪೂರ್ವಕ ನಮನ. ಧನ್ಯವಾದಗಳು.
    ನಿಮ್ಮೊಂದಿಗೆ ನಾವಿದ್ದೇವೆ.

  3. ಹರೇ ಶ್ರೀನಿವಾಸ ! ಧನ್ಯೋಸ್ಮಿ !! ಅಭಿರಾಮ್ ಕಲಾ ಪ್ರತಿಷ್ಠಾನದ ಮುಲಕ ಅಸಾಧ್ಯವಾದುದನ್ನು ಸಾಧಿಸುವ ಗುರಿ ಮುಂದಿದೆ !! ನಿಮ್ಮ ಸಹಾಯವೂ ಅತ್ಯವಶ್ಯ 👍
    ಧನ್ಯವಾದ!!

ಪ್ರತಿಕ್ರಿಯೆ ನೀಡಿ

Latest Articles