*ಗುರುದೇವಿ ಮಲಕಣ್ಣವರ
ಗಾಂಧೀಜಿ.....ಶಾಸ್ತ್ರೀಜೀ..... ಹೆತ್ತೊಡಲಿನ ಮಾಣಿಕ್ಯಗಳು ಹೊತ್ತೊಡಲಿನ ಮುಕುಟ ಮಣಿಗಳು ಪ್ರತೀ ಭಾರತೀಯ ರಕ್ತ ಕಣದ ಚೇತನಗಳು ಅಳಿದರೂ ಕಾಯ; ಉಳಿಯುವುದು ಕೀರ್ತಿ, ಈ ಉಕ್ತಿಯ ನಾಯಕರು.... ಎಂಥಹ ಸಂದೇಶ ನೀಡಿದಿರಿ ನೀವು,!! ಜೀವನದ ಸಾರ್ಥಕತೆಯ ಪಡೆದಿರಿ. ಭಾರತಾಂಬೆಯ ಕೀರ್ತಿ ಶಿಖರದ ಮುತ್ತುಗಳು ನಿಸ್ವಾರ್ಥ ಬದುಕಿನ ರುಚಿ ಸವಿದವರು ಜಗತ್ತಿಗೇ ಬೆಳಕನಿತ್ತವರು! ಭರತಭೂಮಿಯ ಮಣ್ಣಿನ ಪಾವಿತ್ರ್ಯತೆ ಹೆಚ್ಚಸಿದವರು!! ಪುಸ್ತಕದ ಅಕ್ಷರಗಳಿಂದ ಇಂದಿನ ಪೀಳಿಗೆಗೆ ಪರಿಚಯಿಸುತ್ತದ್ದೇವೆ ನಿಮ್ಮನ್ನು; ಈ ಜಗದ ಕಣ್ಣುಗಳಿಗೆ ಬೆಳಕ ನೀಡಲು ಹುಟ್ಟಿಬರಬೇಕಿದೆ ನೀವೇ ಇನ್ನು!! ಓ! ದಿವ್ಯತೆಯ ಧನ್ಯತಾ ಮೂರ್ತಿಗಳೇ ಉದಯಿಸಿ ಬನ್ನಿ ಸಾಕಿನ್ನು; ನಿಮ್ಮ ದಾರಿಕಾಯುತಾ ಮಂಕಾಗಿದೆ ಭಾರತಮಾತೆಯ ಕಣ್ಣು!! ಈ ಚಿತ್ರಪಟಗಳ ಮೂಲಕ ಪರಿಚಯಿಸಿದ್ದು ಸಾಕು: ನಿಮ್ಮ ದರುಶನಕ್ಕಾಗಿ ಕಾಯುತಿವೆ; ಮುಗ್ಧ ಮಕ್ಕಳು, ಅವರಿಗೆ ನೀವೇ ಬೇಕು; ಬನ್ನಿ, ನಾಯಕತ್ವದ ಅರ್ಥ ತಿಳಿಸಲು, ಬನ್ನಿ,ಅಹಿಂಸೆಯ ಮಂತ್ರ ಕಲಿಸಲು, ಬನ್ನಿ,ನಿಸ್ತೇಜಗೊಂಡಿಹ ಮಣ್ಣಕಣಗಳಿಗೆ, ಫಲವತ್ತತೆ ತುಂಬಲು, ಜಯಂತಿ ಬೇಡ,ಜನ್ಮದಿನ....ಆಚರಣೆಗಾಗಿ ಕಾಯುತಿಹೆವು ಬನ್ನಿ.... ಓ!ದಿವ್ಯ ಚೇತನಗಳೇ... ಧರೆಗಿಳಿದು ಬನ್ನಿ..!