ರೇಣುಕಾ ದೇವಿ

ಎಲ್ಲರ ತಾಯಿ
ಗುಡ್ಡದ ಮಹಾದೇವಿ
ಜೋಗತಿ ಅಮ್ಮ

ಸವದತ್ತಿಯ
ಹಿರಿಮೆ ನೀನು ಮಾತೆ
ಸೌಭಾಗ್ಯದಾತೆ

ಏಳುಕೊಳ್ಳದ
ಸಿರಿ ಎಲ್ಲಮ್ಮದೇವಿ
ತಾಯಿ ಮುತ್ತೈದೆ

ಪತಿಯಕೋಪ
ಕತ್ತಸೀಳಿ ನೆತ್ತರ
ಹರಿಸಿತಲ್ಲ

ತಾಯಿಗೆ ಜೀವ
ಮರುಕಳಿಸಿದಾತ
ಪರಶುರಾಮ

ಸಹನಾ ಮೂರ್ತಿ
ಜಮದಗ್ನಿಯ ಸತಿ
ರೇಣುಕಾ ದೇವಿ

ಎಲ್ಲಮ್ಮನ ಗುಡ್ಡ
ಸದಾ ಹೆಸರಾಯಿತು
ಇತಿಹಾಸದಿ.

* ಶ್ರೀಮತಿ ಜ್ಯೋತಿ ಕೋಟಗಿ
ಶಿಕ್ಷಕಿ, ಸ ಮಾ ಪ್ರಾ ಶಾಲೆ ತಲ್ಲೂರ.

Related Articles

ಪ್ರತಿಕ್ರಿಯೆ ನೀಡಿ

Latest Articles